ADVERTISEMENT

ಹುಲಸೂರ: ಅಂಚೆ ಕಚೇರಿಗೆ ತಾತ್ಕಾಲಿಕ ಮೆಟ್ಟಿಲು ನಿರ್ಮಾಣ

​ಪ್ರಜಾವಾಣಿ ವಾರ್ತೆ
Published 28 ಜನವರಿ 2026, 7:18 IST
Last Updated 28 ಜನವರಿ 2026, 7:18 IST
ಹುಲಸೂರ ಸಮೀಪದ ಭಾಲ್ಕಿ ತಾಲ್ಲೂಕಿನ ಕೆಸರ ಜವಳಗಾ ಗ್ರಾಮದಲ್ಲಿನ ಅಂಚೆ ಕಚೇರಿಗೆ ತಾತ್ಕಾಲಿಕ ಮೆಟ್ಟಿಲು ನಿರ್ಮಾಣ ಕಾರ್ಯ ನಡೆಯಿತು
ಹುಲಸೂರ ಸಮೀಪದ ಭಾಲ್ಕಿ ತಾಲ್ಲೂಕಿನ ಕೆಸರ ಜವಳಗಾ ಗ್ರಾಮದಲ್ಲಿನ ಅಂಚೆ ಕಚೇರಿಗೆ ತಾತ್ಕಾಲಿಕ ಮೆಟ್ಟಿಲು ನಿರ್ಮಾಣ ಕಾರ್ಯ ನಡೆಯಿತು   

ಹುಲಸೂರ: ಸಮೀಪದ ಭಾಲ್ಕಿ ತಾಲ್ಲೂಕಿನ ಕೆಸರ ಜವಳಗಾ ಗ್ರಾಮದಲ್ಲಿರುವ ಅಂಚೆ ಕಚೇರಿಗೆ ಅಗತ್ಯವಾದ ಮೆಟ್ಟಿಲು ವ್ಯವಸ್ಥೆ ಇಲ್ಲದ ಕಾರಣ, ಮಾಸಾಶನ ಪಡೆಯಲು ಬರುವ ಅಂಗವಿಕಲರು ಹಾಗೂ ವೃದ್ಧ ಫಲಾನುಭವಿಗಳು ತೀವ್ರ ಸಂಕಷ್ಟ ಅನುಭವಿಸುವಂತಾಗಿತ್ತು.

ಈ ಕುರಿತು ಜನವರಿ 9ರ ‘ಪ್ರಜಾವಾಣಿ’ ಸಂಚಿಕೆಯಲ್ಲಿ ಅಂಚೆ ಕಚೇರಿಗೆ ಮೆಟ್ಟಿಲು ನಿರ್ಮಿಸಿ ಎಂಬ ಶೀರ್ಷಿಕೆ ಅಡಿಯಲ್ಲಿ ಸುದ್ದಿ ಪ್ರಕಟಗೊಂಡಿದ್ದು ಇದರ ಬೆನ್ನಲ್ಲೇ ಎಚ್ಚೆತ್ತುಗೊಂಡ ಗ್ರಾಮ ಪಂಚಾಯಿತಿ ಅಧಿಕಾರಿ ತಾತ್ಕಾಲಿಕ ಮೆಟ್ಟಿಲು ನಿರ್ಮಿಸಿ ವಯೋವೃದ್ಧ ಫಲಾನುಭವಿಗಳಿಗೆ ಆಸರೆ ನೀಡಿದ್ದಾರೆ.

ಈಗಾಗಲೇ ತಾತ್ಕಾಲಿಕವಾಗಿ ಮೆಟ್ಟಿಲು ನಿರ್ಮಾಣ ಮಾಡಿದ್ದು ಆದಷ್ಟು ಬೇಗ ನರೇಗಾ ಯೋಜನೆಯ ಕ್ರಿಯಾಯೋಜನೆಯಲ್ಲಿ ಉತ್ತಮ ಮೆಟ್ಟಿಲು ನಿರ್ಮಾಣಕ್ಕೆ ಆದ್ಯತೆ ನೀಡಲಾಗುವುದು ಎಂದು ಪಿಡಿಒ ಅನಿಲ ಕಾಳೆ ಪ್ರಜಾವಾಣಿಗೆ ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.