ADVERTISEMENT

ಕಿಡ್ನಿ ವೈಫಲ್ಯ: ₹50 ಸಾವಿರ ನೆರವು

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2022, 12:22 IST
Last Updated 7 ಅಕ್ಟೋಬರ್ 2022, 12:22 IST
ಕಿಡ್ನಿ ವೈಫಲ್ಯಕ್ಕೆ ಒಳಗಾದ ಬೀದರ್ ತಾಲ್ಲೂಕಿನ ಚೊಂಡಿ ನಿವಾಸಿ ಸಂತೋಷ ಮಾರುತಿ ಅವರಿಗೆ ಡಾ. ಗುರುಪಾದಪ್ಪ ನಾಗಮಾರಪಳ್ಳಿ ಫೌಂಡೇಷನ್ ಅಧ್ಯಕ್ಷ ಸೂರ್ಯಕಾಂತ ನಾಗಮಾರಪಳ್ಳಿ ವೈಯಕ್ತಿಕ ನೆರವು ನೀಡಿದರು
ಕಿಡ್ನಿ ವೈಫಲ್ಯಕ್ಕೆ ಒಳಗಾದ ಬೀದರ್ ತಾಲ್ಲೂಕಿನ ಚೊಂಡಿ ನಿವಾಸಿ ಸಂತೋಷ ಮಾರುತಿ ಅವರಿಗೆ ಡಾ. ಗುರುಪಾದಪ್ಪ ನಾಗಮಾರಪಳ್ಳಿ ಫೌಂಡೇಷನ್ ಅಧ್ಯಕ್ಷ ಸೂರ್ಯಕಾಂತ ನಾಗಮಾರಪಳ್ಳಿ ವೈಯಕ್ತಿಕ ನೆರವು ನೀಡಿದರು   

ಜನವಾಡ: ಕಿಡ್ನಿ ವೈಫಲ್ಯಕ್ಕೆ ಒಳಗಾದ ಬಡ ಯುವಕರೊಬ್ಬರಿಗೆ ₹50 ಸಾವಿರ ವೈಯಕ್ತಿಕ ನೆರವು ನೀಡುವ ಮೂಲಕ ಡಾ. ಗುರುಪಾದಪ್ಪ ನಾಗಮಾರಪಳ್ಳಿ ಫೌಂಡೇಷನ್ ಅಧ್ಯಕ್ಷ ಸೂರ್ಯಕಾಂತ ನಾಗಮಾರಪಳ್ಳಿ ಹೃದಯ ವೈಶಾಲ್ಯತೆ ಮೆರೆದಿದ್ದಾರೆ.

ಎರಡೂ ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಬೀದರ್ ತಾಲ್ಲೂಕಿನ ಚೊಂಡಿಯದ ಸಂತೋಷ ಮಾರುತಿ ಅವರ ಮನೆಗೆ ಭೇಟಿ ನೀಡಿದ ಅವರು, ಧನ ಸಹಾಯ ಮಾಡಿದರು.

ನನಗೆ ಪತ್ನಿ, ಇಬ್ಬರು ಮಕ್ಕಳು ಇದ್ದಾರೆ. ಕಿಡ್ನಿ ವೈಫಲ್ಯದಿಂದ ಬಹಳ ಸಂಕಷ್ಟಕ್ಕೆ ಸಿಲುಕಿದ್ದೇನೆ ಎಂದು ಮೂಲತಃ ಚಟ್ನಳ್ಳಿ ಗ್ರಾಮದವರಾದ ಸಂತೋಷ ಮಾರುತಿ ಅಳಲು ತೋಡಿಕೊಂಡರು.

ADVERTISEMENT

ವೈಯಕ್ತಿಕವಾಗಿ ₹50 ಸಾವಿರ ಕೊಟ್ಟು, ಸರ್ಕಾರದಿಂದಲೂ ಸಾಧ್ಯವಾದ ನೆರವು ದೊರಕಿಸಿಕೊಡುವ ಭರವಸೆ ನೀಡಿದ ಸೂರ್ಯಕಾಂತ ಅವರಿಗೆ ಸಂತೋಷ ಹಾಗೂ ಜಾನಪದ ಕಲಾವಿದರಾದ ಅವರ ಮಾವ ಶಂಕರ ಚೊಂಡಿ ಕೃತಜ್ಞತೆ ಅರ್ಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.