ADVERTISEMENT

ನಾಲ್ಕು ತಿಂಗಳಲ್ಲಿ ಕಮಠಾಣ-ಬಾವಗಿ ರಸ್ತೆ ಪೂರ್ಣ: ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ

​ಪ್ರಜಾವಾಣಿ ವಾರ್ತೆ
Published 3 ಜನವರಿ 2026, 6:02 IST
Last Updated 3 ಜನವರಿ 2026, 6:02 IST
ಬೀದರ್ ತಾಲ್ಲೂಕಿನ ಕಮಠಾಣ-ಬಾವಗಿ ರಸ್ತೆ ಕಾಮಗಾರಿಯನ್ನು ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಪರಿಶೀಲಿಸಿದರು
ಬೀದರ್ ತಾಲ್ಲೂಕಿನ ಕಮಠಾಣ-ಬಾವಗಿ ರಸ್ತೆ ಕಾಮಗಾರಿಯನ್ನು ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಪರಿಶೀಲಿಸಿದರು   

ಮಂದಕನಳ್ಳಿ(ಜನವಾಡ): ಬೀದರ್ ತಾಲ್ಲೂಕಿನ ಕಮಠಾಣ-ಬಾವಗಿ ರಸ್ತೆ ನಿರ್ಮಾಣ ಕಾಮಗಾರಿ ನಾಲ್ಕು ತಿಂಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಹೇಳಿದರು.

ಬೀದರ್ ತಾಲ್ಲೂಕಿನ ಮಂದಕನಳ್ಳಿ ಸಮೀಪ ಪೇವರ್ ಯಂತ್ರದಿಂದ ನಡೆಯುತ್ತಿರುವ ಕಾಮಗಾರಿಯನ್ನು ಶುಕ್ರವಾರ ಪರಿಶೀಲಿಸಿ ಅವರು ಮಾತನಾಡಿದರು.

‘ಕೇಂದ್ರ ರಸ್ತೆ ನಿಧಿಯ ₹ 6 ಕೋಟಿ ವೆಚ್ಚದಲ್ಲಿ 8 ಕಿ.ಮೀ. ಉದ್ದದ ರಸ್ತೆ ನಿರ್ಮಿಸಲಾಗುತ್ತಿದೆ. 15 ಅಡಿ ಅಗಲದ ಈ ರಸ್ತೆ ನಿರ್ಮಾಣದ ನಂತರ ಕಮಠಾಣ, ಶಮಶೀರನಗರ, ಕಂಗನಕೋಟ್, ಬಾವಗಿ, ಸಿರ್ಸಿ(ಎ), ನೆಲವಾಡ, ಸಂಗೋಳಗಿ ಹಾಗೂ ಇತರ ಗ್ರಾಮಗಳಿಗೆ ಸಂಪರ್ಕ ಸುಲಭವಾಗಲಿದೆ’ ಎಂದು ತಿಳಿಸಿದರು.

ADVERTISEMENT

‘ಗುಣಮಟ್ಟದೊಂದಿಗೆ ನಿಗದಿತ ಕಾಲಮಿತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಲು ಸಂಬಂಧಪಟ್ಟವರಿಗೆ ಸೂಚಿಸಿದರು.

‘ಬರುವ ದಿನಗಳಲ್ಲಿ ಕರ್ನಾಟಕ ಪಶು ವೈದ್ಯಕೀಯ ವಿಶ್ವವಿದ್ಯಾಲಯದಿಂದ ಕಮಠಾಣ ವರೆಗೆ ರಸ್ತೆ ವಿಭಜಕ, ಬೀದಿ ದೀಪ ಸಹಿತ ದ್ವಿಪಥ ರಸ್ತೆ ನಿರ್ಮಿಸುವ ಯೋಜನೆಯಿದೆ’ ಎಂದು ತಿಳಿಸಿದರು.

ಶಾಸಕರು ಪೇವರ್ ಯಂತ್ರವನ್ನು ಸ್ವಲ್ಪ ಖುದ್ದು ಚಲಾಯಿಸಿದರು. ಗೇಜ್ ಹಿಡಿದು, ರಸ್ತೆ ಅಗೆದು, ಗುಣಮಟ್ಟ ಪರೀಕ್ಷಿಸಿದರು.

ಕನ್‍ಸ್ಟ್ರಕ್ಷನ್ಸ್ ಸಂಸ್ಥೆ ಮುಖ್ಯಸ್ಥ ಶಂಕರರಾವ ಕೊಟರಕಿ, ಮುಖಂಡರಾದ ಸುರೇಶ ಮಾಶೆಟ್ಟಿ, ನಾಗಭೂಷಣ ಕಮಠಾಣೆ, ಚಂದ್ರಯ್ಯ ಸ್ವಾಮಿ, ಉಮೇಶ ಯಾಬಾ, ಸಂತೋಷ ರೆಡ್ಡಿ, ರಾಜಶೇಖರ ನೌಬಾದೆ, ಓಂಕಾರ ಮಜಗೆ, ರಾಜಕುಮಾರ ಪಾಟೀಲ ಮೊದಲಾದವರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.