
ಹುಮನಾಬಾದ್: ತಾಲ್ಲೂಕಿನ ಹುಡಗಿ ಗ್ರಾಮದ ದಿಗಂಬರ ಕರಿಬಸವೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವ ನಿಮಿತ್ತ ಹಿರೇಮಠ ಸಂಸ್ಥಾನದ ಪೀಠಾಧಿಪತಿ ವಿರೂಪಾಕ್ಷ ಶಿವಾಚಾರ್ಯರ ನೇತೃತ್ವದಲ್ಲಿ ಶನಿವಾರ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಶನಿವಾರ ಬೆಳಗ್ಗೆ 11ಕ್ಕೆ ರುದ್ರಾಭಿಷೇಕ , ಕುಂಭ-ಕಳಸ ಮೆರವಣಿಗೆ ನಡೆಯಿತು. ಕುಂಬ ಹೊತ್ತ ಮಹಿಳೆಯರು ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಜರುಗಿತು.
ಸಂಜೆ ಪ್ರವಚನ ಮಂಗಲ, ಭಾನುವಾರ ಬೆಳಗ್ಗೆ 10ಕ್ಕೆ ವಿರೂಪಾಕ್ಷ ಶಿವಾಚಾರ್ಯರ ನೇತೃತ್ವದಲ್ಲಿ ನೂತನ ಗೋಪುರ ಉದ್ಘಾಟನೆ ಮತ್ತು ಕಳಸಾರೋಹಣ ಕಾರ್ಯಕ್ರಮ ಜರುಗಲಿದೆ. ಸೋಮವಾರ ರಥೋತ್ಸವ, ಮಂಗಳವಾರ (14ರಂದು) ಪೈಲ್ವಾನರಿಂದ ಜಂಗಿ ಕುಸ್ತಿ, 15 ರಿಂದ ಸಂಗೀತ ದರ್ಬಾರ್ ಮೂಲಕ ಜಾತ್ರಾ ಮಹೋತ್ಸವ ಸಮಾರೋಪ ಜರುಗಲಿದೆ. ಕಾಶಿನಾಥ್, ಅನೀಲ, ಮಹಾಂತೇಶ್, ಶಿವಾನಂದ, ದಯಾನಂದ, ವಿನೋದ್ ಸೇರಿದಂತೆ ಇತರರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.