
ಬೀದರ್: ‘ಜಗನ್ಮಾತೆ ಅಕ್ಕಮಹಾದೇವಿ’ ಚಲನಚಿತ್ರದ ಮೊದಲ ಪ್ರದರ್ಶನಕ್ಕೆ ನಟಿ ಭವ್ಯ ಅವರು ನಗರದ ಚಿತ್ರಮಂದಿರದಲ್ಲಿ ಶುಕ್ರವಾರ ಚಾಲನೆ ನೀಡಿದರು.
ಥೇಟ್ ಅಕ್ಕಮಹಾದೇವಿಯವರ ನಟನೆ, ಸಾಕ್ಷಾತ್ ಅವರೇ ಕಣ್ಮುಂದೆ ಬಂದು ನಿಂತ ಅನುಭವ, ಸೌಮ್ಯತೆ, ತಾಳ್ಮೆ, ಶಬ್ದಗಳ ಉಚ್ಚಾರಣೆ, ವಚನಗಳ ಪ್ರಸ್ತುತಪಡಿಸಿದ ರೀತಿ ಎಲ್ಲವೂ ಅದ್ಭುತವಾಗಿ ಚಿತ್ರಗಳಲ್ಲಿ ಮೂಡಿಬಂದಿವೆ ಎಂದು ಸಿನಿಮಾ ವೀಕ್ಷಿಸಿದ ನಂತರ ಜಗನ್ಮಾತೆ ಚಲನಚಿತ್ರ ವೀಕ್ಷಣೆ ಮಾಡಿದ ಬಳಿಕ ಭವ್ಯ ಹೇಳಿದರು.
ವಿಷ್ಣುಕಾಂತ ಬಿ.ಜೆ. ಅವರ ನಟನೆ, ರಚನೆ, ನಿರ್ದೇಶನ ಈ ಚಿತ್ರಕ್ಕೆ ಸಾಕಷ್ಟಿದೆ. ಇನ್ನೂ ಯಶಸ್ವಿಯಾಗಿ ಅವರ ಸಿನಿ ಜರ್ನಿ ಮುಂದುವರೆಯಲಿ ಎಂದು ಶುಭ ಹಾರೈಸಿದರು.
ವಿಷ್ಣುಕಾಂತ ಬಿ.ಜೆ. ಮಾತನಾಡಿ, ಬೀದರ್‌ನಲ್ಲಿ ಬೆಳೆದ ಕಲಾವಿದರು ಈ ಚಿತ್ರದಲ್ಲಿ ಸುಂದರವಾಗಿ ನಟಿಸಿದ್ದಾರೆ. ಅವರಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಬೀದರನಲ್ಲಿ ಪ್ರೇಕ್ಷಕರು ಮನಃಪೂರ್ವಕವಾಗಿ ಚಿತ್ರವೀಕ್ಷಣೆ ಮಾಡಿ ಚಪ್ಪಾಳೆ ತಟ್ಟಿದ್ದಾರೆ. ಚಿತ್ರವು ಇನ್ನೂ ಹೆಚ್ಚು ಪ್ರಚಾರ ಕಾಣಲೆಂದು ಪ್ರಾರ್ಥಿಸುವೆ ಎಂದರು.
ಅಕ್ಕಮಹಾದೇವಿ ಚಲನಚಿತ್ರ ವೀಕ್ಷಿಸಿದ ವಕೀಲ ಅಶೋಕ ಮಾನೂರೆ ಹಾಗೂ ಸುರೇಶ ಪಾಟೀಲ ಮಾತನಾಡಿ, ಈ ಚಿತ್ರ ನೋಡಿ ಸ್ವತಃ ಅಕ್ಕಮಹಾದೇವಿಯವರನ್ನೇ ನೋಡಿದ ಅನುಭವವಾಯಿತು. ಸುಲಕ್ಷಾ ಖೈರಾ ಅವರು ತುಂಬಾ ಭಾವಪ್ರಧಾನವಾಗಿ ನಟನೆ ಮಾಡಿದ್ದಾರೆ. ಸಾಕಷ್ಟು ಜನರು ಈ ಚಿತ್ರ ವೀಕ್ಷಿಸಿ ಬೆನ್ನುತಟ್ಟಿದ್ದಾರೆ. ಕೌಶಿಕ ಮಹಾರಾಜ ಹಾಗೂ ಬಸವಣ್ಣನವರ ಪಾತ್ರದಲ್ಲಿ ವಿಷ್ಣುಕಾಂತ ಅವರು ಕಾಣಿಸಿಕೊಂಡಿದ್ದು ಖುಷಿ ಎನಿಸಿದೆ ಎಂದು ಹೇಳಿದರು.
ಬೀದರ್ ಜಿಲ್ಲೆಯಲ್ಲಿಯೂ ಯಾವ ಪ್ರತಿಭೆಗಳಿಗೂ ಕಡಿಮೆಯಿಲ್ಲ ಎನ್ನುವ ರೀತಿಯಲ್ಲಿ ಚಿತ್ರತಂಡ ಅದ್ಭುತ ಯಶಸ್ಸು ಕಂಡಿದೆ. ಚಲನಚಿತ್ರದಲ್ಲಿ ಎಲ್ಲಾ ಪಾತ್ರಗಳು ಉತ್ತಮವಾಗಿ ಮೂಡಿಬಂದಿವೆ. ಜನರು ಈ ಚಲನಚಿತ್ರ ವೀಕ್ಷಿಸಿ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.
ತಡೋಳಾ ರಾಜೇಶ್ವರ ಶಿವಾಚಾರ್ಯರು, ಬಸವ ಸೇವಾ ಪ್ರತಿಷ್ಠಾನದ ಗಂಗಾಂಬಿಕಾ ಅಕ್ಕ, ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಬಿ.ಜಿ.ಶೆಟಕಾರ್, ವಚನ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಅಲ್ಲಮಪ್ರಭು ನಾವದಗೆರೆ, ಹಾವಶೆಟ್ಟಿ ಪಾಟೀಲ, ವಂದೇ ಮಾತರಂ ಶಾಲೆಯ ಪ್ರಾಚಾರ್ಯ ರತ್ನಾ ಪಾಟೀಲ, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸುರೇಶ ಚನಶೆಟ್ಟಿ, ಸಾಹಿತಿಗಳಾದ ಭಾರತಿ ವಸ್ತ್ರದ್, ಜಯದೇವಿ ಯದಲಾಪುರೆ, ಶಿವಶಂಕರ ಟೋಕರೆ, ಶರಣಪ್ಪ ಮಿಠಾರೆ ಮತ್ತಿತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.