ADVERTISEMENT

40 ವರ್ಷಕ್ಕೆ ‘ಬೀದರ್‌ ಸಹಕಾರ ಸಕ್ಕರೆ ಕಾರ್ಖಾನೆ’ ಲೀಸ್‌: ಸಚಿವ ಈಶ್ವರ ಖಂಡ್ರೆ

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2024, 12:32 IST
Last Updated 15 ಆಗಸ್ಟ್ 2024, 12:32 IST
   

ಬೀದರ್‌: ‘ಹುಮನಾಬಾದ್‌ ತಾಲ್ಲೂಕಿನ ಹಳ್ಳಿಖೇಡ್‌ (ಬಿ) ಸಮೀಪದ ಬೀದರ್‌ ಸಹಕಾರ ಸಕ್ಕರೆ ಕಾರ್ಖಾನೆಯನ್ನು (ಬಿಎಸ್‌ಎಸ್‌ಕೆ) 40 ವರ್ಷಗಳಿಗೆ ಲೀಸ್‌ ಕೊಟ್ಟು ಪ್ರಾರಂಭಿಸಲು ಪ್ರಯತ್ನಿಸುವೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ತಿಳಿಸಿದರು.

ನಗರದ ನೆಹರೂ ಕ್ರೀಡಾಂಗಣದಲ್ಲಿ ಗುರುವಾರ ತ್ರಿವರ್ಣ ಧ್ವಜಾರೋಹಣ ನೆರವೇರಿಸಿದ ನಂತರ ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರು ಬಿಎಸ್‌ಎಸ್‌ಕೆ ಕುರಿತು ಕೇಳಿದ ಪ್ರಶ್ನೆಗೆ ಮೇಲಿನಂತೆ ಪ್ರತಿಕ್ರಿಯಿಸಿದರು.

ಡಿಸಿಸಿ ಬ್ಯಾಂಕ್‌ ಜೊತೆಗೆ ಮಾತನಾಡಿ ಒನ್‌ ಟೈಮ್‌ ಸೆಟಲ್‌ಮೆಂಟ್‌ ಮೂಲಕ ಇತ್ಯರ್ಥಪಡಿಸಲು ಪ್ರಯತ್ನಿಸುತ್ತಿದ್ದೇನೆ. ಕೈಗಾರಿಕೋದ್ಯಮಿಗಳಿಗೆ 40 ವರ್ಷಗಳಿಗೆ ಲೀಸ್‌ ಮೇಲೆ ಕೊಟ್ಟು ಪ್ರಾರಂಭಿಸಲು ಪ್ರಯತ್ನಿಸುವೆ ಎಂದು ಭರವಸೆ ನೀಡಿದರು.

ADVERTISEMENT

ಬಿಎಸ್‌ಎಸ್‌ಕೆ ಲೀಸ್‌ ಮೇಲೆ ಕೊಡುವುದರ ಬಗ್ಗೆ ಸಚಿವ ಶಿವಾನಂದ ಪಾಟೀಲ ಅವರೊಂದಿಗೆ ಚರ್ಚಿಸುತ್ತೇನೆ. ಬಿಎಸ್‌ಎಸ್‌ಕೆ ಇಂದಿನ ಸ್ಥಿತಿಗತಿಗೆ ಹಿಂದಿನ ಸರ್ಕಾರದ ಪಾಪದ ಕೆಲಸ ಕಾರಣ. ನಮ್ಮ ತಂದೆ (ಭೀಮಣ್ಣ ಖಂಡ್ರೆ) ಬಿಎಸ್‌ಎಸ್‌ಕೆ ಪ್ರಾರಂಭಿಸಿದ್ದರು. ಹತ್ತು ವರ್ಷ ನಾನು ಅದರ ಅಧ್ಯಕ್ಷನಾಗಿದ್ದೆ. ನಾನು ಅಧ್ಯಕ್ಷ ಸ್ಥಾನದಿಂದ ನಿರ್ಗಮಿಸುವಾಗ ₹30 ಕೋಟಿ ಸಾಲ ಅದರ ಮೇಲಿತ್ತು. ಆನಂತರ ಅದು ಸಾಕಷ್ಟು ಪ್ರಮಾಣದಲ್ಲಿ ಹೆಚ್ಚಾಯಿತು ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.