ಬೀದರ್: ನಗರದಲ್ಲಿ ಸೋಮವಾರ ಸುರಿದ ಭಾರಿ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿತು.
ಮಧ್ಯಾಹ್ನ ಎರಡು ಗಂಟೆಗೆ ಶುರುವಾರ ಬಿರುಸಿನ ಮಳೆ, ಸಂಜೆ 5ರ ವರೆಗೆ ಎಡೆಬಿಡದೇ ಸುರಿಯಿತು. ಆನಂತರ ಜಿಟಿಜಿಟಿಯಾಗಿ ಮುಂದುವರೆಯಿತು. ಜೋರು ಮಳೆಯ ಪರಿಣಾಮ ನಗರದ ಪ್ರಮುಖ ರಸ್ತೆಗಳಲ್ಲಿ ಹೊಳೆಯಂತೆ ನೀರು ಹರಿಯಿತು. ವಾಹನಗಳ ಸಂಚಾರಕ್ಕೆ ತೊಡಕಾಯಿತು.
ನಗರದ ಹಾರೂರಗೇರಿ ಕ್ರಾಸ್, ಬೊಮ್ಮಗೊಂಡೇಶ್ವರ ವೃತ್ತ, ಮೈಲೂರ ಕ್ರಾಸ್, ಕುಂಬಾರವಾಡ ಕ್ರಾಸ್, ಗುಂಪಾ ರಿಂಗ್‌ರೋಡ್ ಸೇರಿದಂತೆ ಹಲವೆಡೆ ಅಪಾರ ನೀರು ರಸ್ತೆಯ ಮೇಲೆ ಹರಿಯಿತು. ಬೆಳಿಗ್ಗೆ ಕೆಲಕಾಲ ಜಿಟಿಜಿಟಿ ಮಳೆಯಾಗಿ, ಮಧ್ಯಾಹ್ನದ ವರೆಗೆ ಬಿಡುವು ಕೊಟ್ಟಿತು. ಈ ವೇಳೆ ನವರಾತ್ರಿ ಹಬ್ಬದ ಖರೀದಿ ನಡೆಯಿತು. ಪ್ರಮುಖ ಮಾರುಕಟ್ಟೆಗಳಲ್ಲಿ ಜನಸಂದಣಿ ಹೆಚ್ಚಿತ್ತು.
ಜಿಲ್ಲೆಯ ಭಾಲ್ಕಿಯಲ್ಲೂ ಬಿರುಸಿನ ಮಳೆಯಾಗಿದೆ. ಬಸವಕಲ್ಯಾಣ, ಔರಾದ್, ಹುಮನಾಬಾದ್, ಚಿಟಗುಪ್ಪ ತಾಲ್ಲೂಕುಗಳಲ್ಲೂ ಮಳೆಯಾಗಿರುವುದು ವರದಿಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.