ADVERTISEMENT

ಜೈಭವಾನಿ ಜಾತ್ರೆ: ಸಂಗೀತ ಸಂಜೆ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2022, 12:22 IST
Last Updated 7 ಅಕ್ಟೋಬರ್ 2022, 12:22 IST
ಕಮಲನಗರ ತಾಲ್ಲೂಕಿನ ಬೇಲೂರು ಗ್ರಾಮದಲ್ಲಿ ಜೈ ಭವಾನಿ ‌ಜಾತ್ರಾ ಮಹೋತ್ಸವದ ಅಂಗವಾಗಿ ಹಾಸ್ಯ ಹಾಗೂ ಸಂಗೀತ ಸಂಜೆ ಕಾರ್ಯಕ್ರಮ ನಡೆಯಿತು
ಕಮಲನಗರ ತಾಲ್ಲೂಕಿನ ಬೇಲೂರು ಗ್ರಾಮದಲ್ಲಿ ಜೈ ಭವಾನಿ ‌ಜಾತ್ರಾ ಮಹೋತ್ಸವದ ಅಂಗವಾಗಿ ಹಾಸ್ಯ ಹಾಗೂ ಸಂಗೀತ ಸಂಜೆ ಕಾರ್ಯಕ್ರಮ ನಡೆಯಿತು   

ಬೇಲೂರು (ಹುಲಸೂರ): ತಾಲ್ಲೂಕಿನ ಬೇಲೂರು ಗ್ರಾಮದಲ್ಲಿ ‌ಜೈಭವಾನಿ ಜಾತ್ರಾ ಮಹೋತ್ಸವದ ಅಂಗವಾಗಿ 15 ದಿನ ವಿವಿಧ ಕಾರ್ಯಕ್ರಮ ಗಳನ್ನು ಹಮ್ಮಿಕೊಳ್ಳಲಾಗಿದೆ.

ಇಲ್ಲಿನ ಸಿದ್ಧರಾಮೇಶ್ವರ ಕಲ್ಯಾಣ ಮಂಟಪದಲ್ಲಿ ಅ.6 ರಂದು ನಡೆದ ಕಾರ್ಯಕ್ರಮದಲ್ಲಿ ಜ್ಯೂನಿಯರ್ ಡಾ.ರಾಜಕುಮಾರ, ಡಾ.ವಿಷ್ಣುವರ್ಧನ, ಅಂಬರೀಷ, ರವಿಚಂದ್ರನ್, ಗುರುಕಿರಣ್ ‌ಅವರು ಕಾರ್ಯಕ್ರಮ ನೀಡಿದರು. ನಂತರ ಸಾನ್ವಿ ಮೆಲೋಡಿಸ್ ಅವರು ಸಂಗೀತ ಕಾರ್ಯಕ್ರಮ ನಡೆಸಿ ಕೊಟ್ಟರು.

ಜೈ ಭವಾನಿ ಉತ್ಸವ ಸಮಿತಿ ಅಧ್ಯಕ್ಷ ಸೂರ್ಯಕಾಂತ ಚಿಲ್ಲಾಬಟೆ, ವೀರಶೆಟ್ಟಿ ಮಲಶೆಟ್ಟಿ, ರಾಜಕುಮಾರ ಹಲ್ಲಿಂಗೆ, ರಾಮಣ್ಣ ಹುಲಸೂರೆ, ರಾಮು ಸಾಗಾವೆ, ವಿಜಯಕುಮಾರ ಪಾಟೀಲ, ಪ್ರಶಾಂತ ಚಿಲ್ಲಾಬಟೆ, ಶಾಲಿವಾಹನ ಸತಣೆ, ಬಾಲಾಜಿ ಪಾಟೀಲ, ಸಂತೋಷ ಸೆಡೋಳೆ, ಹುಲ್ಲೆಪ್ಪ ವಗ್ಗೆ ಹಾಗೂ ಶರಣಪ್ಪ ಜೂಲ್ಪೆ ಇದ್ದರು.

ಬಸವರಾಜ ಗುಂಗೆ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.