ADVERTISEMENT

ಜೇನು ಕೃಷಿ ಲಾಭದಾಯಕ

ವಿಶ್ವ ಜೇನು ದಿನ; ಮಹಮ್ಮದ್ ಜಾಫರ್‌ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 21 ಮೇ 2022, 14:55 IST
Last Updated 21 ಮೇ 2022, 14:55 IST

ಬೀದರ್: ಜೇನು ಕೃಷಿಯು ಲಾಭದಾಯಕ ಕಸುಬಾಗಿದ್ದು, ವೈಜ್ಞಾನಿಕ ಮಾದರಿ ಅನುಸರಿಸಿ ಕೃಷಿ ಚಟುವಟಿಕೆ ಕೈಗೊಂಡಲ್ಲಿ ಉತ್ತಮ ಇಳುವರಿ ಪಡೆಯಬಹುದು ಎಂದುಪ್ರಗತಿಪರ ರೈತ ಮಹಮ್ಮದ್ ಜಾಫರ್‌ ಹೇಳಿದರು.

ನಗರದ ತೋಟಗಾರಿಕೆ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ವಿಶ್ವ ಜೇನು ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪ್ರಾಧ್ಯಾಪಕ ಡಾ.ಮಹಮ್ಮದ್ ಫಾರೂಕ್ ಮಾತನಾಡಿ, ಜೇನು ಕೃಷಿ ಆರಂಭಿಸುವ ಮೊದಲು ಕೃಷಿ ಹಾಗೂ ತೋಟಗಾರಿಕೆ ವಿಜ್ಞಾನಿಗಳಿಂದ ಸಲಹೆ ಪಡೆಯಬೇಕು. ಇದರಿಂದ ಅಧಿಕ ಇಳವರಿ ಪಡೆಯಲು ಸಾಧ್ಯವಾಗುತ್ತದೆ ಎಂದರು.

ADVERTISEMENT

ಸಹಾಯಕ ಪ್ರಾಧ್ಯಾಪಕ ಡಾ. ಪ್ರಶಾಂತ ಮಾತನಾಡಿ, ಭಾರತದಲ್ಲಿ ಐದು ಬಗೆಯ ಜೇನು ನೊಣಗಳಿವೆ. ಹೆಜ್ಜೇನು, ಮುಜಂಟಿ ಜೇನು, ಕೋಲು ಜೇನು ಹಾಗೂ ತುಡುವೆ ಜೇನು ಇದುವ ದೇಸಿಯವಾಗಿ ಕಾಣಸಿಗುತ್ತವೆ. ಯುರೋಪಿನ ಜೇನು ವಿದೇಶಿ ತಳಿಯಾಗಿದೆ. ಇವುಗಳಲ್ಲಿ ತುಡುವೆ ಮತ್ತು ಯುರೋಪಿಯನ್ ಜೇನಗಳನ್ನು ಜೇನು ಪೆಟ್ಟಿಗೆಗಳ ಸಹಾಯದಿಂದ ಸಾಕಬಹುದು ಎಂದು ತಿಳಿಸಿದರು.

ಜೇನು ಕುಟುಂಬದಲ್ಲಿ ಒಂದು ರಾಣಿಹುಳು, 100-200 ಗಂಡುಹುಳುಗಳು ಮತ್ತು ಸಾವಿರಾರು ಕೆಲಸಗಾರ ಹುಳುಗಳು(ಹೆಣ್ಣು) ಇರುತ್ತವೆ. ಇವೆಲ್ಲ ಸೇರಿಯೇ ಜೇಣು ಉತ್ಪಾದನೆ ಮಾಡುತ್ತಿವೆ ಎಂದು ವಿವರಿಸಿದರು.

ಸಹಾಯಕ ಪ್ರಾಧ್ಯಾಪಕ ಡಾ.ರಾಜಕುಮಾರ ಎಂ ಮಾತನಾಡಿ, ಜೇನಿನಲ್ಲಿ ಔಷಧೀಯ ಗುಣಗಳು ಇವೆ ಎಂದರು.

ಮಹಾವಿದ್ಯಾಲಯದ ಡೀನ್‌ ಡಾ.ಎಸ್.ವಿ. ಪಾಟೀಲ ಮಾತನಾಡಿ, ಆಧುನಿಕ ಜೇನು ಸಾಕಾಣಿಕೆಯ ಪಿತಾಮಹ ಅಂಟೊನ್‍ಜಾನ್ಸಾ ಜನ್ಮದಿನದ ಅಂಗವಾಗಿ ವಿಶ್ವಜೇನು ದಿನ ಆಚರಿಸಲಾಗುತ್ತದೆ ಎಂದು ಹೇಳಿದರು.

ವಿಸ್ತರಣಾ ಮುಂದಾಳು ಡಾ.ಶ್ರೀನಿವಾಸ್ ಎನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಹ ಪ್ರಾಧ್ಯಾಪಕ ಡಾ. ಆನಂದ ಪಾಟೀಲ ಸ್ವಾಗತಿಸಿದರು. ಪ್ರಶಾಂತ ವಂದಿಸಿದರು

ಡಾ.ಮಂಗೇಶ, ಶಶಿಧರ ಚವಾಣ್, ಡಾ.ಏಕನಾಥ ಎನ್, ಚಿಟ್ಟಾ ಗ್ರಾಮದ ರೈತರು ಮತ್ತು ತೋಟಗಾರಿಕೆ ಮಹಾವಿದ್ಯಾಲಯದ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.