ADVERTISEMENT

ಹುಲಸೂರ ಪಂಚಾಯಿತಿ ಶೀಘ್ರ ಮೇಲ್ದರ್ಜೆಗೆ: ಈಶ್ವರ ಖಂಡ್ರೆ ಭರವಸೆ

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2025, 6:56 IST
Last Updated 18 ನವೆಂಬರ್ 2025, 6:56 IST
ಹುಲಸೂರ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿಸುವ ನಿಟ್ಟಿನಲ್ಲಿ ಗ್ರಾಮ ಪಂಚಾಯತಿ ಸದಸ್ಯರು ಸಚಿವ ಈಶ್ವರ್‌ ಖಂಡ್ರೆ ಅವರಿಗೆ ಮನವಿ ಪತ್ರ ಸಲ್ಲಿಸಿದರು 
ಹುಲಸೂರ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿಸುವ ನಿಟ್ಟಿನಲ್ಲಿ ಗ್ರಾಮ ಪಂಚಾಯತಿ ಸದಸ್ಯರು ಸಚಿವ ಈಶ್ವರ್‌ ಖಂಡ್ರೆ ಅವರಿಗೆ ಮನವಿ ಪತ್ರ ಸಲ್ಲಿಸಿದರು    

ಹುಲಸೂರ: ‘ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಹಾಗೂ ಪೌರಾಡಳಿತ ಸಚಿವರ ಗಮನಕ್ಕೆ ತಂದು ಆದಷ್ಟು ಬೇಗ ಹುಲಸೂರ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿಸುವ ಕಾರ್ಯಕ್ಕೆ ಶೀಘ್ರ ಅನುಮೋದನೆ ಪಡೆಯುವ ಕಾರ್ಯ ನನ್ನಿಂದ ಮಾಡುವೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಭರವಸೆ ನೀಡಿದರು.

ಸೋಮವಾರ ಬೆಳಿಗ್ಗೆ ಅವರ ಗೃಹ ಕಚೇರಿ ಬಳಿ ಹುಲಸೂರ ಗ್ರಾಮ ಪಂಚಾಯಿತಿ ಅಧ್ಯಕ್ಷೆ, ಸದಸ್ಯರು ಸೇರಿ ಮನವಿ ಸಲ್ಲಿಸಿದರು.

ಬಳಿಕ ಗ್ರಾಮ ಪಂಚಾಯಿತಿ ಅಧ್ಯಕ್ಷೆ ದೀಪರಾಣಿ ಭೋಸ್ಲೆ ಮಾತನಾಡಿ, ‘ಹುಲಸೂರ ಗ್ರಾಮ ಪಂಚಾಯಿತಿಯಲ್ಲಿ 2021ರ ಜನಗಣತಿಯ ಪ್ರಕಾರ ಪಟ್ಟಣದಲ್ಲಿ ಸುಮಾರು 20 ಸಾವಿರ ಜನಸಂಖ್ಯೆ ಇದೆ. ಮುಖ್ಯವಾಗಿ ಹುಲಸೂರ ತಾಲ್ಲೂಕ ಕೇಂದ್ರವಾಗಿದ್ದು ಸದರಿ ಗ್ರಾಮ ಪಂಚಾಯಿತಿ ವತಿಯಿಂದ ಜನರಿಗೆ ಸೌಲಭ್ಯ ಒದಗಿಸಲು ಆಗುತ್ತಿಲ್ಲ. ಆದ್ದರಿಂದ ಇನ್ನೂ ಹೆಚ್ಚಿನ ಅಭಿವೃದ್ಧಿಗಾಗಿ ಹಾಗೂ ಸಾರ್ವಜನಿಕರಿಗೆ ಸರಿಯಾದ ಮೂಲಸೌಕರ್ಯ ಕಲ್ಪಿಸಲು ಪಟ್ಟಣ ಪಂಚಾಯಿತಿ ಮಾಡುವುದು ಅತೀ ಅವಶ್ಯಕವಾಗಿದೆ. ಹುಲಸೂರ ಪಟ್ಟಣದಲ್ಲಿ ಎಲ್ಲಾ ರಸ್ತೆಗಳು ಒತ್ತುವರಿಯಾಗಿದ್ದು ಕೂಡಲೇ ಒತ್ತುವರಿ ತೆರವುಗೊಳಿಸಬೇಕು’ ಎಂದು ಮನವಿ ಸಲ್ಲಿಸಿದರು.

ADVERTISEMENT

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಮೀರಾಬಾಯಿ ರಣಜಿತ ಗಾಯಕವಾಡ, ಗ್ಯಾರಂಟಿ ಯೋಜನೆ ಜಿಲ್ಲಾ ಉಪಾಧ್ಯಕ್ಷೆ ಲತಾ ಹಾರಕೂಡೆ, ಸಿದ್ರಾಮ ಕಾಮಣ್ಣ, ಮನ್ಸೂರ್ ದಾವಲಜಿ, ಸಂಗಮೇಶ ಕೊಡಂಬಲೆ, ಓಂಕಾರ ಪಟ್ನೆ, ವಿವೇಕ ಚಳಕಾಪುರೆ, ಬಾಲಾಜಿ ಗೌಡಗಾಂವೆ, ವಿದ್ಯಾಸಾಗರ ಬಣಸೋಡೇ, ಸಚಿನ್ ವಗ್ಗೇ, ಮಹಾದೇವ ಮಹಾಜನ, ಅಬ್ರಾರ ಸೌದಾಗಾರ, ಮಲ್ಲಾರಿ ವಾಘಮಾರೆ, ಕವಿರಾಜ ಜಡೇಗೆ, ನಾಗೇಶ ನೀಲಂಗೆ, ಆಸಿಫ್ ಸಿಲಾರ್ ಸೇರಿ ಹಲವರು ಉಪಸ್ಥಿತರಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.