ADVERTISEMENT

ಧರ್ಮ ಜಾಗೃತಿ ಮೂಡಿಸಿದ ಲಿಂಗಾನಂದ ಶ್ರೀ

ಕಲ್ಯಾಣ ಕರ್ನಾಟಕ ಪ್ರತಿಷ್ಠಾಪನದ ಸಂಸ್ಥಾಪಕ ಅಧ್ಯಕ್ಷ ಬಸವಕುಮಾರ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 6 ಜುಲೈ 2022, 15:22 IST
Last Updated 6 ಜುಲೈ 2022, 15:22 IST
ಬೀದರ್‌ನ ಅಕ್ಕಮಹಾದೇವಿ ಕಲ್ಯಾಣ ಮಂಟಪದಲ್ಲಿ ಚಟ್ನಳ್ಳಿಯ ಅಲ್ಲಪಮಪ್ರಭು ಮಠದ ವತಿಯಿಂದ ಆಯೋಜಿಸಿದ್ದ ಲಿಂಗಾನಂದ ಸ್ವಾಮೀಜಿ ಲಿಂಗೈಕ್ಯ ಸಂಸ್ಮರಣೆ ಕಾರ್ಯಕ್ರಮದಲ್ಲಿ ಕಲ್ಯಾಣ ಕರ್ನಾಟಕ ಪ್ರತಿಷ್ಠಾಪನದ ಸಂಸ್ಥಾಪಕ ಅಧ್ಯಕ್ಷ ಬಸವಕುಮಾರ ಪಾಟೀಲ ಅವರಿಗೆ ಬಸವಧರ್ಮ ಸೇವಾ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು
ಬೀದರ್‌ನ ಅಕ್ಕಮಹಾದೇವಿ ಕಲ್ಯಾಣ ಮಂಟಪದಲ್ಲಿ ಚಟ್ನಳ್ಳಿಯ ಅಲ್ಲಪಮಪ್ರಭು ಮಠದ ವತಿಯಿಂದ ಆಯೋಜಿಸಿದ್ದ ಲಿಂಗಾನಂದ ಸ್ವಾಮೀಜಿ ಲಿಂಗೈಕ್ಯ ಸಂಸ್ಮರಣೆ ಕಾರ್ಯಕ್ರಮದಲ್ಲಿ ಕಲ್ಯಾಣ ಕರ್ನಾಟಕ ಪ್ರತಿಷ್ಠಾಪನದ ಸಂಸ್ಥಾಪಕ ಅಧ್ಯಕ್ಷ ಬಸವಕುಮಾರ ಪಾಟೀಲ ಅವರಿಗೆ ಬಸವಧರ್ಮ ಸೇವಾ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು   

ಬೀದರ್: ಧರ್ಮದ ಕಡೆ ಜನರು ಬರದಿರುವ ಸಂದರ್ಭದಲ್ಲಿ ಧರ್ಮವನ್ನೇ ಜನರತ್ತ ಕರೆದುಕೊಂಡು ಹೋಗಿ ಧರ್ಮ ಜಾಗೃತಿ ಮೂಡಿಸಿದ ಶ್ರೇಯ ಜಗದ್ಗುರು ಲಿಂಗಾನಂದ ಸ್ವಾಮೀಜಿ ಅವರಿಗೆ ಸಲ್ಲುತ್ತದೆ ಎಂದು ಕಲ್ಯಾಣ ಕರ್ನಾಟಕ ಪ್ರತಿಷ್ಠಾಪನದ ಸಂಸ್ಥಾಪಕ ಅಧ್ಯಕ್ಷ ಬಸವಕುಮಾರ ಪಾಟೀಲ ಹೇಳಿದರು.

ಇಲ್ಲಿಯ ಶಿವನಗರ ಬಡಾವಣೆಯ ಅಕ್ಕಮಹಾದೇವಿ ಕಲ್ಯಾಣ ಮಂಟಪದಲ್ಲಿ ಚಟ್ನಳ್ಳಿಯ ಅಲ್ಲಪಮಪ್ರಭು ಮಠದ ವತಿಯಿಂದ ಆಯೋಜಿಸಿದ್ದ ಲಿಂಗಾನಂದ ಸ್ವಾಮೀಜಿ ಲಿಂಗೈಕ್ಯ ಸಂಸ್ಮರಣೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ‘ಬಸವಧರ್ಮ ಸೇವಾರತ್ನ’ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.

ಚಟ್ನಳ್ಳಿಯ ಪೀಠಾಧಿಪತಿ ಸಿದ್ಧೇಶ್ವರಾನಂದ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಗದುಗಿನ ಅಭಿನವ ಎಚ್ಚರೇಶ್ವರ ಸ್ವಾಮೀಜಿ ಸಮ್ಮುಖ ವಹಿಸಿದ್ದರು. ಅಧ್ಯಕ್ಷತೆ ವಹಿಸಿದ್ದ ಬಸವೇಶ್ವರ ಸೇವಾ ಸಂಘ ಕಲಬುರಗಿಯ ಗೌರವ ಸಲಹೆಗಾರ ಚಂದ್ರಕಾಂತ ಬಿರಾದಾರ ಮಾತನಾಡಿದರು.

ADVERTISEMENT

ವಕೀಲ ವಿಜಯಕುಮಾರ ಪಾಟೀಲ ಷಟಸ್ಥಲ ಧ್ವಜಾರೋಹಣ ನೆರವೇರಿಸಿದರು. ಶಶಿರೇಖಾ ಶಿವಕುಮಾರ ಎಖೆಳ್ಳಿಕರ್ ಬಸವ ಗುರುಪೂಜೆ ನೆರವೇರಿಸಿದರು. ಗುಲಬರ್ಗಾ ವಿಶ್ವವಿದ್ಯಾಲಯದ ಪ್ರಾದೇಶಿಕ ನಿರ್ದೇಶಕ ಸಂಗಮೇಶ ಹಿರೇಮಠ ಕಾರ್ಯಕ್ರಮ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಕಲ್ಯಾಣ ಕರ್ನಾಟಕ ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷ ಬಸವಕುಮಾರ ಪಾಟೀಲರಿಗೆ ಬಸವ ಧರ್ಮದ ಸೇವಾರತ್ನ ಪ್ರಶಸ್ತಿ, ಬಾಗಲಕೋಟೆ ಜಿಲ್ಲೆಯ ಜಮಖಂಡಿಯ ಪ್ರೊ.ಬಸವರಾಜ ಕಡ್ಡಿ, ಬಸವತೀರ್ಥ ವಿದ್ಯಾಪೀಠ ಹಳ್ಳಿಕೇಡ(ಬಿ)ಯ ಗುಂಡಯ್ಯ ತೀರ್ಥ, ಚಿಮ್ಮಾ ಇದಲಾಯಿಯ ಲಿಂಗಾಯತ ಸಮಾಜ ಅಧ್ಯಕ್ಷ ವಿಶ್ವನಾಥ ಬಸವಣ್ಣಪ್ಪ, ಕಲವಾಡಿಯ ಮಹಾತ್ಮಾ ಗಾಂಧಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಜಯರಾಜ ದಾಬಶೆಟ್ಟಿ, ಸರ್ಕಾರಿ ಪ್ರೌಢಶಾಲೆ ನಾಗಮಾರಪಳ್ಳಿಯ ಮುಖ್ಯ ಶಿಕ್ಷಕ ತುಳಸಿರಾಮ ಬೇಂದ್ರ, ಹಾರೂರಗೇರಿಯ ನಿವೃತ್ತ ಮುಖ್ಯ ಶಿಕ್ಷಕಿ ಸುಶೀಲಾ ಹಾವನೂರ ರವರಿಗೆ ಕಾಯಕರತ್ನ ಪ್ರಶಸ್ತಿ, ಶಶಿಕಲಾ ಅಪ್ಪಾರವ್ ನಾವಡೆ, ಮಹಾನಂದಾ ಪಂಚಯ್ಯ ಸ್ವಾಮಿ ಮತ್ತು ಜ್ಯೋತಿ ಸಿದ್ರಾಮ ಅವರಿಗೆ ಆದರ್ಶ ಶರಣ ದಂಪತಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಪ್ರೊ.ಬಸವರಾಜ ಕಡ್ಡಿ, ಸಂತೋಷಕುಮಾರ ಹೂಗಾರ, ಸೋಮಲಿಂಗಯ್ಯಾ ಗಣಾಚಾರಿ, ಶಾಂತಲಿಂಗ ಸಾವಳಗಿ, ಪ್ರಭುಶೆಟ್ಟಿ ಬಾಬುರಾವ್, ದಿಲೀಪಕುಮಾರ ಬೋನೆ, ಕಾಶೀನಾಥ್ ಚಿದ್ರೆ, ನಾಗಣ್ಣಾ ಸಾವಳೆ, ನಂದಕುಮಾರ ಪಾಟೀಲ, ಹಣಮಂತಪ್ಪ ಪಾಪಡೆ, ನಿಜಲಿಂಗಯ್ಯ ಚಿದ್ರೆಮಠ, ವಿಶ್ವನಾಥ ಉಪ್ಪೆ, ಪಂಡಿತ ಬಾಳೂರೆ, ಶೋಭಾ ಜಯರಾಜ ಇದ್ದರು. ಮಲ್ಲಿಕಾರ್ಜುನ ಸಂಗಮಕರ್ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.