
ಬೀದರ್: ಕಳೆದ ಎರಡ್ಮೂರು ದಿನಗಳಿಂದ ಸುರಿಯುತ್ತಿರುವ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ.
ದೀಪಾವಳಿ ಹಬ್ಬ ಆಚರಿಸಿದ ಜನ ಇನ್ನೇನು ಮಳೆಗಾಲ ಮುಗಿಯಿತು ಎಂದು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದರು. ಆದರೆ, ಪುನಃ ಮಳೆ ಶುರುವಾದ ಕಾರಣ ಜನರ ದೈನಂದಿನ ಕೆಲಸಗಳಿಗೆ ತೊಡಕಾಗಿದೆ.
ಬೆಳಿಗ್ಗೆ ಕಚೇರಿ ಕೆಲಸ, ಶಾಲಾ ಕಾಲೇಜಿಗೆ ಹೋಗುವಾಗಲೂ ಸಮಸ್ಯೆ ಎದುರಿಸಿದ ಜನ ಹಾಗೂ ವಿದ್ಯಾರ್ಥಿಗಳು, ಸಂಜೆ ಪುನಃ ಮನೆ ಸೇರುವಾಗಲೂ ಸಮಸ್ಯೆ ಎದುರಿಸಿದರು.
ಮಂಗಳವಾರ ಸಂಜೆ ಆರಂಭಗೊಂಡ ಮಳೆ ಬುಧವಾರ ದಿನವಿಡೀ ಸುರಿಯಿತು. ಕೆಲವೊಮ್ಮೆ ಜಿಟಿಜಿಟಿ, ಕೆಲವು ಸಲ ಜೋರಾಗಿ ಮಳೆ ಆಯಿತು. ಬೀದರ್ ನಗರ ಸೇರಿದಂತೆ ತಾಲ್ಲೂಕಿನ ಚಿಟ್ಟಾ, ಘೋಡಂಪಳ್ಳಿ, ಶಹಾಪುರ, ಅಮಲಾಪೂರ, ಬೆಳ್ಳೂರ ಸೇರಿದಂತೆ ಹಲವೆಡೆ ಮಳೆಯಾಗಿದೆ.
ಜಿಲ್ಲೆಯ ಔರಾದ್, ಕಮಲನಗರ, ಭಾಲ್ಕಿ, ಹುಲಸೂರ, ಹುಮನಾಬಾದ್‌ನಲ್ಲೂ ಮಳೆಯಾಗಿದೆ. ಸತತ ಮಳೆಗೆ ಹಿಂಗಾರು ಕೃಷಿ ಚಟುವಟಿಕೆಗಳಿಗೆ ತೊಡಕಾಗಿದೆ. ಗುರುವಾರವೂ ಜಿಲ್ಲೆಯ ಹೆಚ್ಚಿನ ಭಾಗಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.