ADVERTISEMENT

ಸ್ವಾವಲಂಬನೆ ಶಿಕ್ಷಣದ ಉದ್ದೇಶವಾಗಲಿ: ಮಹೇಶ ಪಾಟೀಲ

​ಪ್ರಜಾವಾಣಿ ವಾರ್ತೆ
Published 16 ಜುಲೈ 2024, 15:54 IST
Last Updated 16 ಜುಲೈ 2024, 15:54 IST
ಬಸವಕಲ್ಯಾಣದ ಪುಣ್ಯಕೋಟಿ ಪದವಿಪೂರ್ವ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರತಿಭಾವಂತ ವಿದ್ಯಾರ್ಥಿ ಹಾಗೂ ಅವರ ಪಾಲಕರನ್ನು ಸನ್ಮಾನಿಸಲಾಯಿತು. ಮಹೇಶ ಪಾಟೀಲ, ಸೂರ್ಯಕಾಂತ ಶೀಲವಂತ ಇದ್ದರು
ಬಸವಕಲ್ಯಾಣದ ಪುಣ್ಯಕೋಟಿ ಪದವಿಪೂರ್ವ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರತಿಭಾವಂತ ವಿದ್ಯಾರ್ಥಿ ಹಾಗೂ ಅವರ ಪಾಲಕರನ್ನು ಸನ್ಮಾನಿಸಲಾಯಿತು. ಮಹೇಶ ಪಾಟೀಲ, ಸೂರ್ಯಕಾಂತ ಶೀಲವಂತ ಇದ್ದರು   

ಬಸವಕಲ್ಯಾಣ: ‘ಸ್ವಾವಲಂಬನೆ ಕಲಿಸುವುದು ಶಿಕ್ಷಣದ ಉದ್ದೇಶ ಆಗಬೇಕು’ ಎಂದು ವಾಣಿಜ್ಯ ತೆರಿಗೆ ಇಲಾಖೆ ಸಹಾಯಕ ಆಯುಕ್ತ ಮಹೇಶ ಪಾಟೀಲ ಹೇಳಿದರು.

ನಗರದ ಪುಣ್ಯಕೋಟಿ ಪದವಿಪೂರ್ವ ಕಾಲೇಜಿನಲ್ಲಿ ಎಸ್‌ಎಸ್‌ಎಲ್‌ಸಿ, ಪಿಯುನಲ್ಲಿ ಹೆ್ಚಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಶಿಕ್ಷಣ ಸಂಸ್ಥೆ ಅಧ್ಯಕ್ಷ ಪ್ರೊ.ಸೂರ್ಯಕಾಂತ ಶೀಲವಂತ ಮಾತನಾಡಿ, ‘ಸತತ ಪರಿಶ್ರಮದಿಂದ ಯಶಸ್ಸು ದೊರಕಬಲ್ಲದು. ಉನ್ನತ ಶಿಕ್ಷಣ ಪಡೆದು ಉನ್ನತ ಹುದ್ದೆಗೆ ಏರಿದಾಗ ಮಾತ್ರ ತಂದೆ ತಾಯಿ ಹಾಗೂ ಶಿಕ್ಷಣ ಸಂಸ್ಥೆಗೆ ಕೀರ್ತಿ ಬರುತ್ತದೆ’ ಎಂದು ಹೇಳಿದರು.

ADVERTISEMENT

ಸಂಸ್ಥೆ ಕೋಶಾಧ್ಯಕ್ಷ ಶಶಿಕಾಂತ ಶೀಲವಂತ, ನಿರ್ದೇಶಕಿ ಸುರೇಖಾ ಶೀಲವಂತ, ಪ್ರತಿಭಾ ಬಸವರಾಜ, ಮಾಯಾದೇವಿ ಸುಖದೇವ, ಅಶ್ವಿನಕುಮಾರ, ಮಾಲಶ್ರೀ ದಶರಥ ಮಾತನಾಡಿದರು.

ದ್ವಿತೀಯ ಪಿಯು ಕಲಾ ವಿಭಾಗದಲ್ಲಿ 577 ಅಂಕ ಪಡೆದ ಮಂಜುಳಾ ಗುಂಡಪ್ಪ ಮತ್ತು ವಾಣಿಜ್ಯ ವಿಭಾಗದಲ್ಲಿ 570 ಅಂಕ ಪಡೆದ ಸಾಗರ ಸೀತಾರಾಮ ಇವರಿಗೆ ಬೆಳ್ಳಿ ಪದಕ ನೀಡಿ ಸನ್ಮಾನಿಸಲಾಯಿತು. ಅವರ ಪಾಲಕರನ್ನೂ ಗೌರವಿಸಲಾಯಿತು.

ಉಪನ್ಯಾಸಕರಾದ ಅಶೋಕ ಪೋತೆ, ಪ್ರಫುಲಕುಮಾರ, ಮಹಾದೇವಿ ದಾಸೂರೆ, ಸ್ವಪ್ನಾ ಮಲ್ಲಿಕಾರ್ಜುನ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.