ADVERTISEMENT

25 ಗ್ರಾಮಗಳಲ್ಲಿ ಜೆಜೆಎಂ ಯೋಜನೆ ಅನುಷ್ಠಾನ

ಬೀದರ್ ತಾಲ್ಲೂಕಿನ ಪಂಚಾಯತ್‍ರಾಜ್ ಸಂಸ್ಥೆ ಸದಸ್ಯರಿಗೆ ತರಬೇತಿ ಕಾರ್ಯಾಗಾರ

​ಪ್ರಜಾವಾಣಿ ವಾರ್ತೆ
Published 31 ಜುಲೈ 2021, 12:03 IST
Last Updated 31 ಜುಲೈ 2021, 12:03 IST
ಬೀದರ್‌ ತಾಲ್ಲೂಕು ಪಂಚಾಯಿತಿಯಲ್ಲಿ ನಡೆದ ಪಂಚಾಯತ್‍ರಾಜ್ ಸಂಸ್ಥೆಗಳ ಸದಸ್ಯರ ತರಬೇತಿ ಕಾರ್ಯಾಗಾರವನ್ನು ಗಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಬೀದರ್ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಅಶೋಕ ವಂಗಪಲ್ಲಿ ಉದ್ಘಾಟಿಸಿದರು. ಡಾ. ನಂದಕುಮಾರ ತಾಂದಳೆ, ಶರತಕುಮಾರ ಇದ್ದರು
ಬೀದರ್‌ ತಾಲ್ಲೂಕು ಪಂಚಾಯಿತಿಯಲ್ಲಿ ನಡೆದ ಪಂಚಾಯತ್‍ರಾಜ್ ಸಂಸ್ಥೆಗಳ ಸದಸ್ಯರ ತರಬೇತಿ ಕಾರ್ಯಾಗಾರವನ್ನು ಗಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಬೀದರ್ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಅಶೋಕ ವಂಗಪಲ್ಲಿ ಉದ್ಘಾಟಿಸಿದರು. ಡಾ. ನಂದಕುಮಾರ ತಾಂದಳೆ, ಶರತಕುಮಾರ ಇದ್ದರು   

ಬೀದರ್: ಬೀದರ್ ತಾಲ್ಲೂಕಿನ 25 ಗ್ರಾಮಗಳಲ್ಲಿ ಜಲಜೀವನ ಮಿಷನ್ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಜಲ ಜೀವನ ಮಿಷನ್ ಯೋಜನೆ ತಂಡದ ಮುಖ್ಯಸ್ಥ ಡಾ. ನಂದಕುಮಾರ ತಾಂದಳೆ ಹೇಳಿದರು.

ಇಲ್ಲಿಯ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಜಲ ಜೀವನ ಮಿಷನ್ ಯೋಜನೆ ಕುರಿತು ಬೀದರ್ ತಾಲ್ಲೂಕಿನ ಪಂಚಾಯತ್‍ರಾಜ್ ಸಂಸ್ಥೆಗಳ ಸದಸ್ಯರಿಗೆ ಆಯೋಜಿಸಿದ್ದ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಜಿಲ್ಲೆಯ ಒಟ್ಟು 135 ಗ್ರಾಮಗಳಲ್ಲಿ ಯೋಜನೆ ಕಾಮಗಾರಿಗಳು ನಡೆದಿವೆ. ಕಾಮಗಾರಿ ಪೂರ್ಣಗೊಂಡ ನಂತರ ಪ್ರತಿ ಮನೆಗೂ ಶುದ್ಧ ಕುಡಿಯುವ ನೀರು ದೊರಕಲಿದೆ ಎಂದು ತಿಳಿಸಿದರು.

ADVERTISEMENT

ಕೇಂದ್ರ ಹಾಗೂ ರಾಜ್ಯ ಸರ್ಕಾರದ ಪಾಲುದಾರಿಕೆಯ ಯೋಜನೆ ಇದಾಗಿದೆ. ಗ್ರಾಮ ಪಂಚಾಯಿತಿ ವಂತಿಕೆ ಶೇ 15 ಹಾಗೂ ಸಮುದಾಯ ವಂತಿಕೆ ಶೇ 10 ರಷ್ಟು ಇರಲಿದೆ ಎಂದು ಹೇಳಿದರು.

ಕ್ರಿಯಾತ್ಮಕ ನಲ್ಲಿ ಅಳವಡಿಕೆ ಮೂಲಕ ಪ್ರತಿ ಮನೆಗೆ ನಿರಂತರ ನೀರು, ಇಂಗು ಗುಂಡಿಗಳ ನಿರ್ಮಾಣ, ಬಳಕೆಯಾದ ನೀರು ಶುದ್ಧೀಕರಿಸಿ ಮರು ಬಳಕೆ ಮೊದಲಾದವು ಯೋಜನೆಯಲ್ಲಿ ಸೇರಿವೆ ಎಂದು ತಿಳಿಸಿದರು.

ಪಂಚಾಯಿತಿ ಚುನಾಯಿತ ಪ್ರತಿನಿಧಿಗಳು ಹಾಗೂ ವಿ.ಡಬ್ಲ್ಯೂ.ಎಸ್.ಸಿ. ಸಮಿತಿ ಸದಸ್ಯರು ಕಾಮಗಾರಿ ಗುಣಮಟ್ಟದ ಪರಿಶೀಲಿಸಬೇಕು. ತಿಂಗಳಿಗೊಮ್ಮೆ ಪ್ರಗತಿ ಪರಿಶೀಲನೆ ಸಭೆ ನಡೆಸಬೇಕು ಎಂದು ಸಲಹೆ ಮಾಡಿದರು.

ಕಾರ್ಯಾಗಾರ ಉದ್ಘಾಟಿಸಿದ ಗಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಬೀದರ್ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಅಶೋಕ ವಂಗಪಲ್ಲಿ ಮಾತನಾಡಿ, ಕುಡಿಯುವ ನೀರಿನ ಕಾಮಗಾರಿಗಳ ನ್ನು ಗುಣಮಟ್ಟದೊಂದಿಗೆ ಕೈಗೊಳ್ಳಬೇಕು. ಯೋಜನೆ ಯಶಸ್ವಿಗೆ ಪಂಚಾಯತ್‍ರಾಜ್ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಸಹಕರಿಸಬೇಕು ಎಂದು ಹೇಳಿದರು.

ತಾಲ್ಲೂಕು ಪಂಚಾಯಿತಿಯ ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಸಹಾಯಕ ನಿರ್ದೇಶಕ ಶರತಕುಮಾರ ಮಾತನಾಡಿ, ಯೋಜನೆಗೆ 15ನೇ ಹಣಕಾಸು ನಿಧಿಯಿಂದ ಗ್ರಾಮ ಪಂಚಾಯಿತಿಗಳು ಶೇ 15 ರಷ್ಟು ಅನುದಾನ ಒದಗಿಸಬೇಕು. ಗ್ರಾಮಸ್ಥರಿಂದ ಶೇ 10 ರಷ್ಟು ವಂತಿಕೆ ಸಂಗ್ರಹಿಸಬೇಕು ಎಂದು ತಿಳಿಸಿದರು.

ಸಂಪನ್ಮೂಲ ವ್ಯಕ್ತಿಗಳಾದ ದಿಲೀಪಕುಮಾರ ಹಾಗೂ ಶಿವರಾಜ ಅವರು ಯೋಜನೆ ಕಾಮಗಾರಿಗಳ ಮೇಲುಸ್ತುವಾರಿ, ಅಂತರ್ಜಲ ಪುನಃಶ್ಚೇತನ, ಸಮುದಾಯ ವಂತಿಕೆ ಸಂಗ್ರಹ ಕುರಿತು ತರಬೇತಿ ನೀಡಿದರು.

ಜಲ ಜೀವನ ಮಿಷನ್ ಯೋಜನೆ ಹಾಗೂ ಲಾಲ್ ಬಹಾದ್ದೂರ್ ಶಿಕ್ಷಣ ಸಂಸ್ಥೆ ಸಹಯೋಗದಲ್ಲಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.