ADVERTISEMENT

ಹುಮನಾಬಾದ್: ಮನ್ನಾಏಖೇಳ್ಳಿ ಗ್ರಾ.ಪಂಗೆ ಗಾಂಧಿ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2025, 6:54 IST
Last Updated 9 ಡಿಸೆಂಬರ್ 2025, 6:54 IST
<div class="paragraphs"><p>ಚಿಟಗುಪ್ಪ ತಾಲ್ಲೂಕಿನ ಮನ್ನಾಏಖೇಳ್ಳಿ ಪಿಡಿಒ ಭಾಗ್ಯಜ್ಯೋತಿ ಗಾಂಧಿ ಗ್ರಾಮ ಪ್ರಶಸ್ತಿ ಸ್ವೀಕರಿಸಿದರು. ಮನ್ನಾಏಖೇಳ್ಳಿ ಗ್ರಾಪಂಗೆ ಗಾಂಧಿ ಪ್ರಶಸ್ತಿ </p></div>

ಚಿಟಗುಪ್ಪ ತಾಲ್ಲೂಕಿನ ಮನ್ನಾಏಖೇಳ್ಳಿ ಪಿಡಿಒ ಭಾಗ್ಯಜ್ಯೋತಿ ಗಾಂಧಿ ಗ್ರಾಮ ಪ್ರಶಸ್ತಿ ಸ್ವೀಕರಿಸಿದರು. ಮನ್ನಾಏಖೇಳ್ಳಿ ಗ್ರಾಪಂಗೆ ಗಾಂಧಿ ಪ್ರಶಸ್ತಿ

   

ಚಿಟಗುಪ್ಪ(ಹುಮನಾಬಾದ್): 2023-24ನೇ ಸಾಲಿನ ‘ಗಾಂಧಿಗ್ರಾಮ ಪುರಸ್ಕಾರ’ಕ್ಕೆ ತಾಲ್ಲೂಕಿನ ಮನ್ನಾಏಖೇಳ್ಳಿ ಗ್ರಾಮ ಪಂಚಾಯಿತಿ ಆಯ್ಕೆಯಾಗಿದೆ.

ಬೆಂಗಳೂರಿನ ವಿಧಾನ ಸೌಧದಲ್ಲಿ ಈಚೆಗೆ ನಡೆದ ಗಾಂಧಿ ಪ್ರಶಸ್ತಿ ಪುರಸ್ಕಾರ ಸಮಾರಂಭದಲ್ಲಿ ತಾಲ್ಲೂಕಿನ ಮನ್ನಾಏಖೇಳ್ಳಿ ಪಿಡಿಒ ಭಾಗ್ಯಜ್ಯೋತಿ, ಅಧ್ಯಕ್ಷ ರಾಜಕುಮಾರ ಅಗಸಿ ಅವರು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರಿಂದ ಪ್ರಶಸ್ತಿ ಸ್ವೀಕರಿಸಿದರು.‌

ADVERTISEMENT

‘ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆ ಆಗುವಲ್ಲಿ ನಮ್ಮ ಗ್ರಾಮ ಪಂಚಾಯಿತಿಯ ಅಧ್ಯಕ್ಷರು ಹಾಗೂ ಸದಸ್ಯರ ಸಹಕಾರ ಮತ್ತು ನಮ್ಮ ಇಲಾಖೆಯ‌ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಿಂದ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅನುದಾನ ಉತ್ತಮವಾಗಿ ಬಳಸಿಕೊಂಡು ಅಭಿವೃದ್ಧಿ ಮಾಡಿದ್ದರಿಂದ ಪ್ರಶಸ್ತಿ ಬಂದಿದೆ’ ಎಂದು ಪಿಡಿಒ ಭಾಗ್ಯಜ್ಯೋತಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.