ಬಸವಕಲ್ಯಾಣ: ’ಸರ್ಕಾರ ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದಂತೆಯೇ ವಚನ ಸಂದೇಶದ ಮೂಲಕ ಕಚೇರಿಗಳಲ್ಲಿನ ಭ್ರಷ್ಟಾಚಾರ ಮುಕ್ತಿಗೆ ಅಭಿಯಾನ ಆಯೋಜಿಸಬೇಕು' ಎಂದು ಸಾಹಿತಿ ಸಂಗಮೇಶ ತೋಗರಖೇಡೆ ಆಗ್ರಹಿಸಿದ್ದಾರೆ.
ತಾಲ್ಲೂಕಿನ ಗುಣತೀರ್ಥವಾಡಿ ಕಲ್ಯಾಣ ಮಹಾಮನೆಯಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಬಸವಜಯಂತಿ ಹಾಗೂ ಶರಣೆ ದಾನಮ್ಮನ ಬಳಗದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬಸವಪ್ರಭು ಸ್ವಾಮೀಜಿ ಮಾತನಾಡಿ, `ಬಸವಣ್ಣನವರನ್ನು ಬರೀ ಉತ್ಸವಗಳಿಗೆ ಸೀಮಿತಗೊಳಿಸದೆ ಅವರ ತತ್ವವನ್ನು ಅಚರಣೆಗೆ ತರಬೇಕು. ನುಡಿದಂತೆ ನಡೆಯಬೇಕು' ಎಂದು ಸಲಹೆ ನೀಡಿದರು.
ಪ್ರಿಯಾಂಕಾ ಪಸಾರಗೆ ಮಾತನಾಡಿ,`ಬಸವಣ್ಣನವರು ಮಹಿಳೆಯರಿಗೆ ಎಲ್ಲದರಲ್ಲೂ ಪಾಲುದಾರಿಗೆ ನೀಡಿ ಅವರ ಅಭ್ಯುದಯ ಬಯಸಿದರು' ಎಂದರು.
ನಿವೃತ್ತ ಅಧಿಕಾರಿ ಎಸ್.ದಿವಾಕರ, ಸಿದ್ದಪ್ಪ ಮುಗನೂರು, ಶಶಿಕಾಂತ ಮಾಳಿ, ಕೀರ್ತಿ ಓಂಕಾರ ದುಬಲಗುಂಡೆ, ಸಂಗಮೇಶ ಮಾಲಿಪಾಟೀಲ, ಬಸವಜ್ಯೋತಿ, ಭೀಮಶ್ರೀ ಮಾತನಾಡಿದರು. ಪಂಚಾಯತರಾಜ್ ಕಾಲೇಜು ಸಂಸ್ಥೆ ಅಧ್ಯಕ್ಷ ಸಿದ್ಧಾರ್ಥ ಬಾವಿದೊಡ್ಡಿ ಷಟಸ್ಥಲ ಧ್ವಜಾರೋಹಣಗೈದರು. ವಿಜಯಲಕ್ಷ್ಮಿ ಕೆಂಗನಾಳ ಅವರು ವಚನ ಸಂಗೀತ ಪ್ರಸ್ತುತಪಡಿಸಿದರು.
ಶರಣೆ ದಾನಮ್ಮನ ಬಳಗದ ಅಧ್ಯಕ್ಷೆಯಾಗಿ ನೇಮಕ ಆಗಿರುವ ಸುಮಿತ್ರಾ ದಾವಣಗಾವೆ, ಪ್ರಧಾನ ಕಾರ್ಯದರ್ಶಿ ರಾಣಿ ವಡ್ಡೆ ಅವರನ್ನು ಹಾಗೂ ಸಮಾಜ ಕಾರ್ಯಕರ್ತರಾದ ಪ್ರಭುಶೆಟ್ಟಿ, ತೀರ್ಥಪ್ಪ, ಅಡಿವೆಪ್ಪ ಪಟ್ನೆ, ಶಶಿಕಾಂತ ಕೊಡ್ಲಿ ಅವರನ್ನು ಸನ್ಮಾನಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.