ADVERTISEMENT

ಬಾವಗಿ: ಹೈಮಾಸ್ಟ್ ದೀಪ ಅಳವಡಿಸಿ

​ಪ್ರಜಾವಾಣಿ ವಾರ್ತೆ
Published 18 ಜೂನ್ 2025, 14:02 IST
Last Updated 18 ಜೂನ್ 2025, 14:02 IST
   

ಬಾವಗಿ(ಜನವಾಡ): ಬೀದರ್ ತಾಲ್ಲೂಕಿನ ಬಾವಗಿ ಕ್ರಾಸ್ ಹತ್ತಿರದ ಶಿವಾಜಿ ವೃತ್ತದ ಪ್ರದೇಶದಲ್ಲಿ ಬೆಳಕಿನ ವ್ಯವಸ್ಥೆ ಇಲ್ಲದ ಕಾರಣ ರಾತ್ರಿ ವಿವಿಧೆಡೆಗೆ ತೆರಳುವ ಪ್ರಯಾಣಿಕರು ಸಮಸ್ಯೆ ಎದುರಿಸಬೇಕಾಗಿದೆ.

ಬಾವಗಿ, ಸಿರ್ಸಿ(ಎ), ನೆಲವಾಡ ಹಾಗೂ ಶಮಶೇರನಗರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಇರುವ ಸ್ಥಳದಲ್ಲೇ ವೃತ್ತ ಇದೆ. ವಿವಿಧೆಡೆ ಪ್ರಯಾಣ ಬೆಳೆಸಬೇಕಾದವರು ವೃತ್ತದ ಬಳಿ ಬಂದು ನಿಲ್ಲುತ್ತಾರೆ. ಆದರೆ, ಬೀದಿ ದೀಪಗಳು ಇಲ್ಲದೇ ಇರುವುದರಿಂದ ರಾತ್ರಿ ವೇಳೆ ತೊಂದರೆಯಾಗುತ್ತಿದೆ. ಕತ್ತಲೆ ಆವರಿಸುವ ಕಾರಣಕ್ಕೆ ಅನೇಕ ಬಸ್‍ಗಳು ನಿಲ್ಲದೆ ಮುಂದೆ ಹೋಗುತ್ತಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT