ADVERTISEMENT

ಮಠಗಳು ಸೀಮಿತವಾಗಿ ಸೇವೆ ಮಾಡಲಿ: ಖಂಡ್ರೆ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2020, 15:54 IST
Last Updated 1 ಡಿಸೆಂಬರ್ 2020, 15:54 IST
ಈಶ್ವರ ಖಂಡ್ರೆ
ಈಶ್ವರ ಖಂಡ್ರೆ   

ರಾಜ್ಯದ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಹಾಗೂ ಧಾರ್ಮಿಕ ಅಭಿವೃದ್ಧಿಯಲ್ಲಿ ಮಠಗಳ ಪಾತ್ರ ಅಮೋಘ ಹಾಗೂ ಅವಿಸ್ಮರಣೀಯ. ಇವತ್ತಿನ ಸನ್ನಿವೇಶದಲ್ಲೂ ಮಠಗಳು ರಾಜ್ಯದ ಜನತೆಯನ್ನು ಒಳ್ಳೆಯ ದಾರಿಗೆ ಒಯ್ಯಲು, ಅನಿಷ್ಠಗಳ ನಿರ್ಮೂಲನೆ ಮಾಡಲು, ಸುಂದರ ಸಮಾಜ ನಿರ್ಮಾಣ ಮಾಡಲು ಸೀಮಿತವಾಗಿ ಸೇವೆ ಮಾಡಬೇಕು.

-ಈಶ್ವರ ಖಂಡ್ರೆ,ಕೆಪಿಸಿಸಿ ಕಾರ್ಯಾಧ್ಯಕ್ಷ

ಜಾತಿ ರಾಜಕಾರಣದ ದುರ್ಗಂಧ ಬೇಡ: ಅಕ್ಕ ಅನ್ನಪೂರ್ಣ

ADVERTISEMENT

ರಾಜಕೀಯದಲ್ಲಿ ಧರ್ಮ ಗುರು ಸ್ಥಾನದಲ್ಲಿ ಇರಬೇಕು. ರಾಷ್ಟ್ರೀಯ ಹಿತಕ್ಕೆ, ರಾಜ್ಯದ ಜನತೆಯ ಹಿತಕ್ಕೆ ಧಕ್ಕೆ ಬರುವ ಹಾಗೂ ಕೆಡಕು ಆಗುವಂಥ ಸಂದರ್ಭದಲ್ಲಿ ಆನೆಗೆ ಅಂಕುಶ ಹಾಕುವ ರೀತಿಯಲ್ಲಿ ಮಠಾಧೀಶರು ಇರಬೇಕು. ಜಾತಿ, ಮತ, ಪಂಥ, ರಾಜಕಾರಣದ ಲೇಪನ ಆಗಬಾರದು. ಜಾತಿ ರಾಜಕಾರಣ ದುರ್ಗಂಧ ಇದ್ದ ಹಾಗೆ.

ಸಂವಿಧಾನಾತ್ಮಕ ನಿರ್ಣಯಗಳು ಹಾಗೂ ಧಾರ್ಮಿಕ ನಿರ್ಣಯಗಳು ಯಾವಾಗಲೂ ಒಂದೇ ಆಗಿರುತ್ತವೆ. ಆದರೆ, ಧರ್ಮ ಹಾಗೂ ಜಾತಿ ರಾಜಕೀಯದಿಂದಲೇ ರಾಜಕಾರಣ ಹಾಳಾಗುತ್ತಿದೆ. ಕೊಲೆಗಡಕನಾದರೂ ನಮ್ಮ ಜಾತಿಯವನು ಹೋಗಲಿ ಬಿಡಿ ಎನ್ನುವ ‍ಪ್ರವೃತ್ತಿ ಹೆಚ್ಚಾಗುತ್ತಿದೆ. ಇದು ತಪ್ಪು. ಮಠಾಧೀಶರು ಜಾತಿ, ಮತ, ಪಂಥ ರಹಿತವಾಗಿ ಕೇವಲ ದೇಶದ ಸರ್ವಜನರ ಹಿತದೃಷ್ಟಿಯಿಂದ ಆಲೋಚಿಸಬೇಕು.

– ಅಕ್ಕ ಅನ್ನಪೂರ್ಣ,ಲಿಂಗಾಯತ ಮಹಾಮಠ, ಬೀದರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.