ADVERTISEMENT

ಕನ್ನಡ ಗೀತ ಗಾಯನ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2021, 14:32 IST
Last Updated 28 ಅಕ್ಟೋಬರ್ 2021, 14:32 IST
ಬೀದರ್‌ ತಾಲ್ಲೂಕಿನ ಬಗದಲ್ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಆಕಾಶವಾಣಿ ಕಲಾವಿದ ಮಲ್ಲಿಕಾರ್ಜುನ ಸ್ವಾಮಿ, ಸಂಗೀತ ಶಿಕ್ಷಕಿ ತ್ರಿವೇಣಿ ಮಠಪತಿ, ಪ್ರಾಚಾರ್ಯ ಚೆನ್ನಬಸವ ಹೇಡೆ ನೇತೃತ್ವದಲ್ಲಿ ಕನ್ನಡ ಗೀತ ಗಾಯನ ಕಾರ್ಯಕ್ರಮ ನಡೆಯಿತು
ಬೀದರ್‌ ತಾಲ್ಲೂಕಿನ ಬಗದಲ್ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಆಕಾಶವಾಣಿ ಕಲಾವಿದ ಮಲ್ಲಿಕಾರ್ಜುನ ಸ್ವಾಮಿ, ಸಂಗೀತ ಶಿಕ್ಷಕಿ ತ್ರಿವೇಣಿ ಮಠಪತಿ, ಪ್ರಾಚಾರ್ಯ ಚೆನ್ನಬಸವ ಹೇಡೆ ನೇತೃತ್ವದಲ್ಲಿ ಕನ್ನಡ ಗೀತ ಗಾಯನ ಕಾರ್ಯಕ್ರಮ ನಡೆಯಿತು   

ಬೀದರ್‌: ತಾಲ್ಲೂಕಿನ ಬಗದಲ್ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ ನಿಮಿತ್ತ ಕನ್ನಡಕ್ಕಾಗಿ ನಾವು ಅಭಿಯಾನದಡಿಯಲ್ಲಿ ಸಾಮೂಹಿಕ ಕನ್ನಡ ಗೀತ ಗಾಯನ ಕಾರ್ಯಕ್ರಮ ಜರುಗಿತು.

ಆಕಾಶವಾಣಿ ಕಲಾವಿದ ಮಲ್ಲಿಕಾರ್ಜುನ ಸ್ವಾಮಿ, ಸಂಗೀತ ಶಿಕ್ಷಕಿ ತ್ರಿವೇಣಿ ಮಠಪತಿ, ಪ್ರಾಚಾರ್ಯ ಚೆನ್ನಬಸವ ಹೇಡೆ ನೇತೃತ್ವದಲ್ಲಿ ರಾಷ್ಟ್ರ ಕವಿ ಕುವೆಂಪುರವರ ನಾಡಗೀತೆ ಮತ್ತು ಬಾರಿಸು ಕನ್ನಡ ಡಿಂಡಿಮವ, ಕವಿ ನಿಸಾರ್‌ಅಹ್ಮದ್ ಅವರ ಜೋಗದ ಸಿರಿ ಬೆಳಕಿನಲ್ಲಿ, ಖ್ಯಾತ ನಿರ್ದೇಶಕ ಹಂಸಲೇಖರ ಹುಟ್ಟಿದರೆ ಕನ್ನಡ ನಾಡಿನಲ್ಲಿ ಹುಟ್ಟಬೇಕು ಕನ್ನಡ ಗೀತ ಗಾಯನ ನಡೆಯಿತು.ಇದೇ ಸಂದರ್ಭದಲ್ಲಿ ಕನ್ನಡ ಬಳಕೆಯ ಸಂಕಲ್ಪ ಪ್ರತಿಜ್ಞಾ ವಿಧಿ ನಡೆಸಿಕೊಟ್ಟರು. ಶ್ರೀಕಾಂತ ರಾಜಗೀರಾ, ಮಾರುತಿ ಸುಂಕಾ, ಸಿದ್ಧಲಿಂಗಯ್ಯ, ಸುವರ್ಣಾ, ಶ್ರಾವಂತಿ , ಹಾರಿಕಾ, ಶ್ರೀಕಾಂತ ಭೋಸ್ಲೆ, ಸುಮಿತ ಗಾಯಕವಾಡ, ಮಾಣಿಕ ಸಾಗರ, ಸವಿತಾ ಕಲ್ಲೂರ, ವಸಂತ ರಾಠೋಡ, ಸುಭಾಷ, ನರಸಪ್ಪ ಇದ್ದರು.

ಸರ್ಕಾರಿ ಬಾಲಕರ ಕಾಲೇಜು:ಬೀದರ್ ಓಲ್ಡ್‌ಸಿಟಿಯ ಸರ್ಕಾರಿ ಪದವಿ ಪೂರ್ವ (ಬಾಲಕರ) ಕಾಲೇಜಿನಲ್ಲಿ ಕನ್ನಡಕ್ಕಾಗಿ ನಾವು ಅಭಿಯಾನ ಸಾಮೂಹಿಕ ಗೀತಗಾಯನ ಕಾರ್ಯಕ್ರಮ ನಡೆಯಿತು.ಪ್ರೌಢ ವಿಭಾಗ ಮತ್ತು ಪದವಿ ಪೂರ್ವ ಶಿಕ್ಷಣ ವಿಭಾಗದ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಸಾಮೂಹಿಕವಾಗಿ ಪಾಲ್ಗೊಂಡಿದ್ದರು.ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಆಂಜನೇಯ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.ಪ್ರಾಚಾರ್ಯ ಮಲ್ಲಿಕಾರ್ಜುನ ಲದ್ದೆ, ಉಪ ಪ್ರಾಚಾರ್ಯ ಜಗದೇವಿ ಭೋಸ್ಲೆ ಹಾಗೂ ಉಪನ್ಯಾಸಕರು ಇದ್ದರು. ಶಿವಕುಮಾರ ಸಾಲಿ ನಿರೂಪಿಸಿದರು. ಸಂಜೀವ ಸ್ವಾಮಿ ಕಂದಗೂಳ ವಂದಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.