
ಕಮಲನಗರ: ತಾಲ್ಲೂಕಿನ ಖೇಡ್ ಗ್ರಾಮದ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಈಚೆಗೆ ಸಾಮಾಜಿಕ ಲೆಕ್ಕ ಪರಿಶೋಧನಾ ಮತ್ತು ಗ್ರಾಮ ಸಭೆ ನಡೆಯಿತು.
ಲೆಕ್ಕ ಪರಿಶೋಧನೆ ಅಧಿಕಾರಿ ಆನಂದ ಹೊಸಮಣಿ ಮಾತನಾಡಿ, ‘ಸಾಮಾಜಿಕ ಲೆಕ್ಕ ಪರಿಶೋಧನೆಯ ಗ್ರಾಮ ಸಭೆಯು ಗ್ರಾಮೀಣಾಭಿವೃದ್ಧಿ ಯೋಜನೆಗಳಲ್ಲಿ ಪಾರದರ್ಶಕತೆ ಮತ್ತು ಹೊಣೆಗಾರಿಕೆ ಖಚಿತಪಡಿಸಿಕೊಳ್ಳಲು ಇರುವ ಶಕ್ತಿಯುತವಾದ ವ್ಯವಸ್ಥೆಯಾಗಿದೆ’ ಎಂದು ಹೇಳಿದರು.
ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಗ್ರಾಮಗಳಲ್ಲಿ 2024-25ನೇ ಸಾಲಿನ ನರೇಗಾ ಮತ್ತು 15ನೇ ಹಣಕಾಸು ಯೋಜನೆಯಡಿ ಕೈಗೊಂಡಿರುವ ಕಾಮಗಾರಿಗಳ ವರದಿ ಮಂಡಿಸಲಾಯಿತು.
ಪಿಡಿಒ ರಾಮದಾಸ ಬೇಲೂರೆ, ಗ್ರಾ.ಪಂ. ಅಧ್ಯಕ್ಷ ಹಣಮಂತ ದಾನಾ, ಗ್ರಾಮಸ್ಥರಾದ ಅನೀಲಕುಮಾರ ಸಂಗಣ್ಣ, ರಾಮ ಭಾಲೆಕರ್, ಸುನೀಲ ಗೋರ್ಟೆ ಹಾಗೂ ಇನ್ನಿತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.