ADVERTISEMENT

ಚಿನ್ನದ ಪದಕ ಪಡೆದ ವಿದ್ಯಾರ್ಥಿನಿಗೆ ಸನ್ಮಾನ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2026, 8:53 IST
Last Updated 28 ಫೆಬ್ರುವರಿ 2026, 8:53 IST
ಹುಮನಾಬಾದ್ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಚಿನ್ನದ ಪದಕ ಗಳಿಸಿದ ವಿದ್ಯಾರ್ಥಿ ಪೂಜಾ ಅವರಿಗೆ ಸನ್ಮಾನಿಸಲಾಯಿತು
ಹುಮನಾಬಾದ್ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಚಿನ್ನದ ಪದಕ ಗಳಿಸಿದ ವಿದ್ಯಾರ್ಥಿ ಪೂಜಾ ಅವರಿಗೆ ಸನ್ಮಾನಿಸಲಾಯಿತು   

ಹುಮನಾಬಾದ್: ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿ ಪೂಜಾ ಅವರು ವಿಶ್ವವಿದ್ಯಾಲಯ ಮಟ್ಟದಲ್ಲಿ ವಚನ ಸಾಹಿತ್ಯ ಪತ್ರಿಕೆಯಲ್ಲಿ ಹೆಚ್ಚು ಅಂಕ ಪಡೆದು ಚಿನ್ನದ ಪದಕ ಗಳಿಸಿರುವುದು ಹೆಮ್ಮೆಯ ವಿಷಯ ಎಂದು ಕಾಲೇಜಿನ ಪ್ರಾಂಶುಪಾಲ ವೀರಣ್ಣ ತುಪ್ಪದ್ ಹೇಳಿದರು.

ಕಾಲೇಜಿನ ಆವರಣದಲ್ಲಿ ಗುರುವಾರ ಆಯೋಜಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.‌

ಈಚೆಗೆ ಕಲಬುರ್ಗಿ ವಿಶ್ವವಿದ್ಯಾಲಯದಲ್ಲಿ ನಡೆದ 43ನೇ ಘಟ್ಟಿಕೋತ್ಸವದಲ್ಲಿ ನಮ್ಮ ಕಾಲೇಜಿನ ಎಂಎ ಕನ್ನಡ 4ನೇ ಸೆಮಿಸ್ಟರ್ ವಿದ್ಯಾರ್ಥಿ ಪೂಜಾ ವಚನ ಸಾಹಿತ್ಯ ಪತ್ರಿಕೆಯಲ್ಲಿ ಹೆಚ್ಚು ಅಂಕ ಪಡೆದಿದ್ದರಿಂದ ರಾಜ್ಯಪಾಲರು ಪ್ರಶಸ್ತಿ ನೀಡಿ ಸನ್ಮಾನಿಸಿದ್ದಾರೆ ಎಂದರು.‌

ADVERTISEMENT

ಈ ಸಂದರ್ಭದಲ್ಲಿ ಖಾಸಿಂಸಾಬ್ ಕುಲಾಲಿ, ಪೆದ್ದಪ್ಪಾ ನಾಯಕ, ಶಿವಾನಂದ ಹಿರೇಮಠ, ಅಪರ್ಣಾ ಶೆಟ್ಟಿ, ಬಳ್ಳಿರಾಮ್ ಹೂಡೆ, ಮಲ್ಲಿಕಾರ್ಜುನ ಬಾಳಿ, ಅಮರ್ ಗಿರಿ, ಸಚಿನ ಕುಲ್ಕರ್ಣಿ, ಸಂತೋಷ ಮಹಾಜನ್ ಹಸೀನಾ ಬೇಗಂ, ರಾಜಾಬಾಯಿ,ಸತೀಶ್ ಡೋಂಗ್ರೆ , ಶಿವಶರಣಪ್ಪಾ,ಅಶ್ವಿನಿ, ರಾಜಶೇಖರ್, ವೆಂಕಟ್ ಜಾಧವ್, ಪ್ರಕಾಶ್ ಸೇಡೋಲ್ಕರ, ಸೈಯದ್ ಖಾಜಾ ಸೇರಿದಂತೆ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.