ADVERTISEMENT

ಬೀದರ್‌ | ಅಕ್ರಮ ಆಸ್ತಿ ಗಳಿಕೆ ಆರೋಪ: ಎಡಿ ಮನೆ, ಕಚೇರಿಯಲ್ಲಿ ಶೋಧ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2025, 7:13 IST
Last Updated 15 ಅಕ್ಟೋಬರ್ 2025, 7:13 IST
<div class="paragraphs"><p>ಬೀದರ್‌ನ ಗುರುನಗರದಲ್ಲಿರುವ ತಮ್ಮ ನಿವಾಸದಲ್ಲಿ ಲೋಕಾಯುಕ್ತ ಪೊಲೀಸರು ಶೋಧ ಕೈಗೊಂಡ ವೇಳೆ&nbsp;ಔರಾದ್‌ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಧೂಳಪ್ಪ ಅವರು ಒಂದು ಬದಿಯಲ್ಲಿ ಕುಳಿತಿದ್ದರು</p></div>

ಬೀದರ್‌ನ ಗುರುನಗರದಲ್ಲಿರುವ ತಮ್ಮ ನಿವಾಸದಲ್ಲಿ ಲೋಕಾಯುಕ್ತ ಪೊಲೀಸರು ಶೋಧ ಕೈಗೊಂಡ ವೇಳೆ ಔರಾದ್‌ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಧೂಳಪ್ಪ ಅವರು ಒಂದು ಬದಿಯಲ್ಲಿ ಕುಳಿತಿದ್ದರು

   

ಬೀದರ್: ಜಿಲ್ಲೆಯ ಔರಾದ್‌ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಧೂಳಪ್ಪ ಅವರ ಮನೆ ಮತ್ತು ಕಚೇರಿಯಲ್ಲಿ ಲೋಕಾಯುಕ್ತ ಪೊಲೀಸರು ಮಂಗಳವಾರ ಶೋಧ ಕಾರ್ಯ ಕೈಗೊಂಡರು.

ಧೂಳಪ್ಪ ಅವರಿಗೆ ಸೇರಿದ ಇಲ್ಲಿನ ಗುರುನಗರದಲ್ಲಿನ ಮನೆ, ಔರಾದ್‌ ಕೃಷಿ ಇಲಾಖೆಯ ಎಡಿ ಕಚೇರಿ, ಮುಧೋಳ ಕೃಷಿ ಇಲಾಖೆಯ ಕಚೇರಿ ಹಾಗೂ ಭಾಲ್ಕಿಯ ಕರಡ್ಯಾಳದ ಕಚೇರಿಯಲ್ಲಿ ದಾಖಲೆ ಪತ್ರಗಳನ್ನು ಪರಿಶೀಲಿಸಿದ್ದಾರೆ. ಗುರುನಗರದ ಮನೆಯಲ್ಲಿ ಲೋಕಾಯುಕ್ತ ಪೊಲೀಸರು ದಾಖಲೆಗಳನ್ನು ಪರಿಶೀಲಿಸುವಾಗ ಧೂಳಪ್ಪ ಅವರು ಅಲ್ಲೇ ಇದ್ದರು. ಅವರ ಹಾಗೂ ಕುಟುಂಬ ಸದಸ್ಯರ ಮೊಬೈಲ್‌ಗಳನ್ನು ವಶಕ್ಕೆ ಪಡೆದಿದ್ದರು.

ADVERTISEMENT

ಲೋಕಾಯುಕ್ತ ಎಸ್‌ಪಿ ಸಿದ್ದರಾಜು ಮಾರ್ಗದರ್ಶನದಲ್ಲಿ, ಡಿವೈಎಸ್ಪಿ ಹನುಮಂತ ರೆಡ್ಡಿ ನೇತೃತ್ವದಲ್ಲಿ ಶೋಧ ಕಾರ್ಯ ಕೈಗೊಂಡಿದ್ದಾರೆ. ಧೂಳಪ್ಪ ಅವರು ಅಕ್ರಮ ಆಸ್ತಿ ಗಳಿಸಿದ್ದಾರೆ ಎಂದು ಲೋಕಾಯುಕ್ತ ಪೊಲೀಸರಿಗೆ ದೂರು ಸಲ್ಲಿಸಿದ ಹಿನ್ನೆಲೆಯಲ್ಲಿ ಈ ಶೋಧ ಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.