ADVERTISEMENT

ಸನ್ನಡತೆಯೇ ಮನುಷ್ಯನ ನಿಜವಾದ ಸಂಪತ್ತು

ಹಲಬರ್ಗಾ: ಧರ್ಮಸಭೆಯಲ್ಲಿ ಹುಲಸೂರಿನ ಶಿವಾನಂದ ಸ್ವಾಮೀಜಿ ಅಭಿಮತ

​ಪ್ರಜಾವಾಣಿ ವಾರ್ತೆ
Published 11 ಜನವರಿ 2023, 5:45 IST
Last Updated 11 ಜನವರಿ 2023, 5:45 IST
ಭಾಲ್ಕಿ ತಾಲ್ಲೂಕಿನ ಹಲಬರ್ಗಾ ಗ್ರಾಮದಲ್ಲಿ ನಡೆದ ಧರ್ಮಸಭೆಯನ್ನು ಹುಲಸೂರಿನ ಶಿವಾನಂದ ಸ್ವಾಮೀಜಿ ಉದ್ಘಾಟಿಸಿದರು. ಹಾವಗಿಲಿಂಗೇಶ್ವರ ಶಿವಾಚಾರ್ಯರು ಹಾಗೂ ಇತರರು ಇದ್ದರು
ಭಾಲ್ಕಿ ತಾಲ್ಲೂಕಿನ ಹಲಬರ್ಗಾ ಗ್ರಾಮದಲ್ಲಿ ನಡೆದ ಧರ್ಮಸಭೆಯನ್ನು ಹುಲಸೂರಿನ ಶಿವಾನಂದ ಸ್ವಾಮೀಜಿ ಉದ್ಘಾಟಿಸಿದರು. ಹಾವಗಿಲಿಂಗೇಶ್ವರ ಶಿವಾಚಾರ್ಯರು ಹಾಗೂ ಇತರರು ಇದ್ದರು   

ಭಾಲ್ಕಿ: ‘ಸನ್ನಡತೆಯೇ ಮನುಷ್ಯನ ನಿಜವಾದ ಸಂಪತ್ತು’ ಎಂದು ಹುಲಸೂರಿನ ಶಿವಾನಂದ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ಹಲಬರ್ಗಾ ಗ್ರಾಮದ ರಾಚೋಟೇಶ್ವರ ಸಂಸ್ಥಾನ ಮಠದಲ್ಲಿ ಜಾತ್ರಾ ಮಹೋತ್ಸವದ ಪ್ರಯುಕ್ತ ನಡೆದ ಧರ್ಮಸಭೆ ಉದ್ಘಾಟಿಸಿ ಮಾತನಾಡಿದರು.

ಆಸ್ತಿ, ಅಂತಸ್ತು, ಅಧಿಕಾರಗಳು ಶಾಶ್ವತ ಅಲ್ಲ. ಜೀವನದ ಸಾರ್ಥಕತೆಗಾಗಿ ಮನುಷ್ಯ ಉತ್ತಮ ಆಚಾರ, ವಿಚಾರಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.

ADVERTISEMENT

ನೇತೃತ್ವ ವಹಿಸಿದ್ದ ಮಠದ ಪೀಠಾಧಿಪತಿ ಹಾವಗಿಲಿಂಗೇಶ್ವರ ಶಿವಾಚಾರ್ಯ ಮಾತನಾಡಿ,‘ಮನುಷ್ಯನ ನಡೆ-ನುಡಿ ಒಂದೇ ಆಗಿರಬೇಕು’ ಎಂದು ಹೇಳಿದರು.

ಮಾತಿನ ಮಹತ್ವ ಬಹಳ ಇದೆ. ಆದ್ದರಿಂದಲೇ ಶರಣರು ಮಾತನ್ನು ಜ್ಯೋತಿರ್ಲಿಂಗಕ್ಕೆ ಹೋಲಿಸಿದ್ದಾರೆ. ಪ್ರಜ್ಞಾ ಪೂರ್ವಕವಾಗಿ ಮಾತುಗಳನ್ನು ಆಡಬೇಕು. ಮಾತುಗಳು ಎದು ರಿನವರ ಮನಸ್ಸು ಅರಳಿಸುವಂತಿರಬೇಕು. ಬೇಸರ, ದುಃಖ ದೂರ ಮಾ ಡುವಂತಿರಬೇಕು. ಬೇರೆಯವರಿಗೆ ನೋವು ಉಂಟು ಮಾಡುವಂತೆ ಇರಬಾರದು ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.