ADVERTISEMENT

ಸಾಹಿತ್ಯಕ್ಕೆ ಕನಕದಾಸರ ಕೊಡುಗೆ ಅಪಾರ

ಕನಕದಾಸ ಜಯಂತಿ ಕಾರ್ಯಕ್ರಮದಲ್ಲಿ ಶಾಸಕ ಪಾಟೀಲ ಅಭಿಮತ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2022, 4:35 IST
Last Updated 5 ಡಿಸೆಂಬರ್ 2022, 4:35 IST
ಹುಮನಾಬಾದ್ ಪಟ್ಟಣದ ತೇರು ಮೈದಾನದಲ್ಲಿ ಭಾನುವಾರ ನಡೆದ ಕನಕದಾಸ ಜಯಂತಿ ಕಾರ್ಯಕ್ರಮಕ್ಕೆ ಶಾಸಕ ರಾಜಶೇಖರ ಪಾಟೀಲ ಚಾಲನೆ ನೀಡಿದರು
ಹುಮನಾಬಾದ್ ಪಟ್ಟಣದ ತೇರು ಮೈದಾನದಲ್ಲಿ ಭಾನುವಾರ ನಡೆದ ಕನಕದಾಸ ಜಯಂತಿ ಕಾರ್ಯಕ್ರಮಕ್ಕೆ ಶಾಸಕ ರಾಜಶೇಖರ ಪಾಟೀಲ ಚಾಲನೆ ನೀಡಿದರು   

ಹುಮನಾಬಾದ್: ‘ಕನ್ನಡ ಭಾಷೆಗೆ ದಾಸರ ಕೊಡುಗೆ ಅಪಾರ’ ಎಂದು ಶಾಸಕ ರಾಜಶೇಖರ ಪಾಟೀಲ ಹೇಳಿದರು.

ಪಟ್ಟಣದ ತೇರು ಮೈದಾನದಲ್ಲಿ ಗೊಂಡ ಸಮಾಜದ ವತಿಯಿಂದ ನಡೆದ ಕನಕದಾಸ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕನಕದಾಸರು ದಾಸ ಸಾಹಿತ್ಯದ ಮೂಲಕ ಸಮಾಜದಲ್ಲಿನ ಜಾತಿ ಪದ್ಧತಿ ಹೋಗಲಾಡಿಸಲು ಶ್ರಮಿಸಿದರು. ಹಾಲುಮತ ಸಮಾಜದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಅಧಿಕಾರ ಅವಧಿಯಲ್ಲಿ ರಾಜ್ಯದ ಸರ್ವ ಜನಾಂಗದವರ ಅಭಿವೃದ್ಧಿಗಾಗಿ ಸಾಕಷ್ಟು ಶ್ರಮಿಸಿದ್ದಾರೆ ಎಂದರು.

ADVERTISEMENT

ಶಾಸಕ ಬಂಡೆಪ್ಪ ಕಾಶೆಂಪೂರ ಮಾತನಾಡಿ,‘ಸಮಾಜದ ಅಂಕು–ಡೊಂಕುಗಳನ್ನು ತಿದ್ದಲು ಬುದ್ಧ, ಬಸವ ಹಾಗೂ ಡಾ.ಬಿ.ಆರ್.ಅಂಬೇಡ್ಕರ್, ಕನಕದಾಸರು ಸೇರಿ ಮಹನೀಯರು ನಿಸ್ವಾರ್ಥವಾಗಿ ಸೇವೆ ಸಲ್ಲಿಸಿದ್ದಾರೆ’ ಎಂದರು. ಕನಕದಾಸರ ಭಾವಚಿತ್ರ ಮೆರವಣಿಗೆ ನಡೆಯಿತು. ಪಟ್ಟಣದ ಬೀರಲಿಂಗೇಶ್ವರ ದೇವಸ್ಥಾನದಿಂದ ಆರಂಭವಾದ ಮೆರವಣಿಗೆಯು ಶಿವಾಜಿ ಮಹಾರಾಜ ವೃತ್ತ, ಬಸವೇಶ್ವರ ವೃತ್ತ, ಬಾಲಾಜಿ ಮಂದಿರ, ಸರ್ದಾರ್ ವಲ್ಲಾಭಭಾಯಿ ಪಟೇಲ್ ವೃತ್ತ, ಡಾ.ಬಿ.ಆರ್.ಅಂಬೇಡ್ಕರ್ ವೃತ್ತ, ವೀರಭದ್ರೇಶ್ವರ ಅಗ್ನಿ ಕುಂಡ ಸೇರಿ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಾಗಿತು. ಡಿಜೆ ಹಾಡಿಗೆ ಯುವಕರು ಕುಣಿದು ಕುಪ್ಪಳಿಸಿದರು.

ಮಚೇಂದ್ರ ಸ್ವಾಮಿ, ಜ್ಞಾನಸಾಗರ ಭಂತೋಜಿ, ಮಲ್ಲಯ್ಯ ಮುತ್ಯಾ, ಪುರಸಭೆ ಅಧ್ಯಕ್ಷೆ ನೀತು ಶರ್ಮಾ, ಡಾ.ಸಿದ್ದು ಪಾಟೀಲ, ಸತೀಶ ರಾಂಪೂರೆ, ಗೋರೆಮಿಯ, ನಾರಾಯಣ ರಾಂಪೂರೆ, ಆನಂದ ಖಂಡಗೊಂಡ, ಬಸವರಾಜ ಮೊಳಕೇರಿ, ಮಾಣಿಕಪ್ಪ ಬಕ್ಕಣ, ಶಿವರಾಜ ಚೀನಕೇರಿ, ಪಾಂಡುರಂಗ ಖಂಡಗೊಂಡ, ಅಶೋಕ ಸೊಂಡೆ, ಅನ್ನರಾಜ ಆಣದೂರೆ, ವೀರೇಶ ಕನಕಟ್ಟಾ, ಗುಂಡಪ್ಪ ಹೊನ್ನಕೇರಿ, ಸಂಜುಕುಮಾರ ವಡ್ಡನಕೇರಾ, ಶಂಕರ ನಿಂಬೂರ, ಮಲ್ಲಿಕಾರ್ಜುನ್ ಜಟಗೊಂಡ, ಮಲ್ಲಿಕಾರ್ಜುನ ಮೊಳಕೇರಾ, ಶರದ್‌ಕುಮಾರ ನಾರಾಯಣಪೇಟ್ಕರ್, ಶಿವರಾಜ, ಅನಿಲ ಮಲ್ಕಾಪೂರ, ರವಿ, ಉತ್ತಮ ನಂದಗಾಂವ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.