ADVERTISEMENT

ಬೀದರ್ | ಜೆಜೆಎಂ ಕಾಮಗಾರಿಗೆ ಭೂಮಿಪೂಜೆ

ಸೋಲದಾಬಕಾ: ‘ಶಿವಾಜಿ ಪ್ರತಿಮೆ ನಿರ್ಮಿಸಲು ಪ್ರಯತ್ನ’

​ಪ್ರಜಾವಾಣಿ ವಾರ್ತೆ
Published 26 ಜೂನ್ 2022, 6:26 IST
Last Updated 26 ಜೂನ್ 2022, 6:26 IST
ಹುಲಸೂರ ಸಮೀಪದ ಸೋಲದಾಬಕಾ ಗ್ರಾಮದಲ್ಲಿ ಜೆಜೆಎಂ ಕಾಮಗಾರಿಗೆ ಶಾಸಕ ಶರಣು ಸಲಗರ ಭೂಮಿಪೂಜೆ ನೆರವೇರಿಸಿದರು
ಹುಲಸೂರ ಸಮೀಪದ ಸೋಲದಾಬಕಾ ಗ್ರಾಮದಲ್ಲಿ ಜೆಜೆಎಂ ಕಾಮಗಾರಿಗೆ ಶಾಸಕ ಶರಣು ಸಲಗರ ಭೂಮಿಪೂಜೆ ನೆರವೇರಿಸಿದರು   

ಸೋಲದಾಬಕಾ (ಹುಲಸೂರ): ಗ್ರಾಮದಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯು ಜೆಜೆಎಂ ಯೋಜನೆಯಡಿ ಸುಮಾರು ₹85.68 ಲಕ್ಷ ವೆಚ್ಚ ದಲ್ಲಿ ಕೈಗೆತ್ತಿಕೊಂಡ ಕಾಮಗಾರಿಗೆ ಶಾಸಕ ಶರಣು ಸಲಗರ ಭೂಮಿಪೂಜೆ ನೆರವೇರಿಸಿದರು.

ಗ್ರಾಮದ ಶಿವಾಜಿ ವೃತ್ತದಲ್ಲಿ ಪೂಜೆ ನೆರವೇರಿಸಿ ಮಾತನಾಡಿದ ಶಾಸಕ ಶರಣು ಸಲಗರ,‘ಯೋಜನೆ ಜಾರಿಯಿಂದ ಗ್ರಾಮದ 461 ಮನೆಗಳ ಬಾಗಿಲಿಗೆ ಕುಡಿಯುವ ನೀರು ತಲುಪಲಿದೆ. ಛತ್ರಪತಿ ಶಿವಾಜಿ ಪ್ರತಿಮೆ ನಿರ್ಮಿಸಬೇಕು ಎನ್ನುವುದು ಗ್ರಾಮಸ್ಥರ ಬೇಡಿಕೆಯಾಗಿದೆ. ಅವರ ಬೇಡಿಕೆ ಈಡೇರಿಸಲು ಪ್ರಯತ್ನ ಮಾಡಲಾಗುವುದು’ ಎಂದು ಹೇಳಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಸಂಜೀವ ಪಿ.ಭೂಸಾರೆ, ಉಪಾಧ್ಯಕ್ಷೆ ಸರಸ್ವತಿ ಬಾಬುರಾವ ಬಾಲಕುಂದೆ, ಪಿಕೆಪಿಎಸ್‌ ಅಧ್ಯಕ್ಷ ಓಂಕಾರ ಪಟ್ನೆ, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಸಿದ್ರಾಮ ಕಾಮಣ್ಣ, ಚಂದ್ರಕಾಂತ ದೆಟ್ನೆ, ವಿಶಾಲ ಪಾಟೀಲ, ರಣಜೀತ ಗಾಯಕವಾಡ, ದೇವಿಂದ್ರ ಭೊಪಳೆ, ಸಂಗಮೇಶ ಭೊಪಳೆ, ಶಿವ ಶೇಟ್ಟಗಾರ, ನಿತೀಶ ಪಾಟೀಲ, ಮುಕ್ತಾಬಾಯಿ, ದಿಲೀಪ್, ಎಸ್‌.ಬಿ.ನೀಟ್ಟೂರೆ ಅವರು ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.