ADVERTISEMENT

ಬೀದರ್: ಕೋವಿಡ್-19ನಿಂದ ಗುಣಮುಖರಾದವರಿಗೆ ಬೀಳ್ಕೊಡುಗೆ

​ಪ್ರಜಾವಾಣಿ ವಾರ್ತೆ
Published 15 ಜುಲೈ 2020, 16:02 IST
Last Updated 15 ಜುಲೈ 2020, 16:02 IST
ಹುಮನಾಬಾದ್‍ನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾದ 15 ಜನರನ್ನು ಮಂಗಳವಾರ ಹೂಮಳೆ ಸುರಿಸಿ ಬಿಡುಗಡೆಗೊಳಿಸಲಾಯಿತು
ಹುಮನಾಬಾದ್‍ನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾದ 15 ಜನರನ್ನು ಮಂಗಳವಾರ ಹೂಮಳೆ ಸುರಿಸಿ ಬಿಡುಗಡೆಗೊಳಿಸಲಾಯಿತು   

ಹುಮನಾಬಾದ್: ‘ಕೊರೊನಾದಿಂದ ಗುಣಮುಖರಾದ 15 ಜನರನ್ನು ಹೂಮಳೆ ಸುರಿಸಿ ಬೀಳ್ಕೊಡಲಾಯಿತು’ ಎಂದು ಮುಖ್ಯ ವೈದ್ಯಾಧಿಕಾರಿ ಡಾ.ನಾಗನಾಥ ಹೂಲಸೂರೆ ತಿಳಿಸಿದರು.

ಕೊರೊನಾದಿಂದ ಗುಣಮುಖರಾದ 15 ಜನರನ್ನು ಇಲ್ಲಿನ ಸರ್ಕಾರಿ ಆಸ್ಪತ್ರೆಯಿಂದ ಮಂಗಳವಾರ ಬೀಳ್ಕೊಟ್ಟು ಅವರು ಮಾತನಾಡಿದರು.

ಕೋವಿಡ್‌ ಸೋಂಕು ದೃಢಪಟ್ಟ 35 ಜನರನ್ನು ಸರ್ಕಾರಿ ಆಸ್ಪತ್ರೆಯ ಕೇರ್ ಸೇಂಟರ್‌ನಲ್ಲಿ ಇಟ್ಟು ಸೂಕ್ತ ಚಿಕಿತ್ಸೆ ನೀಡಲಾಗಿದೆ. ಆ ಪೈಕಿ ಗುಣಮುಖರಾದ 15 ಜನರನ್ನು ಬಿಡುಗಡೆಗೊಳಿಸಲಾಯಿತು. ಅವರಿಗೆ 7 ದಿನ ಗೃಹ ನಿರ್ಬಂಧದಲ್ಲಿರುವಂತೆ ಸೂಚಿಸಲಾಗಿದೆ ಎಂದರು.

ADVERTISEMENT

ತಹಶೀಲ್ದಾರ್ ನಾಗಯ್ಯ ಹಿರೇಮಠ ಮಾತನಾಡಿ,‘ಪಟ್ಟಣದಲ್ಲಿ ದಿನದಿಂದ ದಿನಕ್ಕೆ ಕೋವಿಡ್‌ ಪ್ರಕರಣಗಳು ಹೆಚ್ಚುತ್ತಿವೆ. ಸಾರ್ವಜನಿಕರು ಜಾಗೃತಿ ವಹಿಸಬೇಕು’ ಎಂದರು.

ಪಟ್ಟಣದಲ್ಲಿ ಒಟ್ಟು 54 ಜನರಿಗೆ ಸೋಂಕು ದೃಢಪಟ್ಟಿತ್ತು. ಆ ಪೈಕಿ 35 ಜನ ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಪ್ರಕರಣಗಳು ಹೆಚ್ಚುತ್ತಿರುವ ಕಾರಣ ನೂರ್ ಡಾಬಾ ಮತ್ತು ಬಿಸಿಎಂ ವಸತಿ ನಿಲಯದಲ್ಲಿ 100 ಹಾಸಿಗೆಯ ಕೋವಿಡ್ ಕೇರ್ ಸೆಂಟರ್ ಪ್ರಾರಂಭಿಸಲಾಗಿದೆ ಎಂದರು.

ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ಅಶೋಕ ಮೈಲಾರೆ, ಸಿಪಿಐ ಮಲ್ಲಿಕಾರ್ಜುನ ಯಾತನೂರ, ಪಿಎಸ್‍ಐ ರವಿಕುಮಾರ, ತಾಲ್ಲೂಕು ನೋಡಲ್ ಅಧಿಕಾರಿ ಡಾ. ಗೋವಿಂದ, ಪುರಸಭೆ ಮುಖ್ಯಾಧಿಕಾರಿ ಶಂಭುಲಿಂಗ ದೇಸಾಯಿ, ಡಾ. ಬಸವಂತರಾವ್ ಗುಮ್ಮೆದ, ಡಾ.ವಿಶ್ವ, ಡಾ.ಪ್ರೇಮಸಾಗರ, ತೌಸೀಫ್, ನಯೂಮ್, ಶರಣು, ಸುನಿಲ ಹಾಗೂ ಮಾಣಿಕ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.