ADVERTISEMENT

ಜನವಾಡ: 425 ಜನರ ಆರೋಗ್ಯ ಉಚಿತ ತಪಾಸಣೆ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2025, 11:34 IST
Last Updated 7 ಏಪ್ರಿಲ್ 2025, 11:34 IST
ಬೀದರ್ ತಾಲ್ಲೂಕಿನ ಮನ್ನಳ್ಳಿ ಗ್ರಾಮದಲ್ಲಿ ನಡೆದ ಶಿಬಿರದಲ್ಲಿ ವೈದ್ಯರು ಸಾರ್ವಜನಿಕರ ಆರೋಗ್ಯ ತಪಾಸಣೆ ನಡೆಸಿದರು
ಬೀದರ್ ತಾಲ್ಲೂಕಿನ ಮನ್ನಳ್ಳಿ ಗ್ರಾಮದಲ್ಲಿ ನಡೆದ ಶಿಬಿರದಲ್ಲಿ ವೈದ್ಯರು ಸಾರ್ವಜನಿಕರ ಆರೋಗ್ಯ ತಪಾಸಣೆ ನಡೆಸಿದರು    

ಜನವಾಡ: ರೋಟರಿ ಕ್ಲಬ್ ಬೀದರ್ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ವತಿಯಿಂದ ಬೀದರ್ ತಾಲ್ಲೂಕಿನ ಮನ್ನಳ್ಳಿ ಗ್ರಾಮದ ಬಸವ ಪ್ರೌಢಶಾಲೆಯಲ್ಲಿ ಭಾನುವಾರ ನಡೆದ ಶಿಬಿರದಲ್ಲಿ 425 ಜನರ ಉಚಿತ ಆರೋಗ್ಯ ತಪಾಸಣೆ ಮಾಡಲಾಯಿತು.

ದಂತ, ನೇತ್ರ, ಎಲುಬು, ನರ, ಕಿವಿ, ಮೂಗು, ಗಂಟಲು, ಹೃದಯ ಮೊದಲಾದ ರೋಗಗಳ ತಪಾಸಣೆ ನಡೆಸಿ, ಔಷಧ ವಿತರಿಸಲಾಯಿತು. ಇಸಿಜಿ, ಟೂಡಿ, ರಕ್ತದೊತ್ತಡ, ಮಧುಮೇಹ, ರಕ್ತ ಪರೀಕ್ಷೆಗಳನ್ನು ಸಹ ಉಚಿತವಾಗಿ ನಡೆಸಲಾಯಿತು. ನೇತ್ರ ಸಮಸ್ಯೆ ಹೊಂದಿದ ಐವರಿಗೆ ಶಸ್ತ್ರಚಿಕಿತ್ಸೆಗೆ ಸಲಹೆ ನೀಡಲಾಯಿತು.

ಡಾ.ವಿ.ವಿ.ನಾಗರಾಜ, ಡಾ.ಸಿದ್ಧಲಿಂಗೇಶ್ವರ ಎ. ಮಠಪತಿ, ಡಾ.ರಾಜಶೇಖರ ಸೇಡಂಕರ್, ಡಾ.ನಿತಿನ್ ಗುದಗೆ, ಡಾ.ಶಿವಕುಮಾರ ಪಾಟೀಲ, ಡಾ.ಪ್ರಶಾಂತ ಪಾಟೀಲ, ಡಾ.ಸುಪ್ರಿಯಾ ಕೋಡಗೆ ಪಾಟೀಲ, ಡಾ.ಪರಮೇಶ್ವರ ಬಿರಾದಾರ, ಡಾ.ವಿನಾಯಕ ಜ್ಯಾಂತೆ, ಡಾ.ಬಸವಪ್ರಸಾದ್ ಪಾಟೀಲ, ಎಸ್.ಬಿ.ಪಾಟೀಲ ದಂತ ಆಸ್ಪತ್ರೆ, ಮೇಗೂರ್ ಐ ಕೇರ್ ಆಸ್ಪತ್ರೆಯ ವೈದ್ಯರು ತಪಾಸಣೆ ಮಾಡಿದರು.

ADVERTISEMENT

ಜನರಿಗೆ ನೆರವಾಗಲು ಶಿಬಿರ: ‘ಗ್ರಾಮೀಣ ಭಾಗದ ಜನರಿಗೆ ನೆರವಾಗಲು ಉಚಿತ ಆರೋಗ್ಯ ತಪಾಸಣೆ ಶಿಬಿರ ಹಮ್ಮಿಕೊಳ್ಳಲಾಗಿದೆ’ ಎಂದು ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಕ್ಲಬ್ ಅಧ್ಯಕ್ಷ ಸೋಮಶೇಖರ ಪಾಟೀಲ ಹೇಳಿದರು.

ಬೀದರ್ ಎಪಿಎಂಸಿ ಮಾಜಿ ಅಧ್ಯಕ್ಷ ಅನಿಲಕುಮಾರ ಪನ್ನಾಳೆ ಶಿಬಿರ ಉದ್ಘಾಟಿಸಿದರು. ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ, ಪಿಎಸ್‍ಐ ನಂದಿನಿ, ಕ್ಲಬ್ ಮಾಜಿ ಅಧ್ಯಕ್ಷ ಹಾವಶೆಟ್ಟಿ ಪಾಟೀಲ, ರವಿ ಮೂಲಗೆ, ಡಾ.ಸಿದ್ಧಲಿಂಗೇಶ್ವರ ಮಠಪತಿ, ಕೃಪಾಸಿಂಧು ಪಾಟೀಲ, ಅನಿಲ್ ಮಸೂದಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.