ಬೀದರ್: ಬಸವ ಕೇಂದ್ರದಿಂದ ನಗರದಲ್ಲಿ ವಚನ ಪಿತಾಮಹ ಫ.ಗು. ಹಳಕಟ್ಟಿ ಜಯಂತಿ, ಶರಣ ಸಂಗಮ ಹಾಗೂ ‘ಕವಿಗಳು ಕಂಡ ಬಸವಣ್ಣ’ ಪುಸ್ತಕ ಬಿಡುಗಡೆ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.
ಸರ್ಕಾರಿ ಮತ್ತು ಅರೆ ಸರ್ಕಾರಿ ನೌಕರರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ರಾಜೇಂದ್ರಕುಮಾರ ಗಂದಗೆ ಉದ್ಘಾಟಿಸಿ, ಬಸವತತ್ವವನ್ನು ಸಮಾಜಕ್ಕೆ ಪರಿಚಯಿಸಿದ ಕೀರ್ತಿ ಫ.ಗು. ಹಳಕಟ್ಟಿ ಅವರಿಗೆ ಸಲ್ಲುತ್ತದೆ. ಅವರ ಕಾರ್ಯ ಅಮೋಘವಾದುದು ಎಂದರು.
ಸುವರ್ಣಾ ಚಿಮಕೋಡೆ ಮಾತನಾಡಿ, ವಕೀಲಿ ವೃತ್ತಿ ಬಿಟ್ಟು ವಚನ ಸಂಶೋಧನೆ ಮಾಡಲು ಜೀವನವನೇ ಮುಡುಪಾಗಿಟ್ಟ ಹಳಕಟ್ಟಿ ಬಸವತತ್ವದ ಅನರ್ಘ್ಯ ರತ್ನ ಎಂದು ವರ್ಣಿಸಿದರು.
ಸಾಹಿತಿ ಸಿದ್ರಾಮಪ್ಪ ಮಾಸಿಮಾಡೆ ಪುಸ್ತಕ ಬಿಡುಗಡೆಗೊಳಿಸಿದರು. ಬಸವ ಕೇಂದ್ರದ ಅಧ್ಯಕ್ಷ ಶರಣಪ್ಪ ಮಿಠಾರೆ, ಹುಲಸೂರಿನ ಶಿವಾನಂದ ಸ್ವಾಮೀಜಿ, ಯುವ ಬಸವ ಕೇಂದ್ರದ ಅಧ್ಯಕ್ಷ ಸುರೇಶ ಚನಟ್ಟಿ, ಸೋಮನಾಥ ಕಂದಗೂಳೆ, ಶೈಲಜಾ ಚಳಕಾಪೂರೆ, ವಿರೂಪಾಕ್ಷ ದೇವರು, ರೇವಣಪ್ಪ ಮೂಲಗೆ, ರೇಖಾ ನಿಂಗದಳ್ಳಿ, ವೈಜಿನಾಥ ಸಜ್ಜನಶೆಟ್ಟಿ, ಶಿವಶಂಕರ ಟೋಕರೆ ಇದ್ದರು.
ಉಮೇಶ ಪಾಟೀಲ ದಂಪತಿ, ಸುಪ್ರಿಯಾ ಆನಂದ ಪಾಟೀಲ, ಸುವರ್ಣ ಶರಣಪ್ಪ ಚಿಮಕೋಡೆ ದಂಪತಿಯನ್ನು ಸನ್ಮಾನಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.