ADVERTISEMENT

ಬೀದರ್: ಹಡಪದ ಅಪ್ಪಣ್ಣ ಜಯಂತಿ ಆಚರಣೆ

​ಪ್ರಜಾವಾಣಿ ವಾರ್ತೆ
Published 25 ಜುಲೈ 2021, 3:12 IST
Last Updated 25 ಜುಲೈ 2021, 3:12 IST
ಬೀದರ್‌ ಸಿಎಂಸಿ ಕಾಲೊನಿ ವೃತ್ತದಲ್ಲಿ ಹಡಪದ ಅಪ್ಪಣ್ಣ ಜಯಂತಿ ಆಚರಿಸಲಾಯಿತು
ಬೀದರ್‌ ಸಿಎಂಸಿ ಕಾಲೊನಿ ವೃತ್ತದಲ್ಲಿ ಹಡಪದ ಅಪ್ಪಣ್ಣ ಜಯಂತಿ ಆಚರಿಸಲಾಯಿತು   

ಬೀದರ್: ನಗರದ ಸಿಎಂಸಿ ಕಾಲೊನಿಯ ಹಡಪದ ಅಪ್ಪಣ್ಣ ವೃತ್ತದಲ್ಲಿ ಜಿಲ್ಲಾ ಹಡಪದ ಅಪ್ಪಣ್ಣ ಸಮಾಜ ಸಂಘ ಹಾಗೂ ಜಿಲ್ಲಾ ಸವಿತಾ ಸಮಾಜದ ವತಿಯಿಂದ ಶನಿವಾರ ಹಡಪದ ಅಪ್ಪಣ್ಣ ಅವರ ಜಯಂತಿ ಆಚರಿಸಲಾಯಿತು.

ಹಡಪದ ಅಪ್ಪಣ್ಣ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಮಾಲಾರ್ಪಣೆ ಮಾಡಿ ಗೌರವಿಸಲಾಯಿತು.

ಜಿಲ್ಲಾ ಹಡಪದ ಸಮಾಜ ಸಂಘದ ಅಧ್ಯಕ್ಷ ಪ್ರಭುರಾವ್ ತರನಳ್ಳಿ, ಪ್ರಧಾನ ಕಾರ್ಯದರ್ಶಿ ಶರಣಪ್ಪ ಚಂದನಹಳ್ಳಿ, ಜಿಲ್ಲಾ ಸವಿತಾ ಸಮಾಜದ ಅಧ್ಯಕ್ಷ ಉಮೇಶ ಗೋಂದಗಾಂವಕರ್, ಗಂಧರ್ವ ಸೇನಾ, ಸುಭಾಷ ಹಳ್ಳಿಖೇಡ(ಕೆ), ಹಣಮಂತರಾವ್ ಹುಣಜಿ, ವಿಜಯಕುಮಾರ ಹೀಲಾಲಪೂರ, ಗುರಪ್ಪ ತರನಳ್ಳಿ, ಶಿವರಾಜ ಹೊಚಕನಳ್ಳಿ, ಮಹೇಶ ಹಳ್ಳಿಖೇಡ(ಬಿ), ಮಡೆಪ್ಪ ಮೈಲೂರ, ನಾಗೇಶ ಹಳ್ಳಿಖೇಡ(ಬಿ), ಭೀಮರಾವ್ ಮಂಗಲಗಿ ಪಾಲ್ಗೊಂಡಿದ್ದರು.

ADVERTISEMENT

ನಂತರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ರುದ್ರೇಶ ಘಾಳಿ ಅವರು ಹಡಪದ ಅಪ್ಪಣ್ಣ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.