ಔರಾದ್: ತಾಲ್ಲೂಕಿನ ಕರಂಜಿ (ಕೆ) ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆ ಶಿಕ್ಷಕ ವಿಜಯಕುಮಾರ ಧೊಂಡಿಬಾ ಟಿಳೆಕರ್ (45) ಅವರ ಹತ್ಯೆ ಮಾಡಲಾಗಿದೆ.
ಔರಾದ್ ಸಮೀಪದ ನರಸಿಂಹಪುರ ತಾಂಡಾದ ಮಾರ್ಗದಲ್ಲಿ ಮಂಗಳವಾರ ಅವರ ಶವ ಪತ್ತೆಯಾಗಿದೆ. ಮುಖ ಹಾಗೂ ಶರೀರದ ಕೆಳ ಭಾಗದಲ್ಲಿ ಗಾಯದ ಗುರುತುಗಳಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಜಿಲ್ಲಾ ಪೋಲಿಸ್ ವರಿಷ್ಠ ಡಿ.ಎಲ್. ನಾಗೇಶ್, ಸಿಪಿಐ ರವೀಂದ್ರನಾಥ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಔರಾದ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.