ADVERTISEMENT

ಬಸವಕಲ್ಯಾಣ: ಔತಣ ಕೂಟಕ್ಕೆ ಹೊರಟಿದ್ದವರ ಚಿನ್ನ ದರೋಡೆ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2025, 0:33 IST
Last Updated 21 ನವೆಂಬರ್ 2025, 0:33 IST
   

ಬಸವಕಲ್ಯಾಣ (ಬೀದರ್‌ ಜಿಲ್ಲೆ): ಸಮೀಪದ ರಾಷ್ಟ್ರೀಯ ಹೆದ್ದಾರಿಯ ಮಂಠಾಳ ಕ್ರಾಸ್ ಬಳಿ ಕಾರಿನಲ್ಲಿ
ಪ್ರಯಾಣಿಸುತ್ತಿದ್ದವರನ್ನು ತಡೆದ ಡಕಾಯಿತರು, ₹23.90 ಲಕ್ಷ ಮೌಲ್ಯದ 223 ತೊಲೆ ಚಿನ್ನಾಭರಣ ಮತ್ತು
₹1.60 ಲಕ್ಷ ನಗದು ದೋಚಿದ್ದಾರೆ.

ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯವರು, ಹೈದರಾಬಾದ್‌ನಲ್ಲಿ ನಡೆಯಲಿದ್ದ ಮದುವೆ ಔತಣಕೂಟಕ್ಕೆ ಬುಧವಾರ ಹೋಗುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ಕಾರಿನಲ್ಲಿದ್ದ ಸಾಂಗ್ಲಿ ಜಿಲ್ಲೆಯ ಯಥಗಾಂವ್‌ನ ಪ್ರವೀಣ ಅವರು ನಗರ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. 

ಹೆದ್ದಾರಿಯಲ್ಲಿ ಸಾಗುತ್ತಿದ್ದಾಗ ಕಾರಿನ ಎದುರು ಕಬ್ಬಿಣದ ಮೊಳೆ ಬಿಸಾಡಿದ್ದರಿಂದ ಟೈರ್ ಒಡೆದಿದೆ. ಚಾಲಕ ಕೆಳಗೆ ಇಳಿದು ಪರಿಶೀಲಿಸುತ್ತಿ ದ್ದಾಗ ಆರರಿಂದ ಎಂಟು ಜನ ಡಕಾಯಿತರು ಕಾರನ್ನು ಸುತ್ತುವರಿದಿದ್ದಾರೆ. ಚಾಕು ಹಾಗೂ ಬಡಿಗೆ ತೋರಿಸಿ ಜೀವ ಬೆದರಿಕೆ ಹಾಕಿದ್ದಾರೆ. ನಾಲ್ವರು ಮಹಿಳೆಯರು ಹಾಗೂ ಇಬ್ಬರು ಪುರುಷ ರಿಂದ ಚಿನ್ನಾಭರಣ ಮತ್ತು ನಗದು ಹಣ ಇದ್ದ ಬ್ಯಾಗ್‌ ಕಸಿದು ಪರಾರಿಯಾಗಿದ್ದಾರೆ.

ADVERTISEMENT

ಡಕಾಯಿತರು ಯುವಕರಾಗಿದ್ದು, ಮುಖಕ್ಕೆ ಮುಸುಕು ಹಾಕಿಕೊಂಡಿದ್ದರು. ಕನ್ನಡ, ಮರಾಠಿ ಭಾಷೆಯಲ್ಲಿ
ಮಾತನಾಡುತ್ತಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.