ADVERTISEMENT

ಶಾಸಕರಿಂದ ಭೂಮಿ ಪೂಜೆ

ಪಶು ಪಾಲನೆ ಸಹಾಯಕ ನಿರ್ದೇಶಕ ಕಚೇರಿ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2020, 16:27 IST
Last Updated 8 ಸೆಪ್ಟೆಂಬರ್ 2020, 16:27 IST
ಶಾಸಕ ರಹೀಂಖಾನ್ ಅವರು ಬೀದರ್‍ನಲ್ಲಿ ಮಂಗಳವಾರ ಪಶು ಪಾಲನೆ ಮತ್ತು ಪಶು ವೈದ್ಯ ಸೇವಾ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿ ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದರು
ಶಾಸಕ ರಹೀಂಖಾನ್ ಅವರು ಬೀದರ್‍ನಲ್ಲಿ ಮಂಗಳವಾರ ಪಶು ಪಾಲನೆ ಮತ್ತು ಪಶು ವೈದ್ಯ ಸೇವಾ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿ ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದರು   

ಬೀದರ್: ನಗರದ ಜನವಾಡ ರಸ್ತೆಯಲ್ಲಿ ಇರುವ ಪಶು ಪಾಲನೆ ಮತ್ತು ಪಶು ವೈದ್ಯ ಸೇವಾ ಇಲಾಖೆಯ ಕಚೇರಿ ಆವರಣದಲ್ಲಿ ಸಹಾಯಕ ನಿರ್ದೇಶಕ ಕಚೇರಿ ಕಟ್ಟಡ ನಿರ್ಮಾಣಕ್ಕೆ ಶಾಸಕ ರಹೀಂಖಾನ್ ಮಂಗಳವಾರ ಭೂಮಿ ಪೂಜೆ ನೆರವೇರಿಸಿದರು.

ಕೇಂದ್ರ ಸರ್ಕಾರದ ಆರ್‍ಐಡಿಎಫ್ ಯೋಜನೆಯ ಅನುದಾನದಲ್ಲಿ ಕಚೇರಿ ನಿರ್ಮಾಣ ಮಾಡಲಾಗುತ್ತಿದೆ. ಬೆಂಗಳೂರಿನ ನ್ಯಾಷನಲ್ ಪ್ರೊಜೆಕ್ಟ್ ಕನ್‍ಸ್ಟ್ರಕ್ಷನ್ ಕಾರ್ಪೋರೇಷನ್‍ಗೆ ನಿರ್ಮಾಣ ಹೊಣೆ ವಹಿಸಲಾಗಿದೆ ಎಂದು ಪಶು ಪಾಲನೆ ಮತ್ತು ಪಶು ವೈದ್ಯ ಸೇವಾ ಇಲಾಖೆಯ ಉಪ ನಿರ್ದೇಶಕ ಡಾ. ಮಲ್ಲಿಕಾರ್ಜುನ ಹಂಚನಾಳ ತಿಳಿಸಿದರು.

ಇಲಾಖೆಯ ಸಹಾಯಕ ನಿರ್ದೇಶಕ ಡಾ. ರವೀಂದ್ರಕುಮಾರ ಭೂರೆ, ಆಡಳಿತ ಸಹಾಯಕ ನಿರ್ದೇಶಕ ಡಾ. ಗೌತಮ ಅರಳಿ, ಡಾ. ಯೋಗೇಂದ್ರ ಕುಲಕರ್ಣಿ, ಡಾ. ಬಸವರಾಜ ನಿಟ್ಟೂರೆ, ಸಿದ್ದಪ್ಪ ಪಾಟೀಲ, ಬಿ.ಎಸ್. ಪಾಟೀಲ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.