ADVERTISEMENT

ಕಾರಂಜಾ ಇಇ ಮನೆ ಮೇಲೆ ‘ಲೋಕಾ’ ದಾಳಿ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2024, 16:15 IST
Last Updated 27 ಮಾರ್ಚ್ 2024, 16:15 IST
ಶಿವಕುಮಾರ ಸ್ವಾಮಿ ಅವರ ಮನೆ
ಶಿವಕುಮಾರ ಸ್ವಾಮಿ ಅವರ ಮನೆ   

ಬೀದರ್: ಕಾರಂಜಾ ಯೋಜನಾ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಶಿವಕುಮಾರ ಸ್ವಾಮಿ ಅವರ ಮನೆ, ಕಚೇರಿ ಮೇಲೆ ಲೋಕಾಯುಕ್ತ ಪೊಲೀಸರು ಬುಧವಾರ ಬೆಳಿಗ್ಗೆ‌ ದಾಳಿ ನಡೆಸಿದರು.

ಭಾಲ್ಕಿ ಪಟ್ಟಣದ ಕಾರಂಜಾ ಕಚೇರಿ, ಬೀದರ್ ನಗರದ ಕೃಷಿ ಕಾಲೊನಿ‌, ಬೀದರ್ ತಾಲ್ಲೂಕಿನ ನಾಗೂರ್ ಗ್ರಾಮದ ಮನೆ, ಕಲಬುರಗಿ ನಗರದ ಮನೆ ಮೇಲೆ ಏಕಕಾಲಕ್ಕೆ‌ದಾಳಿ ನಡೆಸಿದ್ದಾರೆ. ಅಕ್ರಮ ಆಸ್ತಿ ಗಳಿಕೆ ಆರೋಪದ ಮೇರೆಗೆ ಲೋಕಾಯುಕ್ತ ಡಿವೈಎಸ್ಪಿ ನೀಲಪ್ಪ ಓಲೇಕಾರ್ ನೇತೃತ್ವದಲ್ಲಿ ದಾಳಿ ನಡೆದಿದೆ.

ಶಿವಕುಮಾರ ಸ್ವಾಮಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT