ಚಿಟಗುಪ್ಪ: ತಾಲ್ಲೂಕಿನಾದ್ಯಂತ ಸೋಮವಾರ ಉತ್ತಮ ಮಳೆ ಸುರಿಯಿತು. ಕಾದು ಕಾವಲಿಯಂತಾಗಿದ್ದ ಇಳೆ ತಂಪಾಯಿತು. ಸುಡು ಬಿಸಿಲಿನಿಂದ ರೋಸಿ ಹೋಗಿದ್ದ ಜನ ನೆಮ್ಮದಿಯ ನಿಟ್ಟುಸಿರು ಬಿಟ್ಟರು.
ಮಧ್ಯ ರಾತ್ರಿಯಿಂದ ಬೆಳಿಗ್ಗೆ ವರೆಗೂ ಮಳೆ ಸುರಿಯಿತು. ರಾತ್ರಿ ತಂಪಾದ ಗಾಳಿ ಬೀಸಿದ್ದರಿಂದ ಜನ ನೆಮ್ಮದಿಯಿಂದ ನಿದ್ರೆ ಮಾಡಿದರು. ಕೆಲ ರಸ್ತೆಗಳ ಮೇಲೆ ನೀರು ಸಂಗ್ರಹಗೊಂಡಿತು. ಚರಂಡಿಗಳು ಉಕ್ಕಿ ಹರಿದವು.
ಮೂರು ಗಂಟೆ ಸತತವಾಗಿ ಸುರಿದ ಮಳೆ ಬೇಸಿಗೆಯನ್ನು ಮರೆಯುವಂತೆ ಮಾಡಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.