ADVERTISEMENT

ಕಿನ್ನರಿ ಬೊಮ್ಮಯ್ಯನವರ ಜಾತ್ರಾ ಮಹೋತ್ಸವ

ಕಿನ್ನರಿ ಬೊಮ್ಮಯ್ಯನವರ ಜಾತ್ರಾ ಮಹೋತ್ಸವದಲ್ಲಿ ಬಸವರಾಜ ಪಾಟೀಲ ಸೇಡಂ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2022, 5:42 IST
Last Updated 18 ಆಗಸ್ಟ್ 2022, 5:42 IST
ಹುಮನಾಬಾದ್ ತಾಲ್ಲೂಕಿನ ಹಳ್ಳಿಖೇಡ್ ಕೆ. ಗ್ರಾಮದಲ್ಲಿ ನಡೆದ ಕಿನ್ನರಿ ಬೊಮ್ಮಯನವರ ಜಾತ್ರಾ ಮಹೋತ್ಸವದಲ್ಲಿ ಬಸವರಾಜ ಪಾಟೀಲ ಸೇಡಂ ಮಾತನಾಡಿದರು
ಹುಮನಾಬಾದ್ ತಾಲ್ಲೂಕಿನ ಹಳ್ಳಿಖೇಡ್ ಕೆ. ಗ್ರಾಮದಲ್ಲಿ ನಡೆದ ಕಿನ್ನರಿ ಬೊಮ್ಮಯನವರ ಜಾತ್ರಾ ಮಹೋತ್ಸವದಲ್ಲಿ ಬಸವರಾಜ ಪಾಟೀಲ ಸೇಡಂ ಮಾತನಾಡಿದರು   

ಹುಮನಾಬಾದ್: ‘ಮಕ್ಕಳಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸಬೇಕು. ಶರಣರ ತತ್ವ ಸಿದ್ಧಾಂತದ ಕುರಿತು ಅರಿವು ಮೂಡಿಸಬೇಕು’ ಎಂದು ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕೃತಿಕ ಸಂಘದ ಅಧ್ಯಕ್ಷ ಬಸವರಾಜ ಪಾಟೀಲ ಸೇಡಂ ಹೇಳಿದರು.

ತಾಲ್ಲೂಕಿನ ಹಳ್ಳಿಖೇಡ್ ಕೆ. ಗ್ರಾಮದಲ್ಲಿ ನಡೆದ ಶರಣ ಕಿನ್ನರಿ ಬೊಮ್ಮಯ್ಯನವರ 53ನೇ ಜಾತ್ರಾ ಮಹೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪ್ರತಿದಿನ ಶರಣರ ವಚನಗಳನ್ನು ಮಕ್ಕಳಿಗೆ ಕಲಿಸಬೇಕು. ಅಲ್ಲದೆ, ಭಾರತದ ಪರಂಪರೆ ಮತ್ತು ಸಂಸ್ಕೃತಿ ಕುರಿತು ಗೌರವ ಇರಬೇಕು ಎಂದರು.

ADVERTISEMENT

ಹಿರೇಮಠದ ಸಿದ್ದರಾಮ ಸ್ವಾಮಿ ಹಾಗೂ ಸಿದ್ದಾಪುರದ ಶ್ರೀಗಳು ಆಶೀರ್ವಚನ ನೀಡಿದರು.

ಈ ಸಂದರ್ಭದಲ್ಲಿ ಜಾತ್ರಾ ಮಹೋತ್ಸ ಸಮಿತಿ ಅಧ್ಯಕ್ಷ ಸುಭಾಷ ವಾರದ, ದೇವಸ್ಥಾನ ಸಮಿತಿ ಅಧ್ಯಕ್ಷ ಮಲ್ಲಯ್ಯ ಚಿಕ್ಕಮಠ, ಪ್ರಮುಖರಾದ ಅಣ್ಣರಾವ ರಟಕಲ್, ರಾಜಕುಮಾರ ರಾಜೋಳೆ, ಸುಭಾಷ ಚಿಲ್ಲಶೇಟ್ಟಿ, ಭಕ್ತರಾಜ ಚಿತ್ತಾಪುರೆ, ಸಿದ್ರಾಮ ಇಂಡಿ, ಮಲ್ಲಿಕಾರ್ಜುನ ತಟಪಟ್ಟಿ, ಇಂದ್ರಕರಣ ಬಿರಾದಾರ, ನಾಗಣ್ಣ ಚಿಕ್ಕಪಾಟೀಲ, ಉದಯ ವಾರದ, ಭೀಮಶಾ ಕೋರಿ, ಶರಬಸಪ್ಪ ಪಡಶೇಟ್ಟಿ, ಮಹೇಶ ಚಿಲಶೇಟ್ಟಿ, ಸಂಗಮೇಶ ಸಿದ್ದೇಶ್ವರ, ಮೈಲಾರಿ ಬುಕ್ಕಾ, ಭೀಮಶಾ ಸ್ವಂತ, ಚಿದಾನಂದ ಚಿಕಮಠ ಹಾಗೂ ಪ್ರಕಾಶ ಬಾವಗಿ ಇದ್ದರು.

ಅದ್ದೂರಿ ರಥೋತ್ಸವ

ಶರಣ ಕಿನ್ನರಿ ಬೊಮ್ಮಯ್ಯನವರ ರಥೋತ್ಸವ ಸಂಭ್ರಮದಿಂದ ಜರುಗಿತು. ಭಕ್ತರ ಜೈ ಘೋಷಗಳ ನಡುವೆ ರಥೋತ್ಸವ ನಡೆಯಿತು. ಜಾತ್ರಾ ಮಹೋತ್ಸವದ ಅಂಗವಾಗಿ ದೇವಸ್ಥಾನದಲ್ಲಿ ಮಹಾರುದ್ರಾಭಿಷೇಕ ಪೂಜೆ, ಭಜನಾ ಕಾರ್ಯಕ್ರಮಗಳು ನಡೆದವು.

ಭಕ್ತರು ಬಾಳೆ ಹಣ್ಣುಗಳನ್ನು ಎರಚಿ ಹರಕೆ ತೀರಿಸಿ ರಥ ಎಳೆಯುವ ಮೂಲಕ ದರ್ಶನ ಪಡೆದುಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.