ADVERTISEMENT

ಬಸವಕಲ್ಯಾಣ: ಎತ್ತುಗಳ ಓಟದ ಸ್ಪರ್ಧೆ

​ಪ್ರಜಾವಾಣಿ ವಾರ್ತೆ
Published 15 ಜೂನ್ 2022, 5:13 IST
Last Updated 15 ಜೂನ್ 2022, 5:13 IST
ಬಸವಕಲ್ಯಾಣ ತಾಲ್ಲೂಕಿನ ಮಲ್ಲಿಕಾರ್ಜುನವಾಡಿಯಲ್ಲಿ ಮಂಗಳವಾರ ನಡೆದ ಎತ್ತುಗಳ ಓಟದ ಸ್ಪರ್ಧೆಯಲ್ಲಿ ಪ್ರಥಮಸ್ಥಾನ ಪಡೆದ ಎತ್ತುಗಳ ಮಾಲೀಕ ಸುರೇಶ ಅವರನ್ನು ಸನ್ಮಾನಿಸಲಾಯಿತು
ಬಸವಕಲ್ಯಾಣ ತಾಲ್ಲೂಕಿನ ಮಲ್ಲಿಕಾರ್ಜುನವಾಡಿಯಲ್ಲಿ ಮಂಗಳವಾರ ನಡೆದ ಎತ್ತುಗಳ ಓಟದ ಸ್ಪರ್ಧೆಯಲ್ಲಿ ಪ್ರಥಮಸ್ಥಾನ ಪಡೆದ ಎತ್ತುಗಳ ಮಾಲೀಕ ಸುರೇಶ ಅವರನ್ನು ಸನ್ಮಾನಿಸಲಾಯಿತು   

ಬಸವಕಲ್ಯಾಣ: ತಾಲ್ಲೂಕಿನಲ್ಲಿ ಮಂಗಳವಾರ ಕಾರಹುಣ್ಣಿಮೆ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ಕೆಲ ಗ್ರಾಮಗಳಲ್ಲಿ ಎತ್ತುಗಳ ಪೂಜೆ ನೆರವೇರಿಸಿ ಓಟದ ಸ್ಪರ್ಧೆ ಆಯೋಜಿಸಲಾಗಿತ್ತು.

ಮಲ್ಲಿಕಾರ್ಜುನ ವಾಡಿಯಲ್ಲಿ ಎತ್ತುಗಳನ್ನು ಸಿಂಗರಿಸಿ ಓಟದ ಸ್ಪರ್ಧೆ ನಡೆಸಲಾಯಿತು. ಈ ಸ್ಪರ್ಧೆಯಲ್ಲಿ ಸುರೇಶ ಸಿನೇಬಾಯಿ ಅವರ ಎತ್ತುಗಳು ಪ್ರಥಮ ಸ್ಥಾನ ಪಡೆದವು. ಅವರಿಗೆ ₹2100 ಸಾವಿರ, ದ್ವಿತೀಯ ಸ್ಥಾನ ಪಡೆದ ಎತ್ತುಗಳ ಮಾಲೀಕ ಶಿವಕಾಂತ ಅವರಿಗೆ ₹1500, ತೃತೀಯ ಸ್ಥಾನ ಪಡೆದ ಎತ್ತುಗಳ ಮಾಲೀಕ ಪ್ರಭು ಭಾರಾಭಾಯಿ ಅವರಿಗೆ ₹1100 ನಗದು ಬಹುಮಾನ ನೀಡಿ ಸನ್ಮಾನಿಸಲಾಯಿತು. ಉತ್ತಮ ಎತ್ತಿನ ಜೋಡಿ ಆಯ್ಕೆ ಮಾಡಿ ನಾಗಣ್ಣ ಧೊಂಡಪ್ಪ ಅವರಿಗೆ ಬಹುಮಾನ ನೀಡಲಾಯಿತು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಗುರುರಾಜ ಮೂಲಗೆ, ಸಂತೋಷ ಸೀಗಿ, ನಜಿಮೊದ್ದೀನ್, ಸತೀಶ ಪೋಸ್ತಾರ, ಅಕ್ರಮ, ರೇವಣಸಿದ್ದ ಪಾಟೀಲ, ಸುಭಾಷ ಅಂತಪ್ಪನಳ್ಳಿ, ವಿಷ್ಣುವರ್ಧನ ಪುಣೆ, ಗೋದಾವರಿ ಪುಣೆ, ಪ್ರವೀಣ ಪುಣೆ, ವಿಠಲ್ ಹೆಗಡೆ, ನರಸಪ್ಪ ಹೆಗಡೆ, ಮಾಣಿಕಪ್ಪ ಬಲಮೆ, ತುಕಾರಾಮ ಪುಣೆ, ಹರಿ ಇರವಟ್ಟೆ, ಶ್ರೀಕಾಂತ ಪುಣೆ, ಅಭಿಷೇಕ ಪುಣೆ, ರಾಜೀವ ನರಡೆ ಪಾಲ್ಗೊಂಡಿದ್ದರು. ತುಕಾರಾಮ ಪುಣೆ ನಿರೂಪಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.