ADVERTISEMENT

ಸಿಂಡಿಕೇಟ್ ಸದಸ್ಯರಾಗಿ ಜೋಶಿ: ಸತ್ಕಾರ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2023, 15:53 IST
Last Updated 3 ಮಾರ್ಚ್ 2023, 15:53 IST
ವಿಜಯಪುರದ ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾಗಿ ನೇಮಕಗೊಂಡ ಎಸ್.ಆರ್. ಜೋಶಿ ಅವರನ್ನು ಬೀದರ್‌ನ ಇಂಡಿಯನ್ ಕಾಲೇಜ್ ಆಫ್ ಎಜುಕೇಷನ್ ಫಾರ್ ವುಮೆನ್ಸ್‍ನಲ್ಲಿ ಸನ್ಮಾನಿಸಲಾಯಿತು
ವಿಜಯಪುರದ ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾಗಿ ನೇಮಕಗೊಂಡ ಎಸ್.ಆರ್. ಜೋಶಿ ಅವರನ್ನು ಬೀದರ್‌ನ ಇಂಡಿಯನ್ ಕಾಲೇಜ್ ಆಫ್ ಎಜುಕೇಷನ್ ಫಾರ್ ವುಮೆನ್ಸ್‍ನಲ್ಲಿ ಸನ್ಮಾನಿಸಲಾಯಿತು   

ಬೀದರ್: ವಿಜಯಪುರದ ಕರ್ನಾಟಕ ರಾಜ್ಯ ಅಕ್ಕ ಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯರಾಗಿ ನೇಮಕಗೊಂಡ ಎಸ್.ಆರ್. ಜೋಶಿ ಅವರನ್ನು ಇಲ್ಲಿಯ ಇಂಡಿಯನ್ ಕಾಲೇಜ್ ಆಫ್ ಎಜುಕೇಷನ್ ಫಾರ್ ವುಮೆನ್ಸ್‍ನಲ್ಲಿ ಸನ್ಮಾನಿಸಲಾಯಿತು.

ಕಲಬುರಗಿಯ ಡೆಕ್ಕನ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಖುರ್ಷಿದ್ ಖಾನ್ ಶಾಲು ಹೊದಿಸಿ, ಪುಷ್ಪಗುಚ್ಛ ನೀಡಿ ಸತ್ಕರಿಸಿದರು.

ಶ್ರದ್ಧೆ ಹಾಗೂ ಪ್ರಾಮಾಣಿಕತೆಯಿಂದ ಕಾರ್ಯ ನಿರ್ವಹಿಸುವವರಿಗೆ ಉನ್ನತ ಹುದ್ದೆಗಳು ಒಲಿದು ಬರುತ್ತವೆ. ಅದಕ್ಕೆ ಜೋಶಿ ಅವರೇ ನಿದರ್ಶನವಾಗಿದ್ದಾರೆ ಎಂದು ಅವರು ಹೇಳಿದರು.

ADVERTISEMENT

ಕಾಲೇಜಿನ ಬೋಧಕ, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.