ADVERTISEMENT

ಜಾತಿ, ಧರ್ಮದಿಂದ ಹೊರಬನ್ನಿ: ಕೌಶಲ ತರಬೇತುದಾರ ಚೇತನರಾಮ

ಕಾಯಕ ರತ್ನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕೌಶಲ ತರಬೇತುದಾರ ಚೇತನರಾಮ

​ಪ್ರಜಾವಾಣಿ ವಾರ್ತೆ
Published 14 ಜುಲೈ 2024, 16:19 IST
Last Updated 14 ಜುಲೈ 2024, 16:19 IST
ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತಿನಿಂದ ಬೀದರ್‌ನಲ್ಲಿ ಶನಿವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಮೈಸೂರಿನ ಅಂತರರಾಷ್ಟ್ರೀಯ ಕೌಶಲ ತರಬೇತುದಾರ ಚೇತನರಾಮ ಮಾತನಾಡಿದರು
ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತಿನಿಂದ ಬೀದರ್‌ನಲ್ಲಿ ಶನಿವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಮೈಸೂರಿನ ಅಂತರರಾಷ್ಟ್ರೀಯ ಕೌಶಲ ತರಬೇತುದಾರ ಚೇತನರಾಮ ಮಾತನಾಡಿದರು   

ಬೀದರ್‌: ‘ಜಾತಿ, ಧರ್ಮದಿಂದ ಪ್ರತಿಯೊಬ್ಬರೂ ಹೊರಗೆ ಬರಬೇಕು. ಭೂಮಿ ಮೇಲೆ ಇರುವುದು ಎರಡೇ ಜಾತಿ. ಒಂದು ಗಂಡು, ಒಂದು ಹೆಣ್ಣು’ ಎಂದು ಮೈಸೂರಿನ ಅಂತರರಾಷ್ಟ್ರೀಯ ಕೌಶಲ ತರಬೇತುದಾರ ಚೇತನರಾಮ ತಿಳಿಸಿದರು.

ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ಮತ್ತು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ನಗರದ ಡಾ.ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ಶನಿವಾರ  ಏರ್ಪಡಿಸಿದ್ದ ರಾಜ್ಯಮಟ್ಟದ ಕಾಯಕ ರತ್ನ ಪ್ರಶಸ್ತಿ ಪ್ರದಾನ ಹಾಗೂ ಶಿಕ್ಷಣ ನಮ್ಮ ಹಕ್ಕು ವಿಚಾರ ಸಂಕಿರಣದಲ್ಲಿ ಮಾತನಾಡಿದರು.

ಪ್ರತಿ ಕ್ಷಣವೂ ಬದಲಾವಣೆಯಾಗುತ್ತಿದೆ. ನಿನ್ನೆಯಂತೆ ಇಂದು ಇರಬಾರದು. ನಿತ್ಯವೂ ಏನಾದರೂ ಹೊಸತನ ಮಾಡಬೇಕು. ಜಾತಿ, ಧರ್ಮದ ಹೆಸರಿನಲ್ಲಿ ಕಾಲ ವ್ಯಯಿಸಬಾರದು ಎಂದರು.

ADVERTISEMENT

ಆತ್ಮವಿಶ್ವಾಸ, ಸೃಜನಶೀಲ ಮನಸ್ಸು, ಶಿಸ್ತುಬದ್ಧ ಜೀವನ, ಸಮಯಪ್ರಜ್ಞೆ ಮತ್ತು ಚುರುಕಿನ ಉತ್ಸಾಹ. ಈ ಪಂಚ ಸೂತ್ರಗಳು ಪಾಲಿಸಿದರೆ ನಮ್ಮ ಪ್ರತಿಯೊಂದು ಕೆಲಸದಲ್ಲಿ ಯಶಸ್ಸು ಸಿಗುತ್ತದೆ. ಯಾವುದೇ ಕೆಲಸ ಮಾಡಬೇಕಾದರೆ ನಕಾರಾತ್ಮಕ ಭಾವನೆ ಇರಬಾರದು. ಛಲದಿಂದ ಮುನ್ನುಗ್ಗಬೇಕು ಎಂದು ಸಲಹೆ ಮಾಡಿದರು.

ರಾಜ್ಯ ಸರ್ಕಾರ ನಿರುದ್ಯೋಗಿಗಳಿಗೆ ಯುವ ನಿಧಿ ನೀಡುತ್ತಿದೆ. ಇದರ ಬದಲು ಅವರಿಗೆ ಕೌಶಲ ನೀಡಿದರೆ ಅವರೇ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಾರೆ. ಯುವ ನಿಧಿ ಬೇಡ ಎನ್ನುತ್ತಿಲ್ಲ. ಅದರ ಜತೆಯಲ್ಲಿ ಕೌಶಲ, ಜ್ಞಾನ ಕೊಡುವುದು ಇಂದಿನ ಅಗತ್ಯವಾಗಿದೆ ಎಂದರು.

ಶಾಸಕ ಡಾ.ಶೈಲೇಂದ್ರ ಕೆ. ಬೆಲ್ದಾಳೆ, ಪರಿಷತ್ ಉಪಾಧ್ಯಕ್ಷ ಡಾ.ಆಂಜನಪ್ಪ, ಬಸವಕಲ್ಯಾಣ ಅನುಭವ ಮಂಟಪ ಅಧ್ಯಕ್ಷ ಬಸವಲಿಂಗ ಪಟ್ಟದ್ದೇವರು, ಕೌಠಾ (ಬಿ) ಜ್ಞಾನ ಯೋಗಾಶ್ರಮದ ಸಿದ್ಧರಾಮ ಶರಣರು ಬೆಲ್ದಾಳ, ಪರಿಷತ್ ಸಂಸ್ಥಾಪಕ ಅಧ್ಯಕ್ಷ ಹುಲಿಕಲ್ ನಟರಾಜ, ವಿಧಾನ ಪರಿಷತ್ ಸದಸ್ಯರಾದ ಡಾ.ಚಂದ್ರಶೇಖರ ಪಾಟೀಲ, ಮಾರುತಿರಾವ ಮುಳೆ, ಹೈದರಾಬಾದ್‌ ಕರ್ನಾಟಕ ಶಿಕ್ಷಣ ಸಂಸ್ಥೆ ಆಡಳಿತ ಮಂಡಳಿ ಸದಸ್ಯ ಡಾ.ರಜನೀಶ್ ವಾಲಿ, ನಗರಸಭೆ ಅಧ್ಯಕ್ಷ ಮೊಹಮ್ಮದ್‌ ಗೌಸ್‌, ಬಿಡಿಎ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ, ಕಸಾಪ ಜಿಲ್ಲಾಧ್ಯಕ್ಷ ಸುರೇಶ ಚನಶೆಟ್ಟಿ, ಶಾಹೀನ್‌ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಅಬ್ದುಲ್ ಖದೀರ್, ಪ್ರಮುಖರಾದ ಬಸವರಾಜ ಧನ್ನೂರ, ರೇವಣಸಿದ್ದಪ್ಪ ಜಲಾದೆ, ಜೈರಾಜ ಖಂಡ್ರೆ, ವಿಜಯಕುಮಾರ ಪಾಟೀಲ ಯರನಳ್ಳಿ, ಪಾಂಡುರಂಗ ಬೆಲ್ದಾರ್, ರಾಜೇಂದ್ರಕುಮಾರ ಮಣಿಗೇರೆ, ಪರಿಷತ್ ರಾಜ್ಯ ಸಂಯೋಜಕ ದಾನಿ ಬಾಬುರಾವ, ಕಾರ್ಯದರ್ಶಿ ಆರ್. ರವಿ ಬಿಳಿಶಿವಾಲೆ, ಜಿಲ್ಲಾಧ್ಯಕ್ಷ ದೇವಿಪ್ರಸಾದ್ ಕಲಾಲ್, ಶಿವಶಂಕರ ಟೋಕರೆ ಹಾಜರಿದ್ದರು.

ಕಾಯಕ ರತ್ನ ಪ್ರಶಸ್ತಿ ಪ್ರದಾನ ಗಂಗಾಂಬಿಕೆ ಅಕ್ಕ ಡಾ.ಬಿ.ವಿ. ಶಿವಪ್ರಕಾಶ (ಬೀದರ್) ಶಿವಣಗೌಡ ಪಾಟೀಲ (ಕಲಬುರಗಿ) ಚನ್ನಪ್ಪ ಆನೆಗುಂದಿ (ಯಾದಗಿರಿ) ಡಾ.ಮಲ್ಲೇಶಗೌಡ ಪಾಟೀಲ (ರಾಯಚೂರು) ಕೆ.ದೇವರಾಜ (ಬಳ್ಳಾರಿ) ಡಾ.ಈಶ್ವರ ಸವಡಿ (ಕೊಪ್ಪಳ) ಗೋಪಾಲ (ವಿಜಯನಗರ) ಮಹದೇಶ್ವರ ಲಿಂಗದಾಳ (ಶಿರಸಿ) ವಿಜಯಕುಮಾರ ಯಶವಂತ ನಾಯಕ್ (ಕಾರವಾರ) ಡಾ.ನಾಗರಾಜ ಬಿ.ಮರೆಣ್ಣವರ್ (ಬೆಳಗಾವಿ) ಸಂಗಪ್ಪ ಲಕ್ಷ್ಮಣ ಬಾಡಗಿ (ಚಿಕ್ಕೋಡಿ) ಸರೋಜಾ ಕೌಲಾಪುರ (ವಿಜಯಪುರ) ಡಾ.ಸಂಜಯ ಮ.ಚೀನಿವಾಲ (ಬಾಗಲಕೋಟೆ) ಪೂರ್ಣಾಜಪ್ಪ ಭರಮಾಜಪ್ಪ ಖರಾಟೆ (ಗದಗ) ಜಯಶ್ರೀ ಗೌಳಿಯವರ್ (ಧಾರವಾಡ) ಶಿವಯೋಗಿ ವಿರಕ್ತಮಠ (ಹುಬ್ಬಳ್ಳಿ) ನೀಲಮ್ಮ ತಳ್ಳಳ್ಳಿ (ಹಾವೇರಿ) ಮನು (ಬೆಂಗಳೂರು ನಗರ) ಸಿ.ರಾಜಣ್ಣ (ಬೆಂಗಳೂರು ಉತ್ತರ) ಜಿ.ಶಿವಲಿಂಗಗೌಡ (ಬೆಂಗಳೂರು ದಕ್ಷಿಣ) ಎಂ.ಆರ್. ಉಮೇಶ (ಬೆಂಗಳೂರು ಗ್ರಾಮಾಂತರ) ಪುಟ್ಟರಾಜು (ರಾಮನಗರ) ಕಾಗೋಡು ತಿಮ್ಮಪ್ಪ (ಶಿವಮೊಗ್ಗ) ಲಕ್ಷ್ಮಿರಾಮ್‌ ನಾಡಪ್ಪನಹಳ್ಳಿ (ಮೈಸೂರು)ದ್ಯಾಮಪ್ಪ ಎಚ್.ಎಂ. (ದಾವಣಗೆರೆ) ಸತ್ಯಣ್ಣ (ಚಿತ್ರದುರ್ಗ) ತಿಪಟೂರ ಕೃಷ್ಣ (ತುಮಕೂರು) ಎಂ. ಶಿವಲಿಂಗಪ್ಪ ಎಸ್. ರೇಣುಕಾಪ್ರಸಾದ (ಮಧುಗಿರಿ) ಜಿ.ಮುನಿರಡ್ಡಿ (ಚಿಕ್ಕಬಳ್ಳಾಪುರ) ಪಿಚ್ಚಳ್ಳಿ ಶ್ರೀನಿವಾಸ (ಕೋಲಾರ) ಅವರಿಗೆ ರಾಜ್ಯಮಟ್ಟದ ಕಾಯಕ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.