
ಬೀದರ್: ಕ್ರಿಸ್ಮಸ್ ಹಬ್ಬದ ನಿಮಿತ್ತ ನಗರದ ವಿಜಯರಾಜ ಮಿಷನ್ ಟ್ರಸ್ಟ ವತಿಯಿಂದ ಬಡ ಮಕ್ಕಳಿಗೆ ಬಟ್ಟೆ, ಶೂ ಹಾಗೂ ಆಹಾರ ಕಿಟ್ ವಿತರಣೆ ಮಾಡಲಾಯಿತು.
ಬಳಿಕ ಇಮ್ಮಾನುವೆಲ್ ಪುಷ್ಪಲಾ ಮಾತನಾಡಿ, ‘ಕ್ರಿಸ್ಮಸ್ ಹಬ್ಬದ ನಿಮಿತ್ತ ಬಡ ಮಕ್ಕಳಿಗೆ ಬಟ್ಟೆ, ಶೂ, ಆಹಾರ ಕಿಟ್ ವಿತರಿಸುವಿ ಕಾರ್ಯ ಶ್ಲಾಘನೀಯವಾಗಿದೆ. ಮಕ್ಕಳು ಹೊಸ ಬಟ್ಟೆ ಧರಿಸಿ ಅವರು ಸಂತೋಷಪಟ್ಟಿದ್ದರೆ ಮಾತ್ರ ನಾವು ಕ್ರಿಸ್ಮಸ್ ಆಚರಿಸಿದಕ್ಕೆ ಅರ್ಥ ಬರುತ್ತದೆ’ ಎಂದರು.
ಈ ಸಂದರ್ಭದಲ್ಲಿ ಎನ್.ಎಂ.ರಾಜು ಪೌಲ್, ಮುಫ್ತಿ ಗುಲಾಮ್ ಯಝದಾನಿ ಇಷಹಾತಿ, ಶಾಹೀನ ಸಂಸ್ಥೆಯ ಡಾ.ಅಬ್ದುಲ್ ಖದೀರ, ಗುರುದ್ವಾರಾದ ವ್ಯವಸ್ಥಾಪಕ ದರಬಾರಾಸಿಂಗ್, ಆಣದೂರಿನ ಭಂತೆ ಧಮ್ಮಾನಂದ, ಮುಫ್ತಿ ಎಂಡಿ ಅಯುಬ್ ಸಲೀಮ್ ಹಾಶ್ಮಿ, ವಿಜಯಶ್ರೀ ಧನರಾಜ, ಡಾ. ಅನಿಲಕುಮಾರ ಚಿಂತಾಮಣಿ, ನಗರಸಭೆ ಸದಸ್ಯ ರಾಜಕುಮಾರ ಚಿಂತಾಮಣಿ, ಬ್ರಿಮ್ಸ್ ಉಪನ್ಯಾಸಕ ಡಾ.ಪ್ರಸನ್ನ ರೇಷ್ಮೆ, ರಾಜಶೇಖರ, ಧನರಾಜ ಬಂಡೆಪ್ಪ ಸೇರಿದಂತೆ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.