ಔರಾದ್: ತಾಲ್ಲೂಕಿನ ಎಕಲಾರ ಸರ್ಕಾರಿ ಪ್ರೌಢ ಶಾಲೆ ವಿದ್ಯಾರ್ಥಿನಿ ಅಂಬಿಕಾ ಗಣಪತಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 596 ಅಂಕ ಪಡೆದು ಶೇ 95.36 ಸಾಧನೆ ಮಾಡಿದ್ದಾರೆ.
ಇದೇ ಶಾಲೆಯ ರಕ್ಷಿತಾ ಮಾರುತಿ ಶೇ 94.46, ಸಂಜನಾ ಚಂದ್ರಕಾಂತ ಶೇ 92.96 ಅಂಕ ಗಳಿಸಿದ್ದಾರೆ.
ಪರೀಕ್ಷೆಗೆ ಹಾಜರಾದ 42 ವಿದ್ಯಾರ್ಥಿಗಳ ಪೈಕಿ 17 ಅಗ್ರಶ್ರೇಣಿ, 6 ಪ್ರಥಮ, 5 ದ್ವಿತೀಯ, 3 ವಿದ್ಯಾರ್ಥಿಗಳು ತೃತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಒಟ್ಟಾರೆ ಶಾಲೆ ಫಲಿತಾಂಶ ಶೇ 73.8 ಬಂದಿದೆ ಎಂದು ಮುಖ್ಯ ಶಿಕ್ಷಕ ಜ್ಞಾನದೇವ ಪಂಚಾಳ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.