ಔರಾದ್: ಮೂರು ದಿನಗಳಿಂದ ಸುರಿಯುತ್ತಿರುವ ಸತತ ಮಳೆಗೆ ಹಳ್ಳಗಳು ಮೈದುಂಬಿ ಹರಿಯುತ್ತಿದ್ದು, ಕೆರೆಗಳು ತುಂಬಿವೆ.
ಮಾಂಜ್ರಾ ನದಿ ಒಳಹರಿವು ಹೆಚ್ಚಿದ್ದು ನದಿಪಾತ್ರದ ಗ್ರಾಮಗಳಲ್ಲಿ ಆತಂಕ ವ್ಯಕ್ತವಾಗಿದೆ. ನದಿ ದಂಡೆ ಮೇಲಿರುವ ಕೌಠಾ (ಬಿ), ಕೌಠಾ (ಕೆ), ಗಡಿಕುಶನೂರ, ಇಲ್ಲಾಂಪುರ, ಬಂಪಳ್ಳಿ, ಬಾಚೆಪಳ್ಳಿ, ಹೆಡಗಾಪುರ, ಮಣಿಗೆಂಪುರ ಸೇರಿದಂತೆ ಅನೇಕ ಗ್ರಾಮಗಳ ರೈತರಿಗೆ ಹಾನಿಯಾಗಿದೆ. ನದಿ ದಂಡೆ ಮೇಲಿನ ಹೊಲಗಳಲ್ಲಿನ ಉದ್ದು, ಹೆಸರು, ಸೋಯಾ ಹಾಗೂ ಕಬ್ಬು ನೀರಿನಲ್ಲಿ ಕೊಚ್ಚಿ ಹೋಗಿದೆ. ಹೀಗೆ ಮಳೆಯಾದರೆ ಮತ್ತಷ್ಟು ಸಮಸ್ಯೆಯಾಗಲಿದೆ ಎಂದು ರೈತರು ಕಳವಳ ವ್ಯಕ್ತಪಡಿಸಿದರು.
10 ಮನೆಗೆ ಹಾನಿ: ನಿರಂತರ ಮಳೆಯಿಂದ ಗ್ರಾಮೀಣ ಪ್ರದೇಶದ ಮಣ್ಣಿನ ಮನೆಗಳಿಗೆ ಸಮಸ್ಯೆಯಾಗಿದೆ. ಮಂಗಳವಾರ ರಾತ್ರಿಯಿಂದ 10 ಮನೆಗಳ ಗೋಡೆ ಕುಸಿದಿದ್ದು, ಮೂರು ದಿನಗಳಲ್ಲಿ ಒಟ್ಟು 35 ಮನೆ ಗೋಡೆ ಬಿದ್ದಿವೆ ಎಂದು ಕಂದಾಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.