ADVERTISEMENT

ಬೀದರ್‌: ನಾಲ್ಕನೇ ದಿನವೂ ಮುಂದುವರಿದ ಮಳೆ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2025, 6:30 IST
Last Updated 14 ಸೆಪ್ಟೆಂಬರ್ 2025, 6:30 IST
ಶನಿವಾರ ಸುರಿವ ಮಳೆಯಲ್ಲಿ ಬೈಕ್‌ ಸವಾರರಿಬ್ಬರೂ ಕೊಡೆ ಹಿಡಿದುಕೊಂಡು ಬೀದರ್‌ನ ಚೌಬಾರ ಮುಖ್ಯರಸ್ತೆಯಿಂದ ಹಾದು ಹೋದರು
ಶನಿವಾರ ಸುರಿವ ಮಳೆಯಲ್ಲಿ ಬೈಕ್‌ ಸವಾರರಿಬ್ಬರೂ ಕೊಡೆ ಹಿಡಿದುಕೊಂಡು ಬೀದರ್‌ನ ಚೌಬಾರ ಮುಖ್ಯರಸ್ತೆಯಿಂದ ಹಾದು ಹೋದರು   

ಪ್ರಜಾವಾಣಿ ಚಿತ್ರಗಳು: ಲೋಕೇಶ ವಿ. ಬಿರಾದಾರ

ಬೀದರ್‌: ಸತತ ನಾಲ್ಕನೇ ದಿನವೂ ಜಿಲ್ಲೆಯ ಕೆಲವೆಡೆ ಮಳೆಯಾಗಿದೆ.

ಬೀದರ್‌ ನಗರ ಸೇರಿದಂತೆ ಗ್ರಾಮೀಣ ಭಾಗಗಳಲ್ಲಿ ಶನಿವಾರ ಬೆಳಿಗ್ಗೆಯಿಂದ ದಟ್ಟ ಕಾರ್ಮೋಡ ಆವರಿಸಿಕೊಂಡಿತು. ದಿನವಿಡೀ ಆಗಾಗ ಬಿಟ್ಟು ಬಿಟ್ಟು ಮಳೆ ಸುರಿಯಿತು. ಸಂಜೆ 6ರ ಬಳಿಕ ಬಿರುಸಿನ ಮಳೆಯಾಯಿತು.

ADVERTISEMENT

ದೈನಂದಿನ ಕೆಲಸ ಮುಗಿಸಿಕೊಂಡು ಮನೆ ಸೇರುತ್ತಿದ್ದವರಿಗೆ ಮಳೆಯಿಂದ ಸಮಸ್ಯೆ ಎದುರಾಯಿತು. ಮನ್ನಳ್ಳಿ ರಸ್ತೆಯ ಹಾರೂರಗೇರಿ, ವಿದ್ಯಾನಗರ ಸೇರಿದಂತೆ ಹಲವೆಡೆ ರಸ್ತೆಯ ಮೇಲೆ ನೀರು ಸಂಗ್ರಹಗೊಂಡಿದ್ದರಿಂದ ವಾಹನ ಸಂಚಾರ ನಿಧಾನಗೊಂಡಿತು. 

ತಾಲ್ಲೂಕಿನ ಅಮಲಾಪೂರ, ಯದಲಾಪೂರ, ಚಿಟ್ಟಾ, ಘೋಡಂಪಳ್ಳಿ, ಗೋರನಳ್ಳಿ, ಗುನ್ನಳ್ಳಿ, ಚಿಟಗುಪ್ಪದ ಕೆಲವು ಭಾಗ ಸೇರಿದಂತೆ ಹಲವೆಡೆ ಮಳೆಯಾಗಿದೆ. ಕಳೆದ ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.

ಬೀದರ್‌ನ ಮಹಮೂದ್‌ ಗಾವಾನ್‌ ಸ್ಮಾರಕ ಎದುರಿನ ರಸ್ತೆಯಲ್ಲಿ ಮಳೆಯಲ್ಲಿ ಕೊಡೆ ಹಿಡಿದುಕೊಂಡು ಹೆಜ್ಜೆ ಹಾಕಿದ ಜನ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.