ADVERTISEMENT

ಕಮಲನಗರ | ಗಾಂಜಾ ಗಿಡ ಜಪ್ತಿ: ಆರೋಪಿ ಬಂಧನ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2025, 4:39 IST
Last Updated 7 ಅಕ್ಟೋಬರ್ 2025, 4:39 IST
ಫೋಟೋ ಕ್ಯಾಪ್ಷನ್ : 6ಕೆಎಂಎಲ್02 : ಕಮಲನಗರ ತಾಲ್ಲೂಕಿನ ಸಾವಳಿ ಗ್ರಾಮದ ಹೊಲವೊಂದರಲ್ಲಿ ಸೋಮವಾರ ಖಚಿತ ಮಾಹಿತಿ ಮೆರೆಗೆ ಅಕ್ರಮವಾಗಿ ಬೆಳೆದಿದ್ದ ಗಾಂಜಾ ಗಿಡಗಳನ್ನು ಪೊಲೀಸರು ಜಪ್ತಿ ಮಾಡಿಕೊಂಡಿದ್ದಾರೆ.
ಫೋಟೋ ಕ್ಯಾಪ್ಷನ್ : 6ಕೆಎಂಎಲ್02 : ಕಮಲನಗರ ತಾಲ್ಲೂಕಿನ ಸಾವಳಿ ಗ್ರಾಮದ ಹೊಲವೊಂದರಲ್ಲಿ ಸೋಮವಾರ ಖಚಿತ ಮಾಹಿತಿ ಮೆರೆಗೆ ಅಕ್ರಮವಾಗಿ ಬೆಳೆದಿದ್ದ ಗಾಂಜಾ ಗಿಡಗಳನ್ನು ಪೊಲೀಸರು ಜಪ್ತಿ ಮಾಡಿಕೊಂಡಿದ್ದಾರೆ.   

ಕಮಲನಗರ: ತಾಲ್ಲೂಕಿನ ಸಾವಳಿ ಗ್ರಾಮದ ಹೊಲವೊಂದರಲ್ಲಿ ಗಾಂಜಾ ಗಿಡ ಬೆಳೆದಿರುವ ಖಚಿತ ಮಾಹಿತಿ ಮೆರೆಗೆ ದಾಳಿ ನಡೆಸಿದ ಪೊಲೀಸರು, 51 ಗಾಂಜಾ ಗಿಡಗಳನ್ನು ಜಪ್ತಿ ಮಾಡಿದ್ದಾರೆ.

ಈ ಸಂಬಂಧ ಆರೋಪಿ ಸಂತೋಷ ಬಾಗದೆ ಈತನನ್ನು ಬಂಧಿಸಿ. ₹ 15.10 ಲಕ್ಷ ಮೌಲ್ಯದ 15.1 ಕೆ.ಜಿ ಗಾಂಜಾ ಗಿಡಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

‘ಎಸ್‍ಪಿ ಪ್ರದೀಪ ಗುಂಟಿ ಅವರ ಮಾರ್ಗದರ್ಶನದಲ್ಲಿ ಡಿವೈಎಸ್‍ಪಿ ಶಿವಾನಂದ ಪವಾಡಶೆಟ್ಟಿ ಹಾಗೂ ತಹಶೀಲ್ದಾರ್‌ ಅಮಿತಕುಮಾರ ಕುಲಕರ್ಣಿ, ಸಿಪಿಐ ಶ್ರೀಕಾಂತ ಅಲ್ಲಾಪೂರ, ಪಿಎಸ್‍ಐ ಆಶಾ ರಾಠೋಡ ಸಮ್ಮುಖದಲ್ಲಿ ಪೊಲೀಸರ ತಂಡ, ಈ ದಾಳಿ ನಡೆಸಿ ಆರೋಪಿ ಸಂತೋಷ ಬಾಗದೆ ತನ್ನ ಸರ್ವೆ ನಂ.18/2ರಲ್ಲಿ ಸುಮಾರು 51 ಗಾಂಜಾ ಗಿಡಗಳು ಬೆಳೆದಿರುವುದು ಪತ್ತೆ ಮಾಡಿ. ಅವುಗಳನ್ನು ವಶಕ್ಕೆ ಪಡೆದಿದ್ದಾರೆ. ಈ ಕುರಿತು ಕಮಲನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT
ಫೋಟೋ ಕ್ಯಾಪ್ಷನ್ : 6ಕೆಎಂಎಲ್02 : ಕಮಲನಗರ ತಾಲ್ಲೂಕಿನ ಸಾವಳಿ ಗ್ರಾಮದ ಹೊಲವೊಂದರಲ್ಲಿ ಸೋಮವಾರ ಖಚಿತ ಮಾಹಿತಿ ಮೆರೆಗೆ ಅಕ್ರಮವಾಗಿ ಬೆಳೆದಿದ್ದ ಗಾಂಜಾ ಗಿಡಗಳನ್ನು ಪೊಲೀಸರು ಜಪ್ತಿ ಮಾಡಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.