ADVERTISEMENT

ಹೇಮರಡ್ಡಿ ಮಲ್ಲಮ್ಮ ಮಹಿಳೆಯರಿಗೆ ಆದರ್ಶ

ಜಯಂತಿ ಕಾರ್ಯಕ್ರಮದಲ್ಲಿ ಜಿಲ್ಲಾ ರಡ್ಡಿ ಸಮಾಜದ ಅಧ್ಯಕ್ಷ ಶಂಕರರಡ್ಡಿ ಚಿಟ್ಟಾ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 11 ಮೇ 2021, 7:44 IST
Last Updated 11 ಮೇ 2021, 7:44 IST
ಬೀದರ್‌ನ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಹೇಮರಡ್ಡಿ ಮಲ್ಲಮ್ಮ ಜಯಂತಿ ಕಾರ್ಯಕ್ರಮವನ್ನು ಜಿಲ್ಲಾ ರಡ್ಡಿ ಸಮಾಜದ ಅಧ್ಯಕ್ಷ ಶಂಕರರಡ್ಡಿ ಚಿಟ್ಟಾ ಉದ್ಘಾಟಿಸಿದರು. ಕಾರ್ಯದರ್ಶಿ ಗೋಪಾಲರಡ್ಡಿ, ಕೃಷ್ಣಾರಡ್ಡಿ ಇದ್ದರು
ಬೀದರ್‌ನ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಹೇಮರಡ್ಡಿ ಮಲ್ಲಮ್ಮ ಜಯಂತಿ ಕಾರ್ಯಕ್ರಮವನ್ನು ಜಿಲ್ಲಾ ರಡ್ಡಿ ಸಮಾಜದ ಅಧ್ಯಕ್ಷ ಶಂಕರರಡ್ಡಿ ಚಿಟ್ಟಾ ಉದ್ಘಾಟಿಸಿದರು. ಕಾರ್ಯದರ್ಶಿ ಗೋಪಾಲರಡ್ಡಿ, ಕೃಷ್ಣಾರಡ್ಡಿ ಇದ್ದರು   

ಬೀದರ್: ಹೇಮರಡ್ಡಿ ಮಲ್ಲಮ್ಮ ಜಯಂತಿಯನ್ನು ನಗರದ ಹೇಮರಡ್ಡಿ ಮಲ್ಲಮ್ಮ ಮಂದಿರದಲ್ಲಿ ಸೋಮವಾರ ಸರಳವಾಗಿ ಆಚರಿಸಲಾಯಿತು.

ಜಿಲ್ಲಾ ರಡ್ಡಿ ಸಮಾಜದ ಅಧ್ಯಕ್ಷ ಶಂಕರರಡ್ಡಿ ಚಿಟ್ಟಾ ಅವರು ಹೇಮರಡ್ಡಿ ಮಲ್ಲಮ್ಮ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.

‘ಕೋವಿಡ್ ಕಾರಣ ಈ ಬಾರಿ ಹೇಮರಡ್ಡಿ ಮಲ್ಲಮ್ಮ ಜಯಂತಿಯನ್ನು ಸರಳವಾಗಿ ಆಚರಿಸಲಾಗಿದೆ. ಸಮಾಜದವರು ತಮ್ಮ ತಮ್ಮ ಮನೆಗಳಲ್ಲೇ ಜಯಂತಿ ಆಚರಿಸಿ ಹೇಮರಡ್ಡಿ ಮಲ್ಲಮ್ಮ ಅವರನ್ನು ಗೌರವಿಸಿದ್ದಾರೆ’ ಎಂದು ಹೇಳಿದರು.

ADVERTISEMENT

‘ಹೇಮರಡ್ಡಿ ಮಲ್ಲಮ್ಮ ಅವರು ಮಹಿಳೆಯರಿಗೆ ಆದರ್ಶಪ್ರಾಯ. ಅವರ ತತ್ವಗಳನ್ನು ಪ್ರತಿಯೊಬ್ಬರೂ ಪಾಲಿಸಬೇಕು’ ಎಂದು ಮನವಿ ಮಾಡಿದರು.

ಸಮಾಜದ ಕಾರ್ಯದರ್ಶಿ ಗೋಪಾಲರಡ್ಡಿ, ಕೃಷ್ಣಾರೆಡ್ಡಿ ಇದ್ದರು.

ಜಿಲ್ಲಾಧಿಕಾರಿ ಕಚೇರಿ: ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಹೇಮರಡ್ಡಿ ಮಲ್ಲಮ್ಮ ಜಯಂತಿ ಕಾರ್ಯಕ್ರಮವನ್ನು ಜಿಲ್ಲಾ ರಡ್ಡಿ ಸಮಾಜದ ಅಧ್ಯಕ್ಷ ಶಂಕರರಡ್ಡಿ ಚಿಟ್ಟಾ ಉದ್ಘಾಟಿಸಿದರು.

ಕಾರ್ಯದರ್ಶಿ ಗೋಪಾಲರಡ್ಡಿ, ಕೃಷ್ಣಾರಡ್ಡಿ ಇದ್ದರು.

ಖಟಕಚಿಂಚೋಳಿ: ಗ್ರಾಮದಲ್ಲಿ ಕೋವಿಡ್ ನಿಯಮಾನು ಸಾರ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಅವರ 599ನೇ ಜಯಂತಿಯನ್ನು ‌ಸರಳವಾಗಿ ಆಚರಿಸಲಾಯಿತು.

ಗ್ರಾಮದ ಮಹಿಳೆಯರು ಹೇಮರಡ್ಡಿ ಮಲ್ಲಮ್ಮ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಆರತಿ ಬೆಳಗಿದರು.

‘ಮಲ್ಲಮ್ಮ ಮಹಿಳೆಯರಿಗೆ ಆದರ್ಶ. ಅವರ ವಚನ ಜೀವನದಲ್ಲಿ ಅಳವಡಿಸಿಕೊಳ್ಳಬೇಕು’ ಎಂದರು.

ಪ್ರಮುಖರಾದ ಬಾಬುರಾವ್ ಹೋಚರಡ್ಡಿ, ಶಾಂತಪ್ಪ ಕೋರಿ, ವಿಶ್ವನಾಥ ಬನ್ನಾಳೆ, ಪಂಡಿತರೆಡ್ಡಿ, ಶರಣು ಬನ್ನಾಳೆ, ವೈಜಿನಾಥರಡ್ಡಿ, ರವಿ ಹೋಚರಡ್ಡಿ, ಚಂದುರಡ್ಡಿ, ಬಲವಂತರಡ್ಡಿ, ರೇವಣಸಿದ್ದ ಜಾಡರ್, ಕಲಾವತಿ ಶಾಂತಮ್ಮ, ಮಲ್ಲಮ್ಮಾ, ಪ್ರಭಾವತಿ, ಪಾರ್ವತಿ, ಸರಸ್ವತಿ, ರೇಣುಕಾ ಜ್ಯೋತಿ, ನೀಲಮ್ಮಾ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.