ಬಸವಕಲ್ಯಾಣ: ‘ತಾಲ್ಲೂಕಿನ ಗುಣತೀರ್ಥದ ಕಲ್ಯಾಣ ಮಹಾಮನೆ ಮಹಾಮಠದಲ್ಲಿ ಹಮ್ಮಿಕೊಂಡಿರುವ ಶರಣ ಜ್ಞಾನ ಶಿಬಿರದ ಅಂಗವಾಗಿ ಶರಣೆ ದಾನಮ್ಮ ಜ್ಯೋತಿ ಯಾತ್ರೆ ಆರಂಭಿಸಲಾಗಿದೆ' ಎಂದು ಮಹಾಮನೆ ಬಸವಪ್ರಭು ಸ್ವಾಮೀಜಿ ತಿಳಿಸಿದ್ದಾರೆ.
‘ದಾನಮ್ಮನವರ ಕ್ಷೇತ್ರ ಗುಡ್ಡಾಪುರದಿಂದ ಕಲ್ಯಾಣದವರೆಗೆ ಯಾತ್ರೆ ನಡೆಯಲಿದೆ. 13ನೇ ಜ್ಯೋತಿಯಾತ್ರೆ ಇದಾಗಿದ್ದು ಏಪ್ರಿಲ್ 20ಕ್ಕೆ ಇಲ್ಲಿಗೆ ಬರುವುದು. ಅಂದು ಮತ್ತು ಏಪ್ರಿಲ್ 21ರಂದು ಇಲ್ಲಿನ ಮಹಾಮನೆಯಲ್ಲಿ ಬಸವಣ್ಣನವರ ವಿಚಾರಗಳ ಸ್ಮರಣೆಗಾಗಿ ಶರಣ ಸಮಾಗಮ, ಶರಣ ಜ್ಞಾನ ಶಿಬಿರ ನಡೆಯುವುದು. ರಾಜಕೀಯ ಮುಖಂಡರು, ನಾಡಿನ ಚಿಂತಕರು, ಸಾಹಿತಿ, ಗಣ್ಯರು ಪಾಲ್ಗೊಳ್ಳುವರು' ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.