ಬೀದರ್: ಬೀದರ್ ದಕ್ಷಿಣ ಶಾಸಕ ಬಂಡೆಪ್ಪ ಕಾಶೆಂಪೂರ್ ಅವರ 57ನೇ ಜನ್ಮದಿನದ ಪ್ರಯುಕ್ತ ಜಾತ್ಯತೀತ ಜನತಾ ದಳದ ಜಿಲ್ಲಾ ಘಟಕ ಹಾಗೂ ಬಂಡೆಪ್ಪ ಕಾಶೆಂಪೂರ್ ಅಭಿಮಾನಿಗಳ ಬಳಗದ ವತಿಯಿಂದ ನಗರದ ಮೈಲೂರಿನ ಬಾಲಮಂದಿರದಲ್ಲಿ ಮಂಗಳವಾರ ನಿರ್ಗತಿಕ ಮಕ್ಕಳಿಗೆ ಆಹಾರ, ಹಣ್ಣು ಹಾಗೂ ಮಾಸ್ಕ್ ವಿತರಿಸಲಾಯಿತು.
ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ರಮೇಶ ಪಾಟೀಲ ಸೋಲಪುರ, ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ಮಾರುತಿ ಬೌದ್ಧೆ, ಮುಖಂಡರಾದ ಸಂತೋಷ ಬಗದಲ್, ಸಂತೋಷ ಮೇತ್ರಿ, ಬೋಮಗೊಂಡ, ಚಿಟ್ಟಾವಾಡಿ, ಅಭಿ ಕಾಳೆ, ಪರಶುರಾಮ ಎಖ್ಖೆಳ್ಳಿ, ಮಹಿಳಾ ಮತ್ತು ಮಕ್ಕಳ ಇಲಾಖೆಯ ಉಪ ನಿರ್ದೇಶಕ ತಿಪ್ಪಣ್ಣ ಸಿರಸಗಿ, ವಾರ್ಡನ್ ರೂಪಾ ಕೋರಿ, ಜಗನ್ನಾಥ ಸಿಕೇನಪುರ, ಪರಶುರಾವ್, ಬಾಬುರಾವ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.