ADVERTISEMENT

ಪ್ರೇಕ್ಷಕರ ಮನ ತಣಿಸಿದ ‘ನಗೆಹಬ್ಬ’

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2022, 14:01 IST
Last Updated 5 ಡಿಸೆಂಬರ್ 2022, 14:01 IST
ದಕ್ಷಿಣ ಕರಾವಳಿ ಕನ್ನಡ ಸಂಘದ ವತಿಯಿಂದ ಬೀದರ್‌ನಲ್ಲಿ ಆಯೋಜಿಸಿದ್ದ ‘ನಗೆಹಬ್ಬ’ ಕಾರ್ಯಕ್ರಮದಲ್ಲಿ ಹಾಸ್ಯ ಕಲಾವಿದ ವಿಠ್ಠಲ ನಾಯಕ್ ಕಲಡ್ಕ ದೀಪ ಬೆಳಗಿಸಿದರು
ದಕ್ಷಿಣ ಕರಾವಳಿ ಕನ್ನಡ ಸಂಘದ ವತಿಯಿಂದ ಬೀದರ್‌ನಲ್ಲಿ ಆಯೋಜಿಸಿದ್ದ ‘ನಗೆಹಬ್ಬ’ ಕಾರ್ಯಕ್ರಮದಲ್ಲಿ ಹಾಸ್ಯ ಕಲಾವಿದ ವಿಠ್ಠಲ ನಾಯಕ್ ಕಲಡ್ಕ ದೀಪ ಬೆಳಗಿಸಿದರು   

ಬೀದರ್‌: ಕರ್ನಾಟಕದ ರಾಜ್ಯೋತ್ಸವದ ಪ್ರಯುಕ್ತ ದಕ್ಷಿಣ ಕರಾವಳಿ ಕನ್ನಡ ಸಂಘದ ವತಿಯಿಂದ ಇಲ್ಲಿಯ ಪೂಜ್ಯ ಚನ್ನಬಸವ ಪಟ್ಟದ್ದೇವರ ರಂಗ ಮಂದಿರದಲ್ಲಿ ‘ನಗೆಹಬ್ಬ’ ಕಾರ್ಯಕ್ರಮ ನಡೆಯಿತು.

ಹಾಸ್ಯ ಕಲಾವಿದ ವಿಠ್ಠಲ ನಾಯಕ್ ಕಲಡ್ಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ‘ಮಕ್ಕಳು ಹೆತ್ತ ತಂದೆ-ತಾಯಿಗೆ, ಹೊತ್ತ ಭಾರತ ಮಾತೆಗೆ ಎಂದಿಗೂ ದ್ರೋಹ ಬಗೆಯಬಾರದು’ ಎಂದು ಹೇಳಿದರು.

‘ಪಾಲಕರು ಮಕ್ಕಳ ಮೇಲೆ ಯಾವುದೇ ರೀತಿಯ ಒತ್ತಡ ಹಾಕದೆ 6 ರಿಂದ 16 ವರ್ಷದ ವರೆಗೆ ಅವರ ಸರಿ ತಪ್ಪುಗಳನ್ನು ತಿಳಿಸಬೇಕು. ಸರಿ ದಾರಿಯಲ್ಲಿ ಸಾಗುವಂತೆ ಮಾರ್ಗದರ್ಶನ ನೀಡಬೇಕು’ ಎಂದು ತಿಳಿಸಿದರು.

ADVERTISEMENT

ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಘಟಕದ ಉಪಾಧ್ಯಕ್ಷ ರಾಜೇಂದ್ರಕುಮಾರ ಗಂದಗೆ ಮಾತನಾಡಿ, ‘ದಕ್ಷಿಣ ಕನ್ನಡ ಕರಾವಳಿ ಸಂಘದವರು ಕಳೆದ 24 ವರ್ಷಗಳಿಂದ ಬೀದರ್‌ನಲ್ಲಿ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಸಾಂಸ್ಕೃತಿಕ ವಾತಾವರಣ ಸೃಷ್ಟಿಸಿದ್ದಾರೆ‘ ಎಂದು ಬಣ್ಣಿಸಿದರು.

ತೇಜಸ್ ಕಲ್ಲುಗುಂಡಿ ಗಾಯನಕ್ಕೆ ರವಿರಾಜ ಒಡಿಯೂರು ಹಾರ್ಮೋನಿಯಂ, ಶರತ್ ಪೆರ್ಲಾ ತಬಲಾ ಸಾಥ್‌ ನೀಡಿದರು.

ಸಂಘದ ಅಧ್ಯಕ್ಷ ಪಿ.ಎನ್. ದಿವಾಕರ ಅಧ್ಯಕ್ಷತೆ ವಹಿಸಿದ್ದರು. ಸಂಘದ ಕಾರ್ಯದರ್ಶಿ ಎ.ಎಸ್. ಪ್ರಭಾಕರ ದಯಾನಂದ ಶೆಟ್ಟಿ, ಗುರುಮೂರ್ತಿ, ರಾಜೇಶ ರಾವ್ ಇದ್ದರು. ರಘುರಾಮ ಉಪಾಧ್ಯಾಯ ಸ್ವಾಗತಿಸಿದರು.

ಕೆ. ಸತ್ಯಮೂರ್ತಿ ಕಾರ್ಯಕ್ರಮ ನಿರೂಪಿಸಿದರು. ರಾಘವೇಂದ್ರ ಅಡಿಗ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.