ADVERTISEMENT

ಜಾತ್ರಾ ಮಹೋತ್ಸವ ಯಶಸ್ವಿಗೆ ಸಹಕರಿಸಿ

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2019, 11:16 IST
Last Updated 26 ಡಿಸೆಂಬರ್ 2019, 11:16 IST
ಹುಮನಾಬಾದ್‍ನ ವೀರಭದ್ರೇಶ್ವರ ಜಾತ್ರಾ ಮಹೋತ್ಸವ ನಿಮಿತ್ಯ ಮಂಗಳವಾರ ನಡೆದ ಪೂರ್ವಸಿದ್ಧತಾ ಸಭೆಯಲ್ಲಿ ಶಾಸಕ ರಾಜಶೇಖರ್ ಪಾಟೀಲ ಅವರು ಜಾತ್ರಾ ಮಹೋತ್ಸವ ಭಿತ್ತಿ ಪತ್ರಗಳನ್ನು ಬಿಡುಗಡೆ ಗೊಳಿಸಿದರು
ಹುಮನಾಬಾದ್‍ನ ವೀರಭದ್ರೇಶ್ವರ ಜಾತ್ರಾ ಮಹೋತ್ಸವ ನಿಮಿತ್ಯ ಮಂಗಳವಾರ ನಡೆದ ಪೂರ್ವಸಿದ್ಧತಾ ಸಭೆಯಲ್ಲಿ ಶಾಸಕ ರಾಜಶೇಖರ್ ಪಾಟೀಲ ಅವರು ಜಾತ್ರಾ ಮಹೋತ್ಸವ ಭಿತ್ತಿ ಪತ್ರಗಳನ್ನು ಬಿಡುಗಡೆ ಗೊಳಿಸಿದರು   

ಹುಮನಾಬಾದ್: ಐತಿಹಾಸಿಕ ವೀರಭದ್ರೇಶ್ವರ ಜಾತ್ರಾ ಮಹೋತ್ಸವದ ಯಶಸ್ವಿಗಾಗಿ ಜನರ ಸಹಕಾರ ಅವಶ್ಯ ಎಂದು ಶಾಸಕ ರಾಜಶೇಖರ ಪಾಟೀಲ್ ಹೇಳಿದರು.

ಜನವರಿ 10ರಿಂದ ಆರಂಭವಾಗಲಿರುವ ವೀರಭದ್ರೇಶ್ವರರ ಜಾತ್ರಾ ಮಹೋತ್ಸವದ ಅಂಗವಾಗಿ ಮಂಗಳವಾರ ದೇವಸ್ಥಾನದಲ್ಲಿ ನಡೆದ ಪೂರ್ವಸಿದ್ಧತಾ ಸಭೆಯಲ್ಲಿ ಅವರು ಭಿತ್ತಿ ಪತ್ರ ಬಿಡುಗಡೆಗೂಳಿಸಿ ಮಾತನಾಡಿದರು.

ವೀರಭದ್ರೇಶ್ವರ ದೇವಾಲಯ ಪುರಾತನ ದೇವಸ್ಥಾನದಲ್ಲಿ ಒಂದಾಗಿದ್ದು, ಜಾತ್ರಾ ಮಹೋತ್ಸವಕ್ಕೆ ಲಕ್ಷಾಂತರ ಜನ ಜನ ಆಗಮಿಸುವರು. ಪುರಸಭೆ, ತಹಶೀಲ್ದಾರ್, ಪೊಲೀಸ್ ಇಲಾಖೆ ಭಕ್ತರಿಗೆ ತೊಂದರೆಯಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದರು.

ADVERTISEMENT

ಪಟ್ಟಣದ ಅಂಬೇಡ್ಕರ್ ವೃತದಿಂದ ಸರ್ದಾರ‌ ಪಟೇಲ್ ಚೌಕ, ಬಸವೇಶ್ವರ ವೃತ್ತದ ಮುಖಾಂತರ ಶಿವಪುರ ಬಡಾವಣೆಯಿಂದ ಮುಖ್ಯ ರಸ್ತೆವರೆಗೆ ₹1ಕೋಟಿ 14ಲಕ್ಷ ವೆಚ್ಚದಲ್ಲಿ ರಸ್ತೆ ನಿರ್ಮಾಣ ಮಾಡಲಾಗಿದೆ. ವೀರಭದ್ರೇಶ್ವರ ದೇವಸ್ಥಾನಕ್ಕೆ ಒಳಪಡುವ ಸುಂದರ ಅಗ್ನಿಕುಂಡ ನಿರ್ಮಾಣಕ್ಕಾಗಿ ₹50ಲಕ್ಷ ನೀಡಲಾಗಿದೆ ಎಂದರು.

ಹಿರೇಮಠ ಸಂಸ್ಥಾನದ ಪೀಠಾಧಿಪತಿ ರೇಣುಕಾ ವೀರಗಂಗಾಧರ ಶಿವಾಚಾರ್ಯರು ಆಶೀರ್ವಚನ ನೀಡಿದರು.

ದೇವಸ್ಥಾನದ ಗೌರವ ಕಾರ್ಯದರ್ಶಿ ವೀರಣ್ಣ ಪಾಟೀಲ, ತಹಶೀಲ್ದಾರ್ ನಾಗಯ್ಯ ಹಿರೇಮಠ, ಪುರಸಭೆ ಮುಖ್ಯಾಧಿಕಾರಿ ಶಂಭುಲಿಂಗ ದೇಸಾಯಿ, ಸಿಪಿಐ ಜೆ.ಎಸ್.ನ್ಯಾಮಗೌಡರು, ಪಿಎಸ್‍ಐ ರವಿಕುಮಾರ, ಬಸವರಾಜ ಆರ್ಯ, ಮಲ್ಲಿಕಾರ್ಜುನ ಮಾಶೆಟ್ಟಿ, ಪುರಸಭೆ ಸದಸ್ಯರಾದ ಅಫ್ಸರಮಿಯ್ಯ, ವಿಜಯಕುಮಾರ ದುರ್ಗದ, ಅನಿಲ ಪಲ್ಲೆರಿ, ಬಾಬುರಾವ್ ಪರಮಶೆಟ್ಟಿ, ಶ್ರೀನಿವಾಸ ಚವಾಣ್, ಬಾಬುರಾವ್ ಪೋಚಂಪಳ್ಳಿ, ಶಾಂತವೀರ ಯಲಾಲ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.