ADVERTISEMENT

ಸಾಹಿತಿ ಎಸ್.ಎಂ.ಹಿರೇಮಠ ಅವರಿಗೆ 'ಶ್ರೀಚೆನ್ನರೇಣುಕ ಬಸವ' ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2025, 11:21 IST
Last Updated 3 ಸೆಪ್ಟೆಂಬರ್ 2025, 11:21 IST
<div class="paragraphs"><p>ಎಸ್‌.ಎಂ. ಹಿರೇಮಠ</p></div>

ಎಸ್‌.ಎಂ. ಹಿರೇಮಠ

   

ಬಸವಕಲ್ಯಾಣ: ಸಾಹಿತಿ ಹಾಗೂ ನಿವೃತ್ತ ಪ್ರಾಧ್ಯಾಪಕ ಕಲಬುರಗಿಯ ಎಸ್.ಎಂ.ಹಿರೇಮಠ ಅವರು ಹಾರಕೂಡ ಹಿರೇಮಠ ಸಂಸ್ಥಾನದ ಪ್ರಸಕ್ತ ಸಾಲಿನ `ಶ್ರೀಚೆನ್ನರೇಣುಕ ಬಸವ' ಪ್ರಶಸ್ತಿಗೆ ಭಾಜನರಾಗಿದ್ದಾರೆ. ಪ್ರಶಸ್ತಿಯು ₹1 ಲಕ್ಷ ನಗದು, ಎರಡು ತೊಲೆ ಚಿನ್ನದ ಪದಕ ಮತ್ತು ಫಲಕ ಒಳಗೊಂಡಿದೆ.

`ಎಸ್.ಎಂ.ಹಿರೇಮಠ ಅವರು 300ಕ್ಕೂ ಅಧಿಕ ಗ್ರಂಥ ರಚಿಸಿದ್ದಾರೆ. ಇವರು ಸಾಹಿತ್ಯ, ಶಿಕ್ಷಣ ಮತ್ತು ಸಂಶೋಧನಾ ಕ್ಷೇತ್ರಕ್ಕೆ ಸಲ್ಲಿಸಿದ ಸೇವೆ ಪರಿಗಣಿಸಿ ಪ್ರಶಸ್ತಿ ನೀಡಲಾಗುತ್ತಿದೆ’ ಎಂದು ಹಿರೇಮಠದ ಪೀಠಾಧಿಪತಿ ಚನ್ನವೀರ ಶಿವಾಚಾರ್ಯರು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ADVERTISEMENT

ಅಕ್ಟೋಬರ್ 1ರಂದು ಮಠದಲ್ಲಿ ಆಯೋಜಿಸುವ ಅನುಭಾವ ಪ್ರಚಾರ ಉಪನ್ಯಾಸ ಮಾಲೆ ಕಾರ್ಯಕ್ರಮದಲ್ಲಿ ಗಣ್ಯರ ಉಪಸ್ಥಿತಿಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.