ADVERTISEMENT

ಔರಾದ್ ತಾಲ್ಲೂಕಿನಲ್ಲಿ ಮಳೆ ಅವಾಂತರ: ರಸ್ತೆ ಸಂಪರ್ಕ ಕಡಿತ

​ಪ್ರಜಾವಾಣಿ ವಾರ್ತೆ
Published 10 ಜುಲೈ 2021, 5:21 IST
Last Updated 10 ಜುಲೈ 2021, 5:21 IST
ಶುಕ್ರವಾರ ರಾತ್ರಿ ಸುರಿದ ಭಾರಿ ಮಳೆಯಿಂದ ವಡಗಾಂವ್ ಕಂದಗೂಳ ನಡುವಿನ ಸೇತುವೆ ಮೇಲಿಂದ ನೀರು ಹರಿದು ಪ್ರಯಾಣಿಕರು ಪರದಾಡಿದರು
ಶುಕ್ರವಾರ ರಾತ್ರಿ ಸುರಿದ ಭಾರಿ ಮಳೆಯಿಂದ ವಡಗಾಂವ್ ಕಂದಗೂಳ ನಡುವಿನ ಸೇತುವೆ ಮೇಲಿಂದ ನೀರು ಹರಿದು ಪ್ರಯಾಣಿಕರು ಪರದಾಡಿದರು   

ಔರಾದ್ (ಬೀದರ್ ಜಿಲ್ಲೆ): ತಾಲ್ಲೂಕಿನ ವಿವಿಧೆಡೆ ಶುಕ್ರವಾರ ರಾತ್ರಿ ಭಾರಿ ಮಳೆ ಸುರಿದು ಜನಜೀವನ ಅಸ್ತವ್ಯಸ್ತವಾಗಿದೆ.

ಸಂತಪುರ, ವಡಗಾಂವ್, ಚಿಂತಾಕಿ ಹೋಬಳಿಯಲ್ಲಿ ಮಳೆಯ ತೀವ್ರತೆ ಜಾಸ್ತಿಯಾಗಿ ಮನೆಗಳಿಗೆ ನೀರು ನುಗ್ಗಿದೆ. ಬೋರ್ಗಿ ಗ್ರಾಮದ ಜಗದೇವಿ ಮಾದಪ್ಪ ಅವರ ಮನೆಯಲ್ಲಿ ನೀರು ಬಂದು ಕುಟುಂಬಸ್ಥರು ನಿರಾಶ್ರಿತರಾಗಿದ್ದಾರೆ. ಅವರನ್ನು ಪಕ್ಕದ ಸರ್ಕಾರಿ ಶಾಲೆಗೆ ಸ್ಥಳಾಂತರಿಸಲಾಗಿದೆ.

ವಡಗಾಂವ್ ಕಂದಗೂಳ ನಡುವಿನ ಸೇತುವೆ ಮೇಲಿಂದ ನೀರು ಹರಿದು ಈ ಭಾಗದ ಪ್ರಯಾಣಿಕರು ಪರದಾಡಿದರು. ಸಂತಪುರ ವಡಗಾಂವ್ ನಡುವಿನ ನಾಗೂರ ಬಳಿಯ ಸೇತುವೆ ಮುಳಗಡೆಯಾಗಿ ಶನಿವಾರ ಬೆಳಿಗ್ಗೆ ತನಕ ಸಂಪರ್ಕ ಕಡಿತವಾಗಿತ್ತು.

ADVERTISEMENT

ಸಂತಪುರ ಠಾಣಾಕುಶೂರ ನಡುವಿನ ನಾಗೂರ (ಎಂ) ಬಳಿಯ ಬದಲಿ ರಸ್ತೆ ಮಳೆಗೆ ಕಿತ್ತುಹೋಗಿ ಈ ಭಾಗದ ಸಂಚಾರ ಸ್ಥಗಿತವಾಗಿದೆ. ಅನೇಕ ಹೊಲಗಳಿಗೆ ನೀರು ನುಗ್ಗಿ ವಾರದ ಹಿಂದೆ ಬಿತ್ತನೆ ಮಾಡಿದ ಸೋಯಾ, ಉದ್ದು. ಹೆಸರು, ಜೋಳ ನೀರು ಪಾಲಾಗಿದೆ.

ಕಳೆದ ಸಾಲಿನ ಅತಿವೃಷ್ಟಿಯಿಂದ ಇನ್ನೂ ಚೇತರಿಸಿಕೊಳ್ಳದ ರೈತರಿಗೆ ಈ ಮಳೆ ಗಾಯದ ಮೇಲೆ ಬರೆ ಎಳೆದಂತೆ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.